ನ್ಯೂಸ್ನಾಟೌಟ್: ಇಸ್ರೇಲ್ ಮತ್ತು ಹಮಾಜ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಈ ಯುದ್ಧದಲ್ಲಿ ಅಪರಾಧಿಗಳಲ್ಲದ ಮುಗ್ಧ ನಾಗರಿಕರು ಹಿಂಸೆ ಅನುಭವಿಸುತ್ತದ್ದು, ಅನೇಕರು ತಮ್ಮವರನ್ನು ಮತ್ತು ತಮ್ಮ ವಸತಿ, ಆಸ್ತಿ ಮತ್ತು ಸಂಪತ್ತನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಈ ವೇಳೆ ಗಾಜಾದ ಜನರಿಗೆ ಭಾರತ ದೊಡ್ಡ ಪ್ರಮಾಣದ ಸಹಾಯಹಸ್ತ ಚಾಚಿದೆ.
ಯದ್ಧ ಪೀಡಿತ ಹಾಗೂ ಇಸ್ರೇಲ್ನಿಂದ ದಿಗ್ಬಂಧನಕ್ಕೊಳಗಾಗಿರುವ ಗಾಝಾಗೆ ರವಿವಾರ ಭಾರತವು ವೈದ್ಯಕೀಯ ನೆರವು ಹಾಗೂ ಪರಿಹಾರ ಸಾಮಾಗ್ರಿಗಳನ್ನು ರವಾನಿಸಿದೆ ಎಂದು ವರದಿಯಾಗಿದೆ.
“ಈ ಪರಿಹಾರ ಸಾಮಾಗ್ರಿಗಳಲ್ಲಿ ಅತ್ಯಗತ್ಯ ಜೀವರಕ್ಷಕ ಔಷಧಗಳು, ಶಸ್ತ್ರಚಿಕಿತ್ಸಾ ಸಾಮಗ್ರಿಗಳು, ಟೆಂಟ್, ಟಾರ್ಪಾಲಿನ್ ಗಳು ಹಾಗೂ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ರವಾನಿಸಲಾಗಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ಆಕ್ಟೋಬರ್ 7ರಂದು ಹಮಾಸ್ ಹೋರಾಟಗಾರರು ತನ್ನ ನೆಲದ ಮೇಲೆ ಹಠಾತ್ ದಾಳಿ ನಡೆಸಿದ ಬಳಿಕ ಗಾಝಾದ ಮೇಲೆ ಸಂಪೂರ್ಣ ದಿಗ್ಬಂಧನ ವಿಧಿಸಿರುವ ಇಸ್ರೇಲ್ ಅಲ್ಲಿಗೆ ನೀರು, ವಿದ್ಯುತ್, ಇಂಧನ ಹಾಗೂ ಆಹಾರ ಪೂರೈಕೆಯನ್ನು ಕಡಿತಗೊಳಿಸಿದೆ ಹಾಗೂ ಅವಶ್ಯಕ ವಸ್ತುಗಳ ತೀವ್ರ ಅಭಾವವನ್ನು ಸಷ್ಟಿಸಿದೆ ಹೀಗಾಗಿ ಭಾರತ ಸಹಾಯ ನೀಡಿದೆ.