ನ್ಯೂಸ್ ನಾಟೌಟ್ : ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ಮತ್ತು ಜೀವಶಾಸ್ತ್ರ ಪದವಿ ವಿಭಾಗಗಳ ವತಿಯಿಂದ ಅಕ್ಟೋಬರ್ 20 ಶುಕ್ರವಾರದಂದು “ಸಹ್ಯಾದ್ರಿ ಬೆಟ್ಟಗಳು” ವಿಷಯಕ್ಕೆ ಸಂಬಂಧಿಸಿದಂತೆ ಚಿತ್ರಪಟ ರಚನೆ ಸ್ಪರ್ಧೆ ಆಯೋಜಿಸಲಾಗಿತ್ತು.
ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಪ್ರಯೋಗಾಲಯದಲ್ಲಿ ಹಮ್ಮಿಕೊಂಡ ಈ ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ಗಣಕ ಶಾಸ್ತ್ರ ವಿಭಾಗ ಮುಖ್ಯಸ್ಥೆ ದೀಕ್ಷಾ ಎಂ.ಡಿ, ಪ್ರಾಣಿಶಾಸ್ತ್ರ ಉಪನ್ಯಾಸಕ ಅಜಿತ್ ಕುಮಾರ್ ಮತ್ತು ರಸಾಯನಶಾಸ್ತ್ರ ಉಪನ್ಯಾಸಕಿ ಪಲ್ಲವಿ ಸಹಕರಿಸಿದರು.
ನೇಚರ್ ಕ್ಲಬ್ ಕಾರ್ಯದರ್ಶಿ ಪವಿತ್ರಾಕ್ಷಿ, ಕೋಶಾಧಿಕಾರಿ ಮಧಿವಧಿನಿ, ಸ್ಪರ್ಧಾ ಸಮಿತಿ ಸಂಚಾಲಕಿ ಮಹಿಮಾ, ನವ್ಯಶ್ರೀ, ಲಿಖಿತ, ಸುಚಿತ್ರ ಮತ್ತು ಕ್ಲಬ್ನ ಇನ್ನಿತರ ಸದಸ್ಯರು ಸ್ಪರ್ಧೆಯನ್ನು ಆಯೋಜಿಸಿದರು.ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕುಲದೀಪ್ ಪೆಲ್ತಡ್ಕ ಮತ್ತು ಉಪನ್ಯಾಸಕರಾದ ಕೃತಿಕಾ ಕೆ.ಜೆ. ಮಾರ್ಗದರ್ಶನ ನೀಡಿದರು. ಲ್ಯಾಬ್ ಸಹಾಯಕಿ ಸಿಬ್ಬಂದಿ ಭವ್ಯ ಸಹಕರಿಸಿದರು.ಜೀವವಿಜ್ಞಾನ ಪದವಿ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.