ನ್ಯೂಸ್ ನಾಟೌಟ್: ಭಾರತದಲ್ಲಿ ಮದುವೆ ಸಮಾರಂಭದಲ್ಲಿ ವರನಿಂದ ಹಣ ಪಡೆಯಲು ವಧುವಿನ ಕಡೆಯವರು ಸಂಪ್ರದಾಯವಾಗಿ ಮತ್ತು ತಮಾಷೆಗೆ ತುಂಬಾನೇ ಪ್ರಯತ್ನ ಮಾಡುವುದನ್ನು ನಾವು ನೋಡಿರುತ್ತೇವೆ.
ಮದುವೆಯ ನಂತರದಲ್ಲಿ ಚೀನಾದಲ್ಲಿ ಸೊಸೆಯನ್ನು, ನವ ವಧುವನ್ನು ಕರೆದುಕೊಂಡು ಹೋಗಲು ಹೊರಟಿದ್ದ ವರನ ಕಾರನ್ನು ನೂರಾರು ಗ್ರಾಮಸ್ಥರು ತಡೆದಿದ್ದಾರೆ. ಚೀನಾ ಮಾದ್ಯಮವೊಂದರ ವರದಿ ಪ್ರಕಾರ ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದ ತೈಝೌ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ ಮತ್ತು ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ವಯಸ್ಸಾದ ನಿವಾಸಿಗಳ ದೊಡ್ಡ ಗುಂಪನ್ನು ವರನ ಕಾರನ್ನು ಸುತ್ತುವರೆದಿರುವ ಮತ್ತು ಅವರಿಂದ ಹಣ ಮತ್ತು ಸಿಗರೇಟ್ಗಳನ್ನು ಕೇಳುತ್ತಿರುವ ದೃಶ್ಯವನ್ನು ಕಾಣುತ್ತವೆ. ಈ ದೃಶ್ಯಾವಳಿಯು ವಿವಾದಾತ್ಮಕ ವಿವಾಹ ಪದ್ಧತಿಗಳ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತವೆ.
ಅಲ್ಲಿನ ಸಂಪ್ರದಾಯದ ಪ್ರಕಾರ, ವರನ ಸಂಬಂಧಿಕರು ವಧುವಿನ ಗ್ರಾಮಸ್ಥರಿಗೆ ಅವರು ಕೇಳುವುದನ್ನು ಕೊಡಬೇಕು, ಅದು ಸಕ್ಕರೆ ಅಥವಾ ಸಿಗರೇಟ್ನಿಂದ ಹಿಡಿದು ಹಣವೂ ಆಗಿರಬಹುದು ಎಂದು ವರದಿ ತಿಳಿಸಿದೆ. ಅವರು ಸ್ವೀಕರಿಸಿದ್ದುದರಿಂದ ತೃಪ್ತರಾಗದಿದ್ದರೆ, ವರನಿಗೆ ತನ್ನ ವಧುವನ್ನು ನೋಡಲು ಅನುಮತಿಯನ್ನು ಗ್ರಾಮಸ್ಥರು ನಿರಾಕರಿಸಬಹುದು ಅಥವಾ ವರನನ್ನು ಅಲ್ಲಿಯೇ ತಡೆಯುತ್ತಾರೆ ಎನ್ನಲಾಗಿದೆ.
ಈ ಆಚರಣೆಯನ್ನು ಮ್ಯಾಂಡರಿನ್ನಲ್ಲಿ ಇಯಾನ್ ಮೆನ್ ಎಂದು ಕರೆಯಲಾಗುತ್ತದೆ, ಇದರರ್ಥ “ಬಾಗಿಲ ಒಳಗೆ ಹೋಗುವುದನ್ನು ನಿರ್ಬಂಧಿಸುವುದು” ಎಂದರ್ಥ ಎನ್ನಲಾಗಿದೆ.
ತನ್ನ ವಧುವಿನ ಕಡೆಗೆ ವರನ ಸಮರ್ಪಣೆ ಮತ್ತು ಅವಳನ್ನು ಮದುವೆಯಾಗಲು ಅವನು ಹೇಗೆಲ್ಲಾ ಪ್ರಯತ್ನ ಮಾಡುತ್ತಾನೆ ಎಂಬುದನ್ನು ಪರಿಶೀಲಿಸುವುದು ಈ ಸಂಪ್ರದಾಯದ ಹಿಂದಿನ ಉದ್ದೇಶವಾಗಿದೆ ಎಂದು ಅಲ್ಲಿನ ಜನ ಹೇಳಿದ್ದಾರೆ ಎನ್ನಲಾಗಿದೆ.