ನ್ಯೂಸ್ ನಾಟೌಟ್: ಥೈಲ್ಯಾಂಡ್ ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರಿಗೆ 2024ರ ಮೇ ತಿಂಗಳಿನವರೆಗೆ ವೀಸಾ ಅಗತ್ಯವಿಲ್ಲ ಎಂದು ಥೈಲ್ಯಾಂಡ್ ಅಧಿಕಾರಿಗಳು ಮಂಗಳವಾರ ಘೋಷಿಸಿದ್ದಾರೆ.
ಕಳೆದ ಸೆಪ್ಟಂಬರ್ ನಲ್ಲಿ ಚೀನಾದ ಪ್ರವಾಸಿಗರಿಗೆ ವೀಸಾ ಅಗತ್ಯವಿಲ್ಲ ಎಂದು ಥೈಲ್ಯಾಂಡ್ ಹೇಳಿತ್ತು. ಭಾರತ ಮತ್ತು ತೈವಾನ್ ನಿಂದ ಆಗಮಿಸುವವರು ವೀಸಾದ ಅಗತ್ಯವಿಲ್ಲದೆ 30 ದಿನ ಥೈಲ್ಯಾಂಡ್ ನಲ್ಲಿ ಇರಬಹುದು ಎಂದು ಸರಕಾರದ ವಕ್ತಾರ ಚಾಯ್ ವಚರೋಂಕ್ ಹೇಳಿದ್ದಾರೆ.
ಮಲೇಶ್ಯಾ, ಚೀನಾ, ದಕ್ಷಿಣ ಕೊರಿಯಾ ಮತ್ತು ಭಾರತದಿಂದ ಥೈಲ್ಯಾಂಡ್ ಗೆ ಅತ್ಯಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ, ದೇಶಕ್ಕೆ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದೆ.
ಈ ವರ್ಷ ಭಾರತದಿಂದ 1.2 ದಶಲಕ್ಷ ಜನತೆ ಥೈಲ್ಯಾಂಡ್ ಗೆ ಭೇಟಿ ನೀಡಿದ್ದಾರೆ. ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಜತೆಗೆ ಆರ್ಥಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಉದ್ದೇಶದ ಉಪಕ್ರಮ ಇದಾಗಿದೆ.
ಕೋವಿಡ್ ಸಾಂಕ್ರಾಮಿಕಕ್ಕೂ ಮುನ್ನ 2019ರಲ್ಲಿ ಥೈಲ್ಯಾಂಡ್ ಗೆ ದಾಖಲೆ ಸಂಖ್ಯೆಯ 39 ದಶಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು ಎಂದು ಥೈಲ್ಯಾಂಡ್ ಮಾಹಿತಿ ನೀಡಿದೆ.