ನ್ಯೂಸ್ ನಾಟೌಟ್: ನಾಗರ ಹಾವಿನ ಜೊತೆ ಅಜಾಗರೂಕತೆಯಿಂದ ವರ್ತಿಸಲು ಹಲವರು ಹೇದರಿಕೊಳ್ಳುವುದು ಸಹಜ, ಆದರೆ ಇಲ್ಲೊಬ್ಬ ರೈತ ಹಾವಿಗೆ ಕಾಟ ನೀಡಿದ 12 ದಿನದಲ್ಲೇ ಹಾವು ಕಡಿದು ಕೊನೆಯುಸಿರೆಳೆದಿದ್ದಾನೆ.
ಅಕ್ಟೋಬರ್ 29ರಂದು ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ದೇವರಗುಡ್ಡೆನಹಳ್ಳಿಯಲ್ಲಿ ಯುವ ರೈತನೊರ್ವನಿಗೆ ವಿಷಪೂರಿತ ಹಾವೊಂದು ಕಚ್ಚಿ ಕೊನೆಯುಸಿರೆಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇದರಿಂದ ಹಾವು ದ್ವೇಷ ಸಾಧಿಸಿತೇ ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ಅಸುನೀಗಿದ ವ್ಯಕ್ತಿ ಸಾಯುವುದಕ್ಕೆ 12 ದಿನ ಮುಂಚಿತವಾಗಿ ಹಾವನ್ನು ಸತಾಯಿಸಿದ ವೀಡಿಯೋ ಆತನ ಮೊಬೈಲ್ ನಲ್ಲಿ ಪತ್ತೆಯಾಗಿದೆ. ಇದನ್ನು ನೋಡಿದ ಕುಟುಂಬಸ್ಥರು, ಗೆಳೆಯರು ಹಾವು ಹುಡುಕಿಕೊಂಡು ಬಂದು ಕಚ್ಚಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಆದರೆ ಕೃಷಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಹಾವು ಕಚ್ಚಿ ಯುವಕ ಕೊನೆಯುಸಿರೆಳೆದನಾ ಅಥವಾ ಹಾವಿಗೆ ತೊಂದರೆ ಕೊಟ್ಟಿದ್ದಕ್ಕೆ ಹೀಗಾಯ್ತೋ ಎಂಬ ಅನುಮಾನ ಹೆಚ್ಚಾಗಿದ್ದು, ಆತ ಉಪದ್ರ ಕೊಟ್ಟ ಬಗ್ಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಕ್ಟೋಬರ್ 29ರಂದು, ದೇವರಗುಡ್ಡೇನಹಳ್ಳಿ ಗ್ರಾಮದ ಅಭಿಲಾಷ್ ಎಂಬ ರೈತ ಹಾವು ಕಚ್ಚಿ ಕೊನೆಯುಸಿರೆಲೆದಿದ್ದ ಎಂದು ತಿಳಿದು ಬಂದಿದೆ. ಇದಕ್ಕೆ ಸ್ಥಳೀಯ ಶಾಸಕ, ಮಾಜಿ ಸಚಿವ ರೇವಣ್ಣ ಕೂಡಾ ನೋವಿನ ಸಂಗತಿ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿ ಪರಿಹಾರ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದ್ದರು.
ಆತನ ಗೆಳೆಯರು ಹೇಳುವ ಪ್ರಕಾರ ಹಾವು ಕಚ್ಚಿವ 12 ದಿನ ಮುನ್ನ ಅಭಿಲಾಷ್ ಎಂದಿನಂತೆ ತನ್ನ ತೋಟಕ್ಕೆ ನೀರು ಹಾಯಿಸಲು ಹೋಗಿದ್ದ. ಈ ವೇಳೆ ನಾಗರಹಾವೊಂದು ಪೈಪ್ ನಿಂದ ಹೊರಬಂದಿದೆ. ಅದನ್ನು ಅದರ ಪಾಡಿಗೆ ಹೋಗಲು ಬಿಡದೆ ಅಭಿಲಾಷ್ ಅದನ್ನು ಕೆಣಕಿ ಸ್ವಲ್ಪ ಸಮಯ ಕೀಟಲೆ ಮಾಡಿದ್ದಾನೆ. ತುಂಬಾ ಹೊತ್ತಿನ ವರೆಗೆ ಸತಾಯಿಸಿದ್ದಾನೆ. ಮಾತ್ರವಲ್ಲದೆ ಪೈಪ್ ನಿಂದ ಅದನ್ನು ಘಾ * ಸಿಗೊಳಿಸಿದ್ದ ಮತ್ತು ಅದನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ ಎಂದು ಹೇಳಿದ್ದಾರೆ.
ಈ ಹಾವು ತಾನು ಅನುಭವಿಸಿದ ಹಿಂಸೆಗೆ ಸೇಡು ತೀರಿಸಿಕೊಂಡಿರಬಹುದು ಎಂಬ ಗ್ರಾಮಸ್ಥರು ಹೇಳುತ್ತಿದ್ದಾರೆ. ಹಾವಿನ ದ್ವೇಷ 12 ವರ್ಷ ಎಂಬ ಪೂರ್ವಿಕರ ಮಾತಿಗೆ ಪುಷ್ಟಿ ನೀಡುವಂತಿದ್ದು, 12 ವರ್ಷದ ಬದಲಿಗೆ 12 ದಿನಕ್ಕೆ ತನ್ನ ಸೇಡನ್ನು ತೀರಿಸಿಕೊಂಡಿದೆ ಎನ್ನಲಾಗಿದೆ.