ನ್ಯೂಸ್ ನಾಟೌಟ್ : ಚಿತ್ರರಂಗದ ಅತಿದೊಡ್ಡ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳ ಪೈಕಿ ಹೊಂಬಾಳೆ ಫಿಲಂಸ್ನ ಕನ್ನಡ ಆಕ್ಷನ್-ಥ್ರಿಲ್ಲರ್ ಸಿನಿಮಾ ‘ಕಾಂತಾರ’ ವೂ ಆ ಪಟ್ಟಿಗೆ ಸೇರುತ್ತದೆ. ಆದರೆ, ಆ ಬಳಿಕ ತುಳುನಾಡಿನ ದೈವಾರಾಧನೆಗಳು ಆಚರಣೆಯ ಗಡಿ ಮೀರಿ ನಾಟಕ, ನೃತ್ಯ, ಕಲಾ ಪ್ರದರ್ಶನಗಳ ವಸ್ತುವಾಗಲು ಇದು ಪ್ರೇರಣೆಯಾಯ್ತು ಮತ್ತು ಈ ಬಗ್ಗೆ ದೈವಾರಾಧಕರ ಅಸಮಾಧನಕ್ಕೂ ಕಾರಣವಾಗಿತ್ತು.
ಭಾರತದ ಉದ್ದಗಲಕ್ಕೂ ಈ ಸಿನಿಮಾ ಸೃಷ್ಟಿಸಿದ ಕ್ರೇಜ್ ಇನ್ನೂ ಕಡಿಮೆ ಆಗಿಲ್ಲ. ರಿಷಭ್ ಶೆಟ್ಟಿ ನಿರ್ದೇಶನ ಸಿನಿಮಾ ತೆರೆ ಕಂಡು ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಪ್ರಾದೇಶಿಕ ಸಂಸ್ಕೃತಿಗಳ ಜತೆಗೆ ಬೆಸೆದುಕೊಂಡ ಸಿನಿಮಾ, ಸಮಾಜದ ಮೇಲೆ ಬೀರಿದ ಪ್ರಭಾವ ಗಮನಾರ್ಹ.
ಗಣಪತಿ ಹಬ್ಬದ ಸಂದರ್ಭದಲ್ಲಿ ಕೂಡ ಈ ಕ್ರೇಜ್ ಕಂಡುಬಂತಿತ್ತು. ಕಾಂತಾರ ಥೀಮ್ನಲ್ಲಿ ಗಣೇಶ ಮೂರ್ತಿ, ಪೆಂಡಾಲ್ಗಳು ಗಮನಸೆಳೆದಿದ್ದವು. ಈಗ ಇಂಥದ್ದೇ ಕ್ರೇಜ್ನವರಾತ್ರಿ ಸಂದರ್ಭದಲ್ಲೂ ಗೋಚರಿಸಿದೆ. ಕರ್ನಾಟಕದಲ್ಲಿ ಅಲ್ಲ. ಆದರೆ ದೂರದ ಪಶ್ಚಿಮ ಬಂಗಾಳದಲ್ಲಿ ಕೂಡ ಈ ರೀತಿಯ ಪ್ರದರ್ಶನ ವಸ್ತುಗಳಾಗಿ ಬಳಸಿ ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು.
ಭಾರತದ ಉದ್ದಗಲಕ್ಕೂ ಪ್ರಸ್ತುತ ನವರಾತ್ರಿ ಹಬ್ಬವನ್ನು ಆಚರಿಸುತ್ತಿರುವಾಗ, ಕೋಲ್ಕತ್ತಾದಲ್ಲಿ ಕಾಂತಾರ ಥೀಮ್ನ ದುರ್ಗಾ ಪಂಡಾಲ್ ಮತ್ತು ವಿಗ್ರಹವನ್ನು ಇರಿಸಲಾಗಿದೆ. ದುರ್ಗಾ ಪೂಜೆ ಪಂಡಾಲ್ನಲ್ಲಿ ಕಾಂತಾರ ಥೀಮ್ನ ಪಂಡಾಲ್ ಮತ್ತು ಕಾಂತಾರ ವಿಗ್ರಹಗಳು ಜನಾಕರ್ಷಣೆಯ ಕೇಂದ್ರಬಿಂದುವಾಗಿ ಮಾರ್ಪಟ್ಟಿವೆ.
ಬಿಪಾಶಾ ಘೋಷ್ ಎಂಬುವವರು ಈ ವಿಡಿಯೋಕ್ಕೆ ಪ್ರತಿಕ್ರಿಯಿಸಿದ್ದು, ಇದು ತಪ್ಪು.
ದೈವ (ದೈವ ಕೋಲ ಎಂಬುದು ವೈದಿಕೇತರ ಆಚರಣೆ. ಇಲ್ಲಿ ಭೂತಗಳು ಅಥವಾ ದೈವಗಳ (ಪಾಲಕರು ಮತ್ತು ಪೂರ್ವಜರ) ಆರಾಧನೆ ನಡೆಯುತ್ತದೆ. ಆದಿಶಕ್ತಿಯ ಪೂಜೆಗೂ ಇದಕ್ಕೂ ಸಂಬಂಧ ಇಲ್ಲ. ಆಚರಣೆ ಏನಿದೆಯೂ ಅದನ್ನು ಅನುಸರಿಸಬೇಕು. ಬಂಗಾಳಿಯಾಗಿ ಈ ಕೃತ್ಯವನ್ನು ವಿರೋಧಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.