ನ್ಯೂಸ್ ನಾಟೌಟ್ :ಅಯೋಧ್ಯೆಯಲ್ಲಿ ರಾಮಮಂದಿರದ (Ayodhya RamaMandira) ಉದ್ಘಾಟನೆಗೆ ದಿನಾಂಕ ಸಮೀಪಿಸುತ್ತಿದೆ.ಹೀಗಾಗಿ ಭರದ ಸಿದ್ಧತೆಗಳು ನಡಿತಿವೆ.ಈ ನಡುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿರುವ ಮುಸ್ಲಿಂ ವ್ಯಕ್ತಿಯೊಬ್ಬರು ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಉತ್ತರಪ್ರದೇಶಧ ಫತೇಪುರ್ ಸಿಕ್ರಿ ನತ್ತು ಖೇರಗಢ್ನಲ್ಲಿರುವ ಕುಶಲಕರ್ಮಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ದೇಗುಲದಲ್ಲಿ ಬಳಸುವ ಕೆಂಪು ಮರಳುಗಲ್ಲಿನ ಮೇಲೆ ಅನನ್ಯ ಕೆತ್ತನೆಗಳನ್ನು ರಚಿಸುತ್ತಿದ್ದು,ವಿಶೇಷವಾಗಿ ಎಲ್ಲರನ್ನು ಆಕರ್ಷಿಸುವಂತಿದೆ.ಈ ಕುಶಲಕರ್ಮಿಗಳಲ್ಲಿ ಮುಸ್ಲಿಮರು ಕೂಡ ಇದ್ದಾರೆ. ಈ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಕೂಡ ಸಹಕರಿಸಿದ್ದಾರೆ.
ಈ ಕುಶಲಕರ್ಮಿಗಳಲ್ಲಿ ಹಲವಾರು ಮುಸ್ಲಿಂಮರು ತಮ್ಮ ಕಲೆಯನ್ನು ರಾಮಮಂದಿರ ನಿರ್ಮಾಣದಲ್ಲಿ ಬಳಸುತ್ತಿದ್ದಾರೆ. ಇದು ನಮಗೆ ಹೆಮ್ಮೆ ಅನಿಸುತ್ತಿದೆ ಎಂದು ದೇವಾಲಯದಲ್ಲಿ ಸ್ಥಾಪಿಸಲಾಗುವ ಕಂಬಗಳನ್ನು ಕೈಯಿಂದ ಕೆತ್ತುತ್ತಿರುವ ಕುಶಲಕರ್ಮಿಗಳಲ್ಲಿ ಒಬ್ಬರಾದ ಮುಸ್ಲಿಂ ವ್ಯಕ್ತಿ ತಿಳಿಸಿದ್ದಾರೆ.
ಇಲ್ಲಿರುವ ನೂರಾರು ಕಂಬಗಳಲ್ಲಿ ಮೂಡಿ ಬರುವ ಕೆತ್ತನೆಗಳಲ್ಲಿ ಇವರ ಕೆತ್ತನೆಯ ಕೆಲಸಗಳು ಅಡಕವಾಗಿವೆ ಅನ್ನೋದು ವಿಶೇಷ. ಇದು ನಮಗೆ ಒದಗಿ ಬಂದಿರುವ ಸೌಭಾಗ್ಯ, ನಮ್ಮ ಪಾಲಿಗಿದು ಅದೃಷ್ಟ ಎಂದು ಹೇಳಿದರು.
ಎರಡು ವರ್ಷಗಳಿಂದ ನಿರಂತರವಾಗಿ ಈ ಕಲ್ಲುಗಳನ್ನು ಕೆತ್ತುತ್ತಿದ್ದು,ಕೆಲಸಗಳು ಭರದಿಂದ ನಡೆಯುತ್ತಿದೆಎಂದು ಕುಶಲಕರ್ಮಿ ಶಿಲ್ಪಿ ಮಹಾವೀರ್ ಸಿಂಗ್ ಹೇಳಿದ್ದಾರೆ. ಈವರೆಗೆ ಸುಮಾರು 500 ಕ್ಯೂಬಿಕ್ ಅಡಿ ಕಲ್ಲು ಸಿದ್ಧಪಡಿಸಲಾಗಿದೆ ಎಂದು ಕಾಮಗಾರಿಯ ಮೇಲ್ವಿಚಾರಣೆ ನಡೆಸುತ್ತಿರುವ ಕಿಶನ್ ಸ್ವರೂಪ್ ತಿಳಿಸಿದ್ದಾರೆ.ಒಟ್ಟಿನಲ್ಲಿ 2024ರ ಜನವರಿ 22ರಂದು ಶ್ರೀರಾಮ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿದ್ದು,ಶ್ರೀರಾಮ ಮಂದಿರ ಹೇಗಿರಲಿದೆ ಎನ್ನುವ ಕುತೂಹಲದತ್ತ ಎಲ್ಲರ ಚಿತ್ತ ನೆಟ್ಟಿದೆ.