ನ್ಯೂಸ್ ನಾಟೌಟ್ : ಮಲಯಾಳಂ (Malayalam) ಸಿನಿಮಾ ರಂಗದಲ್ಲಿ ಮತ್ತೋರ್ವ ಯುವನಟಿ ತನ್ನ ಬದುಕ್ನೇ ಕತ್ತಲನ್ನಾಗಿಸಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ.ಕೇವಲ 34ನೇ ವಯಸ್ಸಿನಲ್ಲೇ ರೆಂಜುಶಾ ಮೆನನ್ (Renjusha Menon) ಎಂಬ ಯುವನಟಿಯ ಈ ನಿರ್ಧಾರಕ್ಕೆ ಕಾರಣವೇನು ಅನ್ನೋದೇ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ನಿಜಲಟ್ಟಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ರೆಂಜುಶಾ ಮೆನನ್ ದುರಂತ ಅಂತ್ಯವಾಗಿದ್ದಾರೆ ಎಂದು ಅವರ ಆಪ್ತರು ಖಚಿತ ಪಡಿಸಿದ್ದಾರೆ.ಸಿನಿಮಾ ಮತ್ತು ಕಿರುತೆರೆ ಎರಡೂ ರಂಗದಲ್ಲಿ ಗುರುತಿಸಿಕೊಂಡಿದ್ದ ರೆಂಜುಶಾ,ತಿರುವನಂತಪುರಂನ (Thiruvananthapuram) ಶ್ರೀಕಾರ್ಯಂನಲ್ಲಿ ವಾಸವಿದ್ದರು.ವಾಸವಿದ್ದ ಮನೆಯಲ್ಲೇ ಅವರ ದೇಹ ಪತ್ತೆಯಾಗಿದೆ.
ಹಣಕಾಸಿನ ಸಮಸ್ಯೆಯಿಂದ ಅವರು ಈ ನಿರ್ಧಾರಕ್ಕೆ ಒಳಗಾದ್ರೆ ಎನ್ನುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಟಿಯಾಗಿ, ಲೈನ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದ ರೆಂಜುಶಾ ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.
ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಸಕ್ರಿಯರಾಗಿ ಅನೇಕ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಉತ್ತಮ ಡಾನ್ಸರ್ ಕೂಡ ಆಗಿದ್ದರು. ಸಾಕಷ್ಟು ಜನಪ್ರಿಯ ಶೋಗಳಲ್ಲಿ ಭಾಗಿಯಾಗಿರುವ ಹೆಗ್ಗಳಿಕೆ ಇವರದ್ದಾಗಿತ್ತು.