Newsnotout
Uncategorizedಕ್ರೈಂ

ರಾಮಕುಂಜ: ತಲೆನೋವೆಂದು ಹೊರಳಾಡುತ್ತಿದ್ದ 10 ವರ್ಷದ ಮಗ ದಾರುಣ ಸಾವು, ಶಾಕ್ ಗೊಳಗಾದ ಹೆತ್ತವರು..!

ನ್ಯೂಸ್ ನಾಟೌಟ್: 10 ವರ್ಷದ ಬಾಲಕನೊಬ್ಬ ಹಠಾತ್ ಮೃತಪಟ್ಟಿರುವ ಘಟನೆ ಕಡಬ ತಾಲೂಕಿನ ರಾಮಕುಂಜದಿಂದ ವರದಿಯಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಸಂಜೀವ ಪೂಜಾರಿ (50) ಎಂಬವರ ಮಗನಿಗೆ ಕಳೆದ ಕೆಲವು ಸಮಯಗಳಿಂದ ಪದೇ ಪದೇ ತಲೆ ನೋವು ಬರುತ್ತಿತ್ತು. ಮಾ.18ರಂದು ಕೂಡ ತಲೆನೋವಿಗೆಂದು ಮನೆಯಲ್ಲಿದ್ದ ಔಷಧಿಯನ್ನು ಸೇವಿಸಿದ್ದ. ಬಳಿಕ ಆತ ನೋವಿನಿಂದ ಹೊರಳಾಡುವುದನ್ನು ಗಮನಿಸಿದ ತಾಯಿ ಪತಿಗೆ ತಿಳಿಸಿದ್ದಾರೆ. ತಕ್ಷಣ ಮನೆಗೆ ಬಂದ ಸಂಜೀವ ಪೂಜಾರಿಯವರು ಮಗನನ್ನು ಆಸ್ಪತ್ರೆಗೆ ಸೇರಿಸಿದರು. ಆಸ್ಪತ್ರೆಯಲ್ಲಿ ಮಗ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ಸ್ಥಳೀಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆ ತಂದಿರುತ್ತಾರೆ. ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಕಡಬ ಪೊಲೀಸ್‌ ಠಾಣೆಯಲ್ಲಿ ಯು ಡಿ ಆರ್‌ ನಂಬ್ರ: 10/2026 ಕಲಂ: 194 BNSS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

22 ವರ್ಷದ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ,ಶಿವಮೊಗ್ಗ ಮೂಲದ ಬಿ.ಕಾಂ ವಿದ್ಯಾರ್ಥಿನಿ 

Team Newsnotout

ಸುಳ್ಯ: ಅಟೋ ರಿಕ್ಷಾ ಚಾಲಕ ಮೃತ್ಯು: ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಪತ್ನಿಯಿಂದ ಪೊಲೀಸ್ ದೂರು

Team Newsnotout

ಆಂಧ್ರದಲ್ಲಿ ಮತ್ತೊಂದು ಬಸ್ ದುರಂತ; ಮೂವರು ಸಜೀವ ದಹನ

Team Newsnotout

Leave a Comment