ನ್ಯೂಸ್ ನಾಟೌಟ್ : ಕಡಬ ಮೂಲದ ಯುವಕನೋರ್ವ ಕೇರಳದಿಂದ ತನ್ನೂರಿಗೆ ಬರುತ್ತಿದ್ದ ವೇಳೆ ರೈಲಿನಿಂದ ಆಯತಪ್ಪಿ ಬಿದ್ದು ದುರಂತ ಅಂತ್ಯ ಕಂಡಿರುವ ಘಟನೆ ಅ.20ರಂದು ವರದಿಯಾಗಿದೆ.
ಯುವಕನನ್ನು ಕಡಬ ತಾಲೂಕಿನ ಮರ್ದಾಳ ಬಂಟ್ರ ಗ್ರಾಮದ ನೀರಾಜೆ ನಿವಾಸಿ ಸುರೇಶ್ (34) ಎಂದು ಗುರುತಿಸಲಾಗಿದೆ.ಇವರು ಕೇರಳದಲ್ಲಿ ಟಿಂಬರ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.ಗುರುವಾರ ರಾತ್ರಿ ಮನೆಮಂದಿಗೆ ಕರೆ ಮಾಡಿ ತಾನು ಊರಿಗೆ ರೈಲಿನಲ್ಲಿ ಬರುತ್ತಿರುವ ವಿಚಾರವನ್ನು ತಿಳಿಸಿದ್ದರು.ಇದೇ ಸಂಭ್ರಮದಲ್ಲಿದ್ದ ಮನೆಯವರು ಅವರು ಬರುವ ದಾರಿಯನ್ನೇ ಕಾಯುತ್ತಿದ್ದರು.
ಈ ಹಿನ್ನಲೆಯಲ್ಲಿ ಇಂದು ಮುಂಜಾನೆ ವೇಳೆ ಮತ್ತೆ ಅವರಿಗೆ ಕರೆ ಮಾಡಲು ಪ್ರಯತ್ನಿಸಿದಾಗ ಆಸ್ಪತ್ರೆಯ ಸಿಬ್ಬಂದಿ ಪೋನ್ ಕರೆ ಸ್ವೀಕರಿಸಿ ಸುರೇಶ್ ಇನ್ನಿಲ್ಲ ಎನ್ನುವ ವಿಚಾರ ತಿಳಿಸಿದ್ದಾರೆ.ಚೌತಿ ಹಬ್ಬದ ಹಿನ್ನೆಲೆ ಮನೆಗೆ ಬಂದು ಮತ್ತೆ ಕೆಲಸಕ್ಕೆಂದು ಹೋಗಿದ್ದ ಸುರೇಶ್, ಇದೀಗ ದುರಂತ ಅಂತ್ಯ ಕಂಡಿದ್ದು,ಮನೆ ಮಂದಿಯ ರೋಧನ ಮುಗಿಲು ಮುಟ್ಟುವಂತಿತ್ತು.