ನ್ಯೂಸ್ ನಾಟೌಟ್: ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ (Lokayukta) ಬಲೆಗೆ ಕೃಷಿ ಅಧಿಕಾರಿ ಬಿದ್ದಿರುವ ಘಟನೆ ಮಂಗಳೂರಿನಲ್ಲಿ (Mangaluru)ಇಂದು (ಅ.೨೧) ನಡೆದಿದೆ.
ಮಂಗಳೂರು ಲೋಕಾಯುಕ್ತ ಪೊಲೀಸರ (Police) ಕಾರ್ಯಾಚರಣೆ ನಡೆಸಿ ಕೃಷಿ ಇಲಾಖೆ ಉಪ ನಿರ್ದೇಶಕಿ ಭಾರತಮ್ಮ ಎಂಬಾಕೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಮ್ಮ ಕಚೇರಿಯಲ್ಲೇ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಹಿಳಾ ಅಧಿಕಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಲೋಕಾಯುಕ್ತ ಎಸ್ಪಿ ಸೈಮನ್, ಡಿವೈಎಸ್ಪಿ ಚೆಲುವರಾಜ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, 50 ಲಕ್ಷ ಸಸಿ ವಿತರಣೆ ಬಿಲ್ ಪಾಸ್ ಮಾಡಲು ನಿವೃತ್ತ ಆರ್.ಎಫ್.ಓ ಪರಮೇಶ್ ಬಳಿ ಲಂಚ ಸ್ವೀಕರಿಸುವಾಗ ದಾಳಿ ನಡೆಸಿದ್ದಾರೆ.
ಭಾರತಮ್ಮ ಅವರು ಬಿಲ್ ಪಾಸ್ ಮಾಡಲು ಶೇಕಡಾ 18 ರಷ್ಟು ಲಂಚ ಕೇಳಿದ್ದರಂತೆ. ಇದರಂತೆ ಒಂದು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.