ನ್ಯೂಸ್ ನಾಟೌಟ್: ಭಾರತಕ್ಕೆ ಪ್ರವಾಸಿ ವೀಸಾದಲ್ಲಿ ಬಂದಿದ್ದ ವಿದೇಶಿ ಮಹಿಳೆಯೊಬ್ಬರು, ಇಲ್ಲಿನ ಬೀದಿನಾಯಿಯೊಂದು ತೋರಿದ್ದ ಪೀತಿಗೆ ಮನಸೋತಿದ್ದು, ಈಗ ಆ ಶ್ವಾನವನ್ನು ತನ್ನ ತಾಯ್ನಾಡಿಗೆ ತನ್ನೊಂದಿಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ. ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಆಕೆ ಈ ಶ್ವಾನವನ್ನು ತನ್ನೊಂದಿಗೆ ಕರೆದೊಯ್ಯುವ ಸಲುವಾಗಿ ಮತ್ತೆ ಆರು ತಿಂಗಳು ಭಾರತದಲ್ಲೇ ಉಳಿದು ಶ್ವಾನಕ್ಕೂ ಪಾಸ್ಪೋರ್ಟ್ ವೀಸಾ ರೆಡಿ ಮಾಡಿದ್ದಾರೆ ಎನ್ನಲಾಗಿದೆ.
ಹೀಗಾಗಿ ಭಾರತದ ಬೀದಿನಾಯೊಂದು ಸಾಕುನಾಯಾಗಿದ್ದು, ತನ್ನ ಪ್ರೀತಿಯ ಒಡತಿಯ ಜೊತೆ ವಿದೇಶಕ್ಕೆ ಹಾರಲಿದೆ.
ಜಯಾ ಎಂಬ ಹೆಸರಿನಿಂದ ಈ ನಾಯಿ ವಿದೇಶಕ್ಕೆ ಹೋಗಳಿದ್ದು, ನೆದರ್ಲ್ಯಾಂಡ್ನ ಅಮಸ್ಟರ್ಡ್ಯಾಮ್ ಮೂಲದ ಮೆರಲ್ ಬೊಂಟೆನ್ಬೆಲ್(Meral Bontenbel) ಎಂಬಾಕೆ ಭಾರತದ ಬೀದಿನಾಯಿಗೆ ಮನಸೋತು ಕರೆದೊಯ್ಯುತ್ತಿದ್ದಾರೆ.
ಭಾರತ ಪ್ರವಾಸಕ್ಕೆ ಬಂದಿದ್ದ ಇವರು ಪುಣ್ಯಕ್ಷೇತ್ರ ವಾರಾಣಾಸಿಯ ಬೀದಿಯಲ್ಲಿ ನಡೆದು ಹೋಗುತ್ತಿದ್ದಾಗ ಶ್ವಾನವೊಂದು ಈ ಮೆರಲ್ ಅವರನ್ನು ಹಿಂಬಾಲಿಸುತ್ತಾ ಸಾಗಿದೆ. ಮೆರಲ್ ಹೋದಲೆಲ್ಲಾ ಈ ಶ್ವಾನವೂ ಅವರನ್ನು ಹಿಂಬಾಲಿಸುತ್ತಾ ಸಾಗಿದೆ. ಒಂದು ದಿನ ಮತ್ತೊಂದು ಬೀದಿ ನಾಯಿ ಜಯಾ ಮೇಲೆ ದಾಳಿ ಮಾಡಿದಾಗ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಒಬ್ಬರು ಜಯಾವನ್ನು ರಕ್ಷಿಸಿದ್ದಾರೆ. ಇದನ್ನು ಗಮನಿಸಿದ ಮೆರಲ್ ಮೊದಲಿಗೆ ಇದನ್ನು ದತ್ತು ತೆಗೆದುಕೊಳ್ಳಲು ಬಯಸಿರಲಿಲ್ಲವಂತೆ ಆದರೆ ಅದನ್ನು ಸುರಕ್ಷಿತವಾದ ಸ್ಥಳಕ್ಕೆ ಸೇರಿಸಲು ಬಯಸಿದ್ದರು.
ಇದೇ ಕಾರಣಕ್ಕೆ ಭಾರತದಲ್ಲಿ ತಾವು ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಕಾಲ ಅವರು ಇರಲು ಬಯಸಿದರು. ನಂತರ ನಾಯಿ ಜಯಾಗೆ ಪಾಸ್ಪೋರ್ಟ್ ಹಾಗೂ ವೀಸಾ ಹಾಗೂ ಪಾಸ್ಪೋರ್ಟ್ ಸಿದ್ಧಪಡಿಸಿದರು. ಕೊನೆಗೂ ಆಕೆಯನ್ನು ನನ್ನೊಂದಿಗೆ ಕರೆದೊಯ್ಯುತ್ತಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದೊಂದು ದೊಡ್ಡ ಪ್ರಕ್ರಿಯೆಯಾಗಿತ್ತು. ಆದರೆ ಯೋಗ್ಯವಾಗಿತ್ತು. ನಾನು ಯಾವಾಗಲೂ ಶ್ವಾನವನ್ನು ಸಾಕಬೇಕೆಂದು ಬಯಸುತ್ತಿದೆ. ಹಾಗೆಯೇ ಜಯಾ ಮೊದಲ ಬಾರಿ ನನ್ನ ಮಾತನಾಡಿಸಿದಾಗಲೇ ನಾನು ಆಕೆಯನ್ನು ಇಷ್ಟಪಟ್ಟೆ ಎಂದು ಅವರು ಹೇಳಿದ್ದಾರೆ.