ನ್ಯೂಸ್ ನಾಟೌಟ್: ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಅ.7ರಂದು ಯುದ್ಧ ಆರಂಭವಾದಾಗಿನಿಂದ ಕನಿಷ್ಠ 21 ಪತ್ರಕರ್ತರು ಸೇರಿದ್ದಾರೆ ಎಂದು ‘ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್’ ಸಂಸ್ಥೆ ತಿಳಿಸಿದೆ.
ಈ ಯುದ್ಧದ ವೇಳೆ 4,000ಕ್ಕೂ ಅಧಿಕ ಜನರು ಮೃತಪಟ್ಟಿದ್ದು, ಇವರಲ್ಲಿ ಗುರುವಾರದ ವೇಳೆಗೆ 21 ಪತ್ರಕರ್ತರು ಮೃತಪಟ್ಟಿರುವುದು ದೃಢಪಟ್ಟಿದ್ದು, 17 ಜನರು ಫೆಲೆಸ್ತೀನ್, ಮೂವರು ಇಸ್ರೇಲ್ ಮತ್ತು ಓರ್ವ ಲೆಬನಾನ್ಗೆ ಸೇರಿದವರಾಗಿದ್ದಾರೆ ಎಂದು ವರದಿ ತಿಳಸಿದೆ.
ಎಂಟು ಪತ್ರಕರ್ತರು ಗಾಯಗೊಂಡಿದ್ದು, ಮೂವರು ನಾಪತ್ತೆಯಾಗಿರುವ ಅಥವಾ ಬಂಧಿಸಲ್ಪಟ್ಟಿರುವ ವರದಿಯ ಬಗ್ಗೆ ಎಂದು ‘ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್’ ಹೇಳಿದೆ. ಪತ್ರಕರ್ತರು ಬಿಕ್ಕಟ್ಟಿನ ಸಮಯಗಳಲ್ಲಿ ಮಹತ್ವದ ಕೆಲಸವನ್ನು ಮಾಡುವ ನಾಗರಿಕರಾಗಿದ್ದಾರೆ ಮತ್ತು ಯುದ್ಧದಲ್ಲಿ ತೊಡಗಿರುವ ದೇಶಗಳು ಅವರನ್ನು ಗುರಿಯಾಗಿಸಿಕೊಳ್ಳಬಾರದು, ಅವರ ಸುರಕ್ಷತೆಯನ್ನು ಖಚಿತ ಪಡಿಸಿಕೊಳ್ಳಲು ಯುದ್ಧದಲ್ಲಿ ತೊಡಗಿರುವ ದೇಶಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿಪಿಜೆ ಹೇಳಿದೆ.
2001ರ ನಂತರದ ಅವಧಿಗೆ ಹೋಲಿಸಿದರೆ ಗಾಝಾದಲ್ಲಿ ಕಳೆದೆರಡು ವಾರಗಳಲ್ಲಿ ಹೆಚ್ಚಿನ ಪತ್ರಕರ್ತರು ಕೊಲ್ಲಲ್ಪಟ್ಟಿದ್ದಾರೆ ಎನ್ನಲಾಗಿದೆ. ಗಾಝಾದಲ್ಲಿಯ ಪತ್ರಕರ್ತರು ಇಸ್ರೇಲ್ನ ಮುತ್ತಿಗೆಯಿಂದಾಗಿ ವಿದ್ಯುತ್ ಮತ್ತು ಇಂಟರ್ನೆಟ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಹಲವರು ತಮ್ಮ ಕಚೇರಿಗಳು, ಮನೆಗಳು ಮತ್ತು ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ.
ಗಾಝಾ ಆರೋಗ್ಯ ಅಧಿಕಾರಿಗಳು ಗುರುವಾರ ತಿಳಿಸಿರುವಂತೆ ಇಸ್ರೇಲಿ ವಾಯುದಾಳಿಗಳಿಂದ 3,785 ಜನರು ಕೊಲ್ಲಲ್ಪಟ್ಟಿದ್ದು, 12,000ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಗಾಝಾದಲ್ಲಿ ಹಮಾಸ್ ಬಂಡುಕೋರರು ಕನಿಷ್ಠ 203 ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ ಎಂದು ಇಸ್ರೇಲ್ ಹೇಳಿದೆ.
ಈವರೆಗೆ ಕೊಲ್ಲಲ್ಪಟ್ಟಿರುವ, ಗಾಯಗೊಂಡಿರುವ, ಬಂಧನದಲ್ಲಿರುವ ಮತ್ತು ನಾಪತ್ತೆಯಾಗಿರುವ ಪತ್ರಕರ್ತರ ವಿವರಗಳನ್ನು ಸಿಪಿಜೆ ಪ್ರಕಟಿಸಿದೆ ಎಂದು ವರದಿ ತಿಳಿಸಿದೆ.
ಸೌತ್ ಅಲ್-ಅಸ್ರಾ ರೇಡಿಯೊದ ಪತ್ರಕರ್ತ ಅಹ್ಮದ್ ಶೆಹಾಬ್ ಅ.12ರಂದು ನಡೆದಿದ್ದ ಇಸ್ರೇಲಿ ವಾಯುದಾಳಿಯಲ್ಲಿ ತನ್ನ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಸಾವನ್ನಪ್ಪಿದ್ದರೆ, ಫ್ರೀಲಾನ್ಸ್ ಪತ್ರಕರ್ತೆ ಹಾಗು ಫೆಲೆಸ್ತೀನ್ ಮೀಡಿಯಾ ಅಸೆಂಬ್ಲಿಯಲ್ಲಿ ವಿಮೆನ್ ಜರ್ನಲಿಸ್ಟ್ಸ್ ಕಮಿಟಿಯ ಮುಖ್ಯಸ್ಥೆ ಸಲಾಮ ಮೆಮಾ ಅ.10ರಂದು ನಡೆದ ವಾಯುದಾಳಿಯಲ್ಲಿ ಮೃತಪಟ್ಟಿದ್ದು ಮೂರು ದಿನಗಳ ಬಳಿಕ ಮನೆಯ ಅವಶೇಷಗಳಡಿ ಅವರ ಮೃತದೇಹವು ಪತ್ತೆಯಾಗಿತ್ತು. ಲೆಬನಾನ್ನಲ್ಲಿ ರಾಯ್ಟರ್ಸ್ನ ವೀಡಿಯೊ ಪತ್ರಕರ್ತರಾಗಿದ್ದ ಇಸಾಮ್ ಅಬ್ದುಲ್ಲಾ, ಹಮಾಸ್ ಸಂಯೋಜಿತ ಅಲ್-ಅಕ್ಸಾ ಟಿವಿಯ ಪತ್ರಕರ್ತರಾದ ಖಲೀಲ್ ಅಬು ಅಥ್ರಾ, ಇಸಾಮ್ ಭರ್, ಹುಸಾಮ್ ಮುಬಾರಕ್ಮತ್ತು ಸಮೀಹ್ ಅಲ್-ನಾದಿ ಎಂಬ ಪತ್ರಕರ್ತರೂ ಸೇರಿದ್ದಾರೆ ಎನ್ನಲಾಗಿದೆ.