ಕರಾವಳಿಸುಳ್ಯ

ಸುಳ್ಯ: ಆತ್ಮಹತ್ಯೆ ಮಾಡಿಕೊಂಡ ಮಗಳ ಕಣ್ಣುಗಳನ್ನು ದಾನ ಮಾಡಿದ ಪೋಷಕರು,ಸಾ* ವಿ*ನ ನೋವಿನಲ್ಲೂ ಸಾರ್ಥಕತೆ..!

ನ್ಯೂಸ್ ನಾಟೌಟ್ : ನೇತ್ರದಾನ ಸರ್ವಕಾಲಕ್ಕೂ ಶ್ರೇಷ್ಠದಾನ. ಪ್ರತಿಯೊಬ್ಬರ ತಮ್ಮ ಅಮೂಲ್ಯವಾದ ದೃಷ್ಟಿಯನ್ನು ತಮ್ಮ ಜೀವಿತಾವಧಿಯ ನಂತರ ಮತ್ತಿಬ್ಬರಿಗೆ ನೀಡಬಹುದು. ಆ ಮೂಲಕ ತಮ್ಮ ಕಣ್ಣುಗಳನ್ನು ತಮ್ಮ ನಂತರವು ಈ ಸುಂದರವಾದ ಪ್ರಪಂಚವನ್ನು ನೋಡಲು ಬಳಸಬಹುದು.ನೇತ್ರದಾನ ಮಾಡುವುದರ ಮೂಲಕ ನಾವು ಹುಟ್ಟಿನಿಂದಲೇ ಜಗತ್ತೆಂದರೆ ಏನೆಂದು ಗೋಚರಿಸದ ಜನರಿಗೆ ಜಗತ್ತನ್ನು ತೋರಿಸುವ ಮಹಾ ಪ್ರಯತ್ನವಾಗಿದೆ. ಮನುಷ್ಯ ತಾನು ಸತ್ತ ಮೇಲೂ ಬದುಕಲು ಹಲವು ದಾರಿಗಳಿವೆ. ಇವುಗಳಲ್ಲಿ ಈ ನೇತ್ರದಾನವೂ ಒಂದು ಪ್ರಮುಖ ದಾರಿಯಾಗಿದೆ.

ಇದೀಗ ಬೆಂಗಳೂರಿನಲ್ಲಿ ಇತ್ತಿಚೆಗಷ್ಟೇ ಆತ್ಮಹತ್ಯೆ ಮಾಡಿಕೊಂಡ ಶ್ರೀಮತಿ ಐಶ್ವರ್ಯಾಳ ಮನೆಯವರು ಆಕೆಯ ನೇತ್ರಗಳನ್ನು ದಾನ ಮಾಡುವ ಮೂಲಕ ನೋವಿನಲ್ಲೂ ಸಾರ್ಥಕತೆ ಮೆರೆದ ಘಟನೆ ವರದಿಯಾಗಿದೆ.ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆ ಸುಬ್ರಹ್ಮಣ್ಯ ಗೌಡ ಹಾಗೂ ಉಷಾ ದಂಪತಿಯ ಪುತ್ರಿ ಐಶ್ವರ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.ಅವರನ್ನು ಉದ್ಯಮಿ ರಾಜೇಶ್ ಎಂಬವರಿಗೆ ಸುಮಾರು 4 ವರ್ಷದ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು.ಬಳಿಕ ಐಶ್ವರ್ಯರವರು ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು.

ಆದರೆ ಮಗಳು ಐಶ್ವರ್ಯರಿಲ್ಲ ಅನ್ನುವ ನೋವಿನ ಮಧ್ಯೆಯೂ ಅವರ ಮನೆಯವರು ಐಶ್ವರ್ಯ ಅವರ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾದರಿ ಕಾರ್ಯ ನಡೆದಿದೆ. ಐಶ್ವರ್ಯ ಪತಿ ರಾಜೇಶ್ ಸ್ವಂತ ಐಸ್ ಕ್ರೀಮ್ ಪಾರ್ಲರ್ ನಡೆಸಿಕೊಂಡು ಬೆಂಗಳೂರಿನಲ್ಲೇ ವಾಸವಾಗಿದ್ದಾರೆ.ಐಶ್ವರ್ಯಳ ತಂದೆ ತಾಯಿ ಕೂಡ ಬೆಂಗಳೂರಿನಲ್ಲೇ ನೆಲೆಸಿದ್ದು, ಕೆಲ ಸಮಯಗಳಿಂದ ಐಶ್ವರ್ಯಳ ತಾಯಿ ಊರಿಗೆ ಬಂದಿದ್ದರು.ಈ ವೇಳೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಈ ದುರಂತ ಘಟನೆ ನಡೆದಿತ್ತು.

Related posts

ಕಾಣಿಯೂರು : ಅಪಪ್ರಚಾರಕ್ಕೆ ಮನನೊಂದು ಯುವತಿ ನೇಣು ಬಿಗಿದು ಆತ್ಮಹತ್ಯೆ: ಏನಿದು ಘಟನೆ?

ನನ್ನ ಮದುವೆ ಶೀಘ್ರದಲ್ಲೇ ಇದೆ,ರಶ್ಮಿಕಾ ಜತೆ ಇನ್ನೂ ಸಂಪರ್ಕದಲ್ಲಿದ್ದೇನೆ-ನಟ ರಕ್ಷಿತ್ ಶೆಟ್ಟಿ;ಸಿಂಪಲ್ ಸ್ಟಾರ್ ಮದುವೆಯಾಗುತ್ತಿರೋ ಆ ‘ಲಕ್ಕಿ ಗರ್ಲ್’ ಯಾರು ಗೊತ್ತಾ?

ಪುತ್ತೂರು: ಬೈಕ್ ನಲ್ಲಿ ಬಂದು ಯುವತಿಯ ಕತ್ತು ಸೀಳಿ ಅಪರಿಚಿತ ವ್ಯಕ್ತಿ ಪರಾರಿ..! ಯುವತಿ ಸ್ಥಿತಿ ಗಂಭೀರ..!