ನ್ಯೂಸ್ ನಾಟೌಟ್ : ಕರಿಕೆ ಗ್ರಾಮ ಪಂಚಾಯತಿ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.ಈ ವೇಳೆ ಪ್ರೌಢ ಶಾಲೆಯಿಂದ ಎಳ್ಳು ಕೊಚ್ಚಿ ಪೇಟೆ ವರೆಗೆ ಮೆರವಣಿಗೆ ನಡೆಯಿತು.
ಕರಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಚಂದ್ರನ್ ನಾಯರ್ ಎನ್. ಧ್ವಜಾರೋಹಣ ನೆರವೇರಿಸಿದರು. ಬಳಿಕ ಕನ್ನ ಡ ರಾಜ್ಯೋತ್ಸವ ಆಚರಣೆ, ಭಾಷೆಯ ಮಹತ್ವವನ್ನು ತಿಳಿಸಿದರು. ಪಂಚಾಯತಿ ಉಪಾಧ್ಯಕ್ಷ ಕಲ್ಪನಾ ಜಗದೀಶ್, ಪ೦ಚಾಯತಿ ಸದಸ್ಯರುಗಳಾದ ಕಟ್ಟಕೋಡಿ ದೇವದತ್ತ, ಆಯಿಷಾ, ಜಯಶ್ರೀ ಜನಾರ್ದನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು, ಕರಿಕೆ ಪ್ರೌಢ ಶಾಲೆಯ ಶಿಕ್ಷಕರು , ಪ್ರೌಢ ಶಾಲೆ ಯ ವಿದ್ಯಾಥಿ೯ಗಳು , SDMCಸದಸ್ಯರು, ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ವಿದ್ಯಾಥಿ೯ಗಳು, SDMC ಪದಾಧಿಕಾರಿಗಳು, ಸಹಕಾರ ಸಂಘದ ಉಪಾಧ್ಯಕ್ಷ ಎಂ.ಎಂ ರೆಲಸನ್, ನಿದೇ೯ಶಕರು, ಅಂಗನವಾಡಿ ಕಾಯ೯ಕರ್ತರು, ಪಂಚಾಯತಿ ಸಿಬ್ಬಂದಿ ವಗ೯, ಸಾವ೯ಜನಿಕರು ಭಾಗವಹಿಸಿದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ಪಿ.ಗಣಪತಿ ಎಲ್ಲರನ್ನು ಸ್ವಾಗತಿಸಿದರು.