ನ್ಯೂಸ್ ನಾಟೌಟ್ : ಸದ್ಯ ಇಡೀ ರಾಜ್ಯಾದ್ಯಂತ ಹುಲಿ ಉಗುರು ಧರಿಸಿರುವ ಬಗ್ಗೆಯೇ ಚರ್ಚೆಗಳು ನಡಿತಿವೆ.ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಕೆಲವೊಂದಷ್ಟು ಮಂದಿಗೆ ನೋಟಿಸ್ ಕಳುಹಿಸಲಾಗಿದೆ.ಇನ್ನೂ ಕೆಲವರನ್ನು ಬಂಧಿಸಲಾಗಿದೆ.
ಈ ಕುರಿತಂತೆ ಮಾತನಾಡಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ” ನಮ್ಮ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ವನ್ಯಜೀವಿಗಳ ಅಂಗಾಂಗಗಳ ಬಳಕೆ ಅಪರಾಧವಾಗಿದೆ. ಅರಣ್ಯ ಸಂರಕ್ಷಣೆ ಕಾಯಿದೆ ವನ್ಯಜೀವಿ ಸಂರಕ್ಷಣೆಗಾಗಿ ಇದೆ. ವನ್ಯಜೀವಿಗೆ ಸಂಬಂಧಿಸಿದ ವಸ್ತು, ಉತ್ಪನ್ನ ಬಳಕೆ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈ ದೂರುಗಳನ್ನು ಆಧಾರಿಸಿ ನಮ್ಮ ಅಧಿಕಾರಿಗಳು ರೇಡ್ ಮಾಡಿದ್ದಾರೆ ಎಂದರು.
ವರ್ತೂರ್ ಸಂತೋಷ್ ಬಂಧನವಾಗುತ್ತಿದ್ದ ಹಾಗೆ ಮತ್ತೊಂದು ಕಡೆ ನಕಲಿ ಹುಲಿ ಉಗುರು ಬಗ್ಗೆಯೂ ಚರ್ಚೆಗಳು ನಡಿತಿವೆ. ಈ ಕುರಿತು ಮಾತನಾಡಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ “ದರ್ಶನ್ ಇರಬಹುದು ಬೇರೆ ಯಾರೇ ಇರಬಹುದು. ದೂರುಗಳು ಬಂದಾಗ ಅದರ ಬಗ್ಗೆ ನ್ಯಾಯ ಸಮ್ಮತವಾಗಿ ತನಿಖೆ ನಡೆಯುತ್ತದೆ. ಒಂದೇ ಮಾನದಂಡದಲ್ಲಿ ಸರ್ಕಾರ ಕಾನೂನು ಕ್ರಮ ಜರುಗಿಸಲಿದೆ. ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದರು.
ಆದಷ್ಟು ಬೇಗ ಎಫ್ಎಸ್ಎಲ್ ವರದಿ ಕೊಡಬೇಕು ಎಂದು ಒತ್ತಾಯ ಮಾಡ್ತೀನಿ. ನಕಲಿನೂ ಹಾಕಿಕೊಳ್ಳುವಂಗಿಲ್ಲ.ಅದನ್ನು ಹಾಕಿಕೊಂಡ್ರೆ ಬೇರೆಯವರಿಗೆ ಪ್ರಚೋದನೆ ಮಾಡಿದಂತೆ ಆಗುತ್ತೆ.ನಕಲಿ ಸಹಿತ ಈ ರೀತಿಯ ಪೆಂಡೆಂಟ್ ಹಾಕಿಕೊಳ್ಳಬಾರದೆಂದು ಮನವಿ ಮಾಡ್ತೀನಿ.ನಕಲಿಯಿಂದಲೂ ಪ್ರೇರಣೆ ಆಗುತ್ತದೆ.ನಕಲಿ ಹಾಕಿಕೊಂಡವರ ವಿರುದ್ಧ ಕ್ರಮದ ಬಗ್ಗೆ ಕಾಯಿದೆಯಲ್ಲಿ ಇಲ್ಲ. ಆದರೆ ನಕಲಿ ಪೆಂಡೆಂಟ್ ಗಳನ್ನು ಯಾರೂ ಹಾಕಿಕೊಳ್ಳಬಾರದೆಂದು ಮನವಿ ಮಾಡುತ್ತೇನೆ ಎಂದರು.
ಇದಕ್ಕೆ ಸಂಬಂಧ ಪಟ್ಟ ಹಾಗೆ ಜಗ್ಗೇಶ್ ಕೂಡ ವಿಚಾರಣೆಗೆ ಸಹಕಾರ ನೀಡಿದ್ದಾರೆ.ಆದರೆ ಬಿಗ್ ಬಾಸ್ ಸ್ಪರ್ಧಿ ಸಂತೋಷ್ ವಿಚಾರಣೆಗೆ ಸಹಕಾರ ನೀಡದ್ದಕ್ಕೆ ಬಂಧಿಸಲಾಗಿದೆ.ನಮ್ಮ ಅಧಿಕಾರಿಗಳು ವಿಚಾರಣೆಗೆ ಹೋದಾಗ ಸರಿಯಾಗಿ ಸ್ಪಂದಿಸಿಲ್ಲ. ಹೀಗಾಗಿ ಬಂಧಿಸಲಾಗಿದೆ ಎಂದು ವರ್ತೂರು ಸಂತೋಷ್ ಬಂಧನವನ್ನು ಸಮರ್ಥಿಸಿಕೊಂಡರು.ಕಾನೂನು ಎಲ್ಲರಿಗೂ ಒಂದೇ.ಹೀಗಾಗಿ ಈ ವಿಚಾರದಲ್ಲಿ ಯಾರೇ ಆಗಿರಲಿ ಅವರ ಮೇಲೆ ಕಾನೂನು ಕ್ರಮ ಜರುಗಿಸಲಿದ್ದೇವೆ ಎಂದು ಹೇಳಿದರು.