ನ್ಯೂಸ್ ನಾಟೌಟ್ : 28 ವರ್ಷದ ಯುವಕನೊಬ್ಬ ತನ್ನ ಮನೆಯಲ್ಲಿ ಹೆಣ್ಣು ನಾಯಿಯ ಮೇಲೆ ದೌರ್ಜನ್ಯ ನಡೆಸಿದ ಘಟನೆ ನೊಯ್ಡಾದಲ್ಲಿ ನಡೆದಿದೆ. ಆ ನಾಯಿಗೆ ಇನ್ನಿಲ್ಲದಂತೆ ಚಿತ್ರಹಿಂಸೆ ನೀಡಿದ್ದು,ಮನೆಯ ಬಾಲ್ಕನಿಯಲ್ಲಿ ನಾಯಿಯ ಮೇಲೆಯೇ ಬಲಾತ್ಕಾರ ಮಾಡಿದ್ದಾನೆ.
ಆತನನ್ನು ಗಮನಿಸಿದ ಪಕ್ಕದ ಮನೆಯವರು ಜೋರಾಗಿ ಕಿರುಚಾಡಿ, ಗಲಾಟೆ ಮಾಡಿದ್ದಾರೆ.ಈ ವೇಳೆ ತಾನು ಸಿಕ್ಕಿಬೀಳುತ್ತೇನೆಂಬ ಭಯದಲ್ಲಿ ಆ ವ್ಯಕ್ತಿ ತನ್ನ 3ನೇ ಮಹಡಿಯ ಮನೆಯ ಬಾಲ್ಕನಿಯಿಂದ ನಾಯಿಯನ್ನು ಕೆಳಗೆ ಬಿಸಾಡಿದ್ದಾನೆ ಎಂದು ತಿಳಿದು ಬಂದಿದೆ.
ನಾಯಿಗೆ ಬಲವಾದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗುರುವಾರ ಮಧ್ಯರಾತ್ರಿ ವೇಳೆ ಈ ಘಟನೆ ನಡೆದಿದೆ. ಯಾರಿಗೂ ಗೊತ್ತಾಗುವುದಿಲ್ಲವೆಂದು ಆ ವ್ಯಕ್ತಿ ನಡುರಾತ್ರಿ ತನ್ನ ಮನೆಯ ಬಾಲ್ಕನಿಗೆ ನಾಯಿಯನ್ನು ಎಳೆದುಕೊಂಡು ಬಂದು ಬಲತ್ಕಾರ ಮಾಡಿದ್ದ. ಆಗ ಪಕ್ಕದ ಮನೆಯ ವ್ಯಕ್ತಿ ಬಾಲ್ಕನಿಯಿಂದ ಈ ದೃಶ್ಯವನ್ನು ನೋಡಿದ್ದಾರೆ.ಈ ವೇಳೆ ಏನು ಮಾಡುತ್ತಿದ್ದೀಯ? ಎಂದು ಜೋರಾಗಿ ಪ್ರಶ್ನಿಸಿದಾಗ ಆತ ಭಯಭೀತನಾಗಿ ತಕ್ಷಣ ಬಾಲ್ಕನಿಯಿಂದ ನಾಯಿಯನ್ನು ಎಸೆದಿದ್ದಾನೆ.
ನೆರೆಹೊರೆಯುವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 377ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಹಾಗೇ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960ರ ಅಡಿಯಲ್ಲಿ ಆರೋಪಗಳನ್ನು ಸಹ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.