ನ್ಯೂಸ್ ನಾಟೌಟ್: ಅಜ್ಜನ ರಿವಾಲ್ವರ್ ತೆಗೆದುಕೊಂಡು ಮೊಮ್ಮಗನೊಬ್ಬ ಮನೆ ಮೇಲೆ ಹತ್ತಿ ಗಾಳಿಯಲ್ಲಿ ಒಟ್ಟಾರೆ ಮನಬಂದಂತೆ ಫೈರಿಂಗ್ ನಡೆಸಿ ಹುಚ್ಚಾಟ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದಿದೆ.
ಮೊಮ್ಮಗ ಭುವನ್ ಲೈಸೆನ್ಸ್ ಇಲ್ಲದೆ ಫೈರಿಂಗ್ ಮಾಡಿದ ಆರೋಪಿಯಾಗಿದ್ದು, ರಿವಾಲ್ವರ್ ಪರ್ಮಿಷನ್ ಪಡೆದಿದ್ದ ಅಜ್ಜ ಷಣ್ಮುಖ ಎಂಬವರ ರಿವಾಲ್ವರ್ ಉಪಯೋಗಿಸಿದ್ದಾರೆ. ರಿವಾಲ್ವರ್ ಮನೆಯಲ್ಲಿಟ್ಟಿದ್ದು ಗಮನಿಸಿ ತೆಗೆದುಕೊಂಡು ಮನೆ ಮೇಲೆ ಹತ್ತಿ ದೀಪಾವಳಿ ಪೀಸ್ತೂಲ್ನಂತೆ ಎರ್ರಾಬಿರ್ರಿ ಗಾಳಿಯಲ್ಲಿ ಫೈರಿಂಗ್ ಮಾಡಿರುವ ಮೊಮ್ಮಗ ಭುವನ್ ಎಂದು ಗುರುತಿಸಲಾಗಿದೆ.
ಲೈಸೆನ್ಸ್ ಪಡೆಯದವರು ರಿವಾಲ್ವರ್ ಬಳಸುವಂತಿಲ್ಲ. ಆದರೆ ಅಜ್ಜನ ರಿವಾಲ್ವರ್ನಿಂದ ಮೊಮ್ಮಗ ಹುಚ್ಚಾಟ ಮೆರೆದಿದ ಘಟನೆ ವರದಿಯಾಗಿದ್ದು, ಈ ಘಟನೆಯಲ್ಲಿ ಯಾವುದೇ ಅನಾಹುತವಾಗಿಲ್ಲ ಎಂದು ತಿಳಿದುಬಂದಿದೆ.
ಲೈಸೆನ್ಸ್ ಪಡೆಯದೆ ರಿವಾಲ್ವರ್ ಫೈರಿಂಗ್ ಮಾಡಿದ್ದಕ್ಕೆ ಕೇಸ್ ದಾಖಲಿಸಲು ಮುಂದಾದ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದಿದೆ.
ಅಲ್ಲದೇ ರಿವಾಲ್ವರ್ ಲೈಸನ್ಸ್ ಕ್ಯಾನ್ಸಲ್ ಮಾಡಲು ಡಿಸಿಗೆ ಪತ್ರ ಬರೆಯಲು ಮುಂದಾದ ಎಸ್ಪಿ ಅಮರನಾಥ್ ರೆಡ್ಡಿ ಈ ಬಗ್ಗೆ ಪೂರ್ಣ ವಿವರಣೆ ನೀಡಿದ್ದಾರೆ ಎನ್ನಲಾಗಿದೆ. ಲೈಸೆನ್ಸ್ ಪಡೆದ ರಿವಾಲ್ವರ್ ಮಕ್ಕಳಿಗೂ ಸಿಗುವಂತೆ ಅಸುರಕ್ಷಿತ ಜಾಗದಲ್ಲಿ ಇಟ್ಟಿದ್ದ ಅಜ್ಜನ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.