ನ್ಯೂಸ್ ನಾಟೌಟ್ : ಎಟಿಎಮ್ , ಪಾಸ್ವರ್ಡ್,ಗೂಗಲ್ ಪೇ ಮುಂತಾದ ಹಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕೆಂದು ಆಗಾಗ ಸಂದೇಶಗಳನ್ನು ನೀವು ನೋಡಿರುತ್ತೀರಿ.ಹೀಗಾಗಿ ಅಪ್ಪಿ ತಪ್ಪಿಯೂ ಕೂಡ ಯಾರಿಗೂ ಯಾವುದೇ ಸಂದರ್ಭ ಬಂದಾಗಲೂ ಎಟಿಎಮ್ ಪಾಸ್ವರ್ಡ್ಗಳನ್ನು ಕೊಟ್ಟರೆ ಅಪಾಯವಾಗೋದು ಗ್ಯಾರಂಟಿ. ಇದೀಗ ಇಂತಹುದೇ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಲ್ಲಿ ನಡೆದಿದೆ.
ಮಹಿಳೆಗೆ ಕರೆ ಮಾಡಿರುವ ವ್ಯಕ್ತಿಯೊಬ್ಬ ಬ್ಯಾಂಕಿನವರು ವ್ಯವಹರಿಸುವ ರೀತಿಯಲ್ಲಿಯೇ ವ್ಯವಹರಿಸಿ ಜಾಣತನದಿಂದ ಒಟಿಪಿ ಪಡೆದುಕೊಂಡಿದ್ದಾನೆ. ಬಳಿಕ ಖಾತೆಯಿಂದ 1,46,900 ರೂ. ವರ್ಗಾಯಿಸಿಕೊಂಡಿದ್ದಾನೆ.ಈ ಬಗ್ಗೆ ಕೊಕ್ಕಡದ ಮಹಿಳೆಯೋರ್ವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಕ್ಕಡ ನಿವಾಸಿ ಹರಿಣಿ (40ವ) ಮೋಸ ಹೋದ ಮಹಿಳೆ ಎಂದು ತಿಳಿದು ಬಂದಿದೆ. ಹರಿಣಿ ಅವರು 1 ವಾರದ ಹಿಂದೆ ಜಮೀನು ಮಾರಾಟದ ಹಣವನ್ನು ಬ್ಯಾಂಕಿನಲ್ಲಿ ಜಮೆ ಮಾಡಿದ್ದರು.ಈ ವೇಳೆ ವ್ಯಕ್ತಿಯೋರ್ವ ಇದನ್ನು ಸೂಕ್ಷ್ಮವಾಗಿ ಗಮನಿಸಿ ಇದೇ ಸರಿಯಾದ ಸಮಯವೆಂದು ತಿಳಿದು ಬ್ಯಾಂಕಿನವರು ವ್ಯವಹರಿಸುವ ರೀತಿಯಲ್ಲಿಯೇ ಹರಿಣಿಯವರ ಜೊತೆಗೆ ವ್ಯವಹರಿಸಿದ್ದಾನೆ.
ಅ. 21ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಬಳಿಕ ಆತ ಒಟಿಪಿ ಕೇಳಿ ಪಡೆದುಕೊಂಡು ಹರಿಣಿಯವರ ಖಾತೆಯಿಂದ ರೂ.1,46,900 ರೂ. ವರ್ಗಾಯಿಸಿ ಮೋಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಹರಿಣಿಯವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 82/2023, ಕಲಂ:419, 420 ಐಪಿಸಿ ಮತ್ತು ಕಲಂ 66(ಸಿ) 66(ಡಿ) ಐಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.