ನ್ಯೂಸ್ ನಾಟೌಟ್: ಏಳು ವರ್ಷಗಳ ಹಿಂದೆ ರದ್ದಾದ 1,000 ರೂಪಾಯಿ ಮುಖಬೆಲೆಯ ನೋಟುಗಳು ಮತ್ತೆ ಚಲಾವಣೆಗೆ ಬರಲಿವೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹಳೆಯ ನೋಟನ್ನು ಮತ್ತೆ ಪರಿಚಯಿಸುವ ಆಲೋಚನೆಯಲ್ಲಿದೆಯೇ ಎಂಬ ಪ್ರಶ್ನೆ ಎದ್ದಿದೆ.
2016ರಲ್ಲಿ ನವೆಂಬರ್ನಲ್ಲಿ ಕೇಂದ್ರ ಸರ್ಕಾರ 500 ಹಾಗೂ 1,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿತ್ತು. ಆರ್ಬಿಐ 500 ರೂ.ಗಳ ಹೊಸ ನೋಟುಗಳು ಹಾಗೂ 2000 ರೂ. ಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿತ್ತು.
ಇದೇ 2023 ರ ಮೇ ತಿಂಗಳಲ್ಲಿ 2,000 ನೋಟುಗಳ ಚಲಾವಣೆಯನ್ನು ಮತ್ತೆ ಹಿಂಪಡೆದಿದೆ. ಇದರ ನಡುವೆ 1,000 ರೂ. ನೋಟುಗಳು ಮತ್ತೆ ಚಲಾವಣೆಗೆ ಬರಲಿವೆ ಎಂಬ ಸುದ್ದಿ ಹರಿದಾಡುತ್ತಿದೆ.
ಈಗ ಕೂಡ ಅಂತಹದ್ದೇ ಸುದ್ದಿ ಹರಿದಾಡುತ್ತಿದೆ. ಆದರೆ, ಈ 1,000 ರೂ. ಮುಖ ಬೆಲೆಯ ನೋಟುಗಳನ್ನು ಮರು ಚಲಾವಣೆಗೆ ತರುವುದನ್ನು ಆರ್ಬಿಐ ಪರಿಗಣಿಸುತ್ತಿಲ್ಲ ಎಂಬುದಾಗಿ ಆರ್ ಬಿ ಐ ಹೇಳಿದೆ.
ಮತ್ತೊಂದೆಡೆ, ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ‘ಕೌಟಿಲ್ಯ ಆರ್ಥಿಕ ಸಮಾವೇಶ’ 2023ರಲ್ಲಿ ಬಡ್ಡಿದರ ಹಾಗೂ ಹಣದುಬ್ಬರ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿ, ‘ಈ ಕ್ಷಣಕ್ಕೆ ಬಡ್ಡಿದರವು ಅಧಿಕವಾಗಿ ಉಳಿಯುವ ಸಾಧ್ಯತೆಯಿದೆ. ಕೇಂದ್ರೀಯ ಬ್ಯಾಂಕ್ ಹೆಚ್ಚಿನ ಜಾಗರೂಕತೆ ಹೊಂದಿರುತ್ತದೆ. ಹಣದುಬ್ಬರದಲ್ಲಿ ನಿರಂತರ ಕುಸಿತವನ್ನು ಖಚಿತಪಡಿಸಿಕೊಳ್ಳಲು ನಾವು ಹಣಕಾಸಿನ ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ” ಎಂದು ಹೇಳಿದ್ದಾರೆ.