ನ್ಯೂಸ್ ನಾಟೌಟ್ :ಈಗ ಎಲ್ಲವೂ ಆನ್ಲೈನ್ಮಯವಾಗಿದೆ.ವಸ್ತುಗಳನ್ನು ಖರೀದಿ ಮಾಡುವುದರಿಂದ ಹಿಡಿದು ತಿನ್ನುವಲ್ಲಿಯವರೆಗೂ ಆನ್ಲೈನ್ನ್ನೇ ಡಿಪೆಂಡ್ ಆಗಿರುವವರ ಸಂಖ್ಯೆ ಹೆಚ್ಚಾಗಿದೆ.ಆದರೆ ಕೆಲವೊಂದು ಸಲ ಆರ್ಡರ್ ಮಾಡಿರುವ ವಸ್ತುವಿಗೂ ನಮ್ಮ ಕೈ ಸೇರಿದ ವಸ್ತುಗಳಿಗೂ ಬಹಳಷ್ಟು ವ್ಯತ್ಯಾಸಗಳಿರೋದನ್ನು ಕೇಳಿದ್ದೇವೆ.ಆದರೆ ಇಲ್ಲೊಬ್ಬ ವ್ಯಕ್ತಿಗೆ ಮಿಲ್ಕ್ ಶೇಕ್ ಬದಲು ಭರ್ತಿ ಒಂದು ಗ್ಲಾಸ್ ಮೂತ್ರ ಸಿಕ್ಕಿರುವ ಘಟನೆ ವರದಿಯಾಗಿದೆ..!
ಸದ್ಯ ಈ ವಿಷಯವನ್ನು ಆತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಜನರೂ (Viral News) ಈ ಬಗ್ಗೆ ಶಾಕ್ ಆಗಿದ್ದಾರೆ.ಹೌದು, ಸಾರಾಟೋಗ ಸ್ಪ್ರಿಂಗ್ಸ್ ನಿವಾಸಿಯಾದ ಕ್ಯಾಲೆಬ್ ವುಡ್ಸ್ ಎಂಬುವರು ಗ್ರಬ್ಹಬ್ (GrubHub) ಎಂಬ ಆ್ಯಪ್ ಮೂಲಕ ಚಿಕ್-ಫಿಲ್-ಎ ಎಂಬ ಹೋಟೆಲ್ನಿಂದ ಫ್ರೈಸ್ (ಫಿಂಗರ್ ಚಿಪ್ಸ್), ಮಿಲ್ಕ್ ಶೇಕ್ ಆರ್ಡರ್ ಮಾಡಿದ್ದಾರೆ. ಇದಾದ ಬಳಿಕ ಗ್ರಬ್ಹಬ್ ಫುಡ್ ಡೆಲಿವರಿ ಬಾಯ್ ಇವರ ಮನೆಗೆ ತಂದು ಪಾರ್ಸೆಲ್ ಕೊಟ್ಟಿದ್ದಾನೆ. ಅಷ್ಟೊತ್ತಿಗಾಗಲೇ ಹಸಿದು ಕೂತಿದ್ದ ಕ್ಯಾಲೆಬ್ ವುಡ್ ಫ್ರೈಸ್ ತಿಂದಿದ್ದಾರೆ. ಇದಾದ ಬಳಿಕ ತಂಪು ತಂಪು ಪಾನೀಯ ಕುಡಿಬೇಕು ಅನಿಸಿದೆ.ಆದರೆ ಅವರು ಗ್ಲಾಸ್ ಓಪನ್ ಮಾಡಿದಾಗಲೇ ಗೊತ್ತು ಗ್ಲಾಸ್ನಲ್ಲಿರುವುದು ಮಿಲ್ಕ್ ಶೇಕ್ ಅಲ್ಲ, ಮೂತ್ರ ಎಂದು..!
ಕ್ಯಾಲೆಬ್ ವುಡ್ಸ್ ಅವರು ಗ್ಲಾಸ್ನಲ್ಲಿರುವ ಪಾನೀಯವನ್ನು ಕುಡಿದ ಬಳಿಕವೇ ಗೊತ್ತಾಗಿದ್ದು, ಅದು ಮಿಲ್ಕ್ಶೇಕ್ ಅಲ್ಲ ಮೂತ್ರ ಎಂದು.ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು “ನಾನು ಗ್ಲಾಸ್ಗೆ ಸ್ಟ್ರಾ ಹಾಕಿ ಕುಡಿಯಲು ಮುಂದಾದೆ. ಒಂದೆರಡು ಸಿಪ್ ಕುಡಿದ ಬಳಿಕ ಅದು ಮಿಲ್ಕ್ಶೇಕ್ ಅಲ್ಲ, ಮೂತ್ರ ಎಂಬುದು ಗೊತ್ತಾಯಿತು. ನಂತರ ಗ್ರಬ್ಹಬ್ ಡ್ರೈವರ್ಗೆ ಕರೆ ಮಾಡಿ ವಿಷಯ ತಿಳಿಸಿದೆ” ಎಂದು ಕ್ಯಾಲೆಬ್ ವುಡ್ಸ್ ತಿಳಿಸಿದ್ದಾರೆ. ಇವರಿಗೆ ಆದ ಭಯಾನಕ ಅನುಭವದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮರುಕ ವ್ಯಕ್ತವಾಗಿದೆ. ಒಂದಷ್ಟು ಜನ ಆನ್ಲೈನ್ ಡೆಲಿವರಿ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಭಾರತದಲ್ಲಿ ಕೂಡ ಗ್ರಾಹಕರೊಬ್ಬರಿಗೆ ಹೀಗೆಯೇ ಆಗಿತ್ತು. ಗ್ರಾಹಕರೊಬ್ಬರು 1 ಲಕ್ಷ ರೂ. ಮೌಲ್ಯ ಸೋನಿ ಟಿವಿಯನ್ನು (Sony TV) ಪ್ಲಿಫ್ಕಾರ್ಟ್ (Flipkart) ಮೂಲಕ ಆರ್ಡರ್ ಮಾಡಿದ್ದರು. ಆದರೆ, ಅವರಿಗೆ ಬೇರೆ ಬ್ರ್ಯಾಂಡಿನ ಕಳಪೆ ಟಿವಿಯನ್ನು ನೀಡಲಾಗಿತ್ತು!.ಇಂತಹ ಅನೇಕ ಘಟನೆಗಳು ಆಗಿದ್ದು,ಈ ಆನ್ಲೈನ್ ಡೆಲಿವರಿ ಸಂಸ್ಥೆ ಎಡವಟ್ಟುಗಳಿಂದ ಜನ ಎಚ್ಚೆತ್ತುಕೊಳ್ಳುವುದು ಒಳಿತು.