ನ್ಯೂಸ್ ನಾಟೌಟ್ :ತಮ್ಮ ಮನೆಯ ಹಿಂಭಾಗದಲ್ಲಿಯೇ ಗಾಂಜಾ ಬೆಳೆದಿದ್ದಾರೆಂದು ಆರೋಪದಡಿ ವ್ಯಕ್ತಿಯೊಬ್ಬರನ್ನು ಕೊಡಗು ಪೊಲೀಸರು ವಶಕ್ಕೆ ಪಡೆದ ಘಟನೆ ವರದಿಯಾಗಿದೆ.
ವ್ಯಕ್ತಿ ಬಳಿಯಿಂದ 5 ಕೆ.ಜಿ. ಹಸಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.ಗೋಣಿಕೊಪ್ಪದ ನಿವಾಸಿ ಎ.ಎಂ. ಕಾವೇರಪ್ಪ (48) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಗಾಂಜಾ ಗಿಡಗಳನ್ನು ಬೆಳೆಸಿರುವ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ವಿರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ಮೋಹನ್ ಕುಮಾರ್,ಗೋಣಿಕೊಪ್ಪ ವೃತ್ತದ ಗೋವಿಂದರಾಜು,ಪಿಎಸ್ಐ ರೂಪಾದೇವಿ ಬಿರಾದರ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಮಾಲು ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.