ನ್ಯೂಸ್ ನಾಟೌಟ್: ಶಾಲಾ ಶಿಕ್ಷಣ ಇಲಾಖೆ ಹಾಗೂ ರೋಟರಿ ವಿದ್ಯಾ ಸಂಸ್ಥೆ ಮೂಡುಬಿದಿರೆ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸುಳ್ಯದ ಸೈಂಟ್ ಜೋಸೆಫ್ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಸಮನ್ಯು ಎಸ್. ಶೆಟ್ಟಿ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈತ ಬೀರಮಂಗಲದ ನಿವಾಸಿ ಸುದರ್ಶನ ಕೃಷಿ ಏಜೆನ್ಸಿಸ್ ಮಾಲೀಕರಾದ ಸುದೀಶ್ ಕುಮಾರ್ ಶೆಟ್ಟಿ ಹಾಗೂ ಅಕ್ಷತಾ ಎಸ್ .ಶೆಟ್ಟಿ ಇವರ ಪುತ್ರ. ವಿದ್ಯಾರ್ಥಿಯ ಸಾಧನೆಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಕೊರಗಪ್ಪ ಬೆಳ್ಳಾರೆ ಹಾಗೂ ಪುಷ್ಪವೇಣಿ ತರಬೇತಿ ನೀಡಿದ್ದರು.