ನ್ಯೂಸ್ ನಾಟೌಟ್: ಕ್ರೊಯೇಷಿಯಾ ವಿದೇಶಾಂಗ ಸಚಿವರ ಬರ್ಲಿನ್ ನಲ್ಲಿ ಜರ್ಮನಿಯ ಮಹಿಳಾ ಪ್ರತಿನಿಧಿಗೆ ಚುಂಬಿಸಲು ಯತ್ನಿಸಿದ್ದು, ಇದು ವಿವಾದಕ್ಕೆ ಕಾರಣವಾಗಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಕ್ರೊಯೇಷಿಯಾದ ವಿದೇಶಾಂಗ ಸಚಿವ ಗಾರ್ಡನ್ ಗ್ರಿಲಿಕ್ ರಾಡ್ಮನ್ ಇಯು ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಸಮ್ಮೇಳನದಲ್ಲಿ ಗ್ರೂಪ್ ಫೋಟೋ ತೆಗೆಯುವ ವೇಳೆ ತಮ್ಮ ಜರ್ಮನ್ ಪ್ರತಿನಿಧಿ ಅನಲೆನಾ ಬಿಯರ್ಬಾಕ್ ಎಂಬಾಕೆಯ ಕೆನ್ನೆಗೆ ಮುತ್ತಿಡಲು ಯತ್ನಿಸಿದ್ದು, ಸಚಿವೆ ತಪ್ಪಿಸಿಕೊಂಡಿದ್ದಾರೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವೀಡಿಯೊದಲ್ಲಿ 65 ವರ್ಷದ ರಾಡ್ಮನ್ 42 ವರ್ಷದ ಬರೆಬಾಕ್ ಕಡೆಗೆ ಕೈಕುಲುಕಲು ನಡೆದುಕೊಂಡು ಹೋಗುತ್ತಿರುವುದನ್ನು ಕಾಣುತ್ತದೆ. ಇದರ ನಂತರ, ಅವನು ಇದ್ದಕ್ಕಿದ್ದಂತೆ ಅವಳ ಕೆನ್ನೆಗೆ ಮುತ್ತಿಡಲು ಪ್ರಯತ್ನಿಸುತ್ತಾನೆ, ಆದರೆ ಜರ್ಮನ್ ವಿದೇಶಾಂಗ ವ್ಯವಹಾರಗಳ ಸಚಿವೆ ಮುಖ ತಿರುಗಿಸಿ ದೂರ ನಿಲ್ಲುತ್ತಾರೆ.
ಈ ಕ್ರಮವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಸಚಿವ ಪ್ರತಿಕ್ರಿಯಿಸಿದ್ದು, “ಸಮಸ್ಯೆ ಏನು ಎಂದು ನನಗೆ ತಿಳಿದಿಲ್ಲ… ನಾವು ಯಾವಾಗಲೂ ಪರಸ್ಪರ ಆತ್ಮೀಯವಾಗಿ ಸ್ವಾಗತಿಸುತ್ತೇವೆ. ಇದು ಸಹೋದ್ಯೋಗಿಯ ಬಗೆಗಿನ ಆತ್ಮೀಯ ವರ್ತನೆಯಷ್ಟೆ. ಇದನ್ನು ಏಕೆ ತಪ್ಪಾಗಿ ತೆಗೆದುಕೊಳ್ಳಲಾಗುತ್ತಿದೆ ಎಂದು ನನಗೆ ತಿಳಿದಿಲ್ಲ ಎಂದಿದ್ದಾರೆ.