ನ್ಯೂಸ್ ನಾಟೌಟ್ :ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಇದರ ಗೌರವ ಉಪಸ್ಥಿತಿಯಲ್ಲಿ ಆದಿದ್ರಾವಿಡ ಯುವ ವೇದಿಕೆ (ರಿ) ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಆದಿದ್ರಾವಿಡ ಯುವ ವೇದಿಕೆ ಸುಳ್ಯ ತಾಲೂಕು ಸಮಿತಿ ಮತ್ತು ಮಹಿಳಾ ಸಮಿತಿ ಇದರ ಆಶ್ರಯದಲ್ಲಿ 2ನೇ ವರ್ಷದ ಆದಿದ್ರಾವಿಡ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ ಎಂದು ದ . ಕ . ಆದಿದ್ರಾವಿಡ ಯುವವೇದಿಕೆ ಅಧ್ಯಕ್ಷ ರಾಮಚಂದ್ರ ಬಿ. ಕೆ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಬಳಿಕ ಮಾತಾಡಿದ ಅವರು 05-11-2023 ಆದಿತ್ಯವಾರ ಕೆ.ವಿ.ಜಿ ಪುರಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥೀ ಮುರುಳ್ಯ ಉದ್ಘಾಟಿಸಲಿದ್ದಾರೆ.ಅಧ್ಯಕ್ಷತೆಯನ್ನು ಆವಿದ್ರಾವಿಡ ಯುವವೇದಿಕೆಯ ಜಿಲ್ಲಾಧ್ಯಕ್ಷ ರಾಮಚಂದ್ರ ಬಿ.ಕೆ ನಿರ್ವಹಿಸಲಿದ್ದಾರೆ ಎಂದರು.
ಮುಖ್ಯ ಭಾಷಣಗಾರರಾಗಿ ವಿಶ್ವವಿದ್ಯಾಲಯ ಮಂಗಳೂರು ಇದರ ಕನ್ನಡ ಉಪನ್ಯಾಸಕ ಯತು ಕುಮಾರ್ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶ್ರೀನಿವಾಸ ಅರ್ಬಿ ಗುಡ್ಡ(ಜಿಲ್ಲಾಧ್ಯಕ್ಷರು ಕರ್ನಾಟಕ ಆದಿದ್ರಾವಿಡ ಸಮಾಜ ಸೇವಾಸಂಘ), ಶೇಖರ್ ಕುಡಿ (ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಬೆಳ್ತಂಗಡಿ ಕ್ಷೇತ್ರ), ಆರ್.ಕೆ ನಾಯರ್ (ಉದ್ಯಮಿಗಳು) , ಸುಧಾಕರ್ ರೈ (ಸಭಾಪತಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ) , ಶ್ರೀ ಮೋನಪ್ಪ ಮಡಿವಾಳಮೂಲೆ (ಅಧ್ಯಕ್ಷರು ಆದಿದ್ರಾವಿಡ ಯುವವೇದಿಕೆ ಸುಳ್ಯ ತಾಲೂಕು ಸಮಿತಿ), ಶ್ರೀಮತಿ ಸವಿತಾ ನಾವೂರು (ಅಧ್ಯಕ್ಷರು ಆದಿದ್ರಾವಿಡ ಮಹಿಳಾ ವೇದಿಕೆ ಸುಳ್ಯ ತಾಲೂಕು ಸಮಿತಿ), ಬಾಲಕೃಷ್ಣ ದೊಡ್ಡರಿ (ಅಧ್ಯಕ್ಷರು ಆದಿದ್ರಾವಿಡ ಸಮಾಜ ಸೇವಾ ಸಂಘ ಸುಳ್ಯ ತಾಲೂಕು) ಶ್ರೀಮತಿ ಲಕ್ಷ್ಮೀ ಸುಬ್ರಹ್ಮಣ್ಯ (ಅಧ್ಯಕ್ಷರು ಆದಿದ್ರಾವಿಡ ಮಹಿಳಾ ಸಮಾಜ ಸೇವಾ ಸಂಘ ಸುಳ್ಯ ತಾಲೂಕು), ಶ್ರೀಮತಿ ಸುಲೋಚನಾ (ಗೌರವ ಸಲಹೆಗಾರರು ಆದಿದ್ರಾವಿಡ ಯುವವೇದಿಕೆ ಸುಳ್ಯ) ಚೋಮ ನಾವೂರು( ಗೌರವ ಸಲಹೆಗಾರರು), ಶ್ರೀಮತಿ ನಳಿನಿ ಕೋಡ್ತಿಲು (ಸದಸ್ಯರು ಗ್ರಾಮ ಪಂಚಾಯತ್ ಐವರ್ನಾಡು) ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭ 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ 50 ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು ಎಂದು ತಿಳಿಸಿದರು.
ಸಮ್ಮಿಲನ ಕಾರ್ಯಕ್ರಮದ ಪ್ರಯುಕ್ತ ದಿನಾಂಕ ನಾಳೆ( 29-10-2013 ಆದಿತ್ಯವಾರ) ಸರ್ಕಾರಿ ಪ್ರೌಢಶಾಲೆ ಐವರ್ನಾಡು ಫ್ರೆಂಡ್ಸ್ ಕೊಯಿಲ ಹಾಗೂ ಫ್ರೆಂಡ್ಸ್ ಕುಳ್ಳಂಪಾಡಿ ಇವರ ಸಹಕಾರದೊಂದಿಗೆ ಆದಿದ್ರಾವಿಡ ಯುವವೇದಿಕೆಯ ವತಿಯಿಂದ ಪುರುಷರಿಗೆ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಹಾಗೂ ಮಹಿಳೆಯರಿಗೆ ಜಿಲ್ಲಾ ಮಟ್ಟದ ಪ್ರೋಬಾಲ್ ಪಂದ್ಯಾಟ ಹಾಗೂ ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆದಿ ದ್ರಾವಿಡ ಸಮಾಜದ ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿಳಿಯಾರು,ಮಹಿಳಾ ಸಮಿತಿ ಅಧ್ಯಕ್ಷ ಸವಿತಾ ನಾವೂರು, ಉಪಾಧ್ಯಕ್ಷ ಅಶ್ವಿನ್ ಅಜ್ಜಾವರ, ಗೌರವ ಸಲಹೆಗಾರರ ದಾಮೋದರ ಬೇರ್ಯ, ಚಂದ್ರಕಾಂತ್ ಮೂಡಾಯಿತೋಟ, ತಾಲೂಕು ಅಧ್ಯಕ್ಷರಾದ ಮೋನಪ್ಪ ಮಂಡೆಕೋಲು, ಪ್ರೀತಮ್ ಬಿ.ಸಿ. ರೋಡ್,ಸದಸ್ಯರು ಉಪಸ್ಥಿತರಿದ್ದರು.