ನ್ಯೂಸ್ ನಾಟೌಟ್: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ಅನ್ನು ಕೆಳಗಿಳಿಸುತ್ತಿದ್ದಂತೆ, ದಳಪತಿಗಳಿಗೆ ಚುನಾವಣಾ ಆರೋಗಕ್ಕೆ ದೂರು ನೀಡುವುದಾಗಿ ಇಬ್ರಾಹಿಂ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇದರ ನಡುವೆಯೇ ಜೆಡಿಎಸ್ ಪಕ್ಷಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಹೌದು, ವಿಧಾನಸೌಧದಲ್ಲಿ ಜೆಡಿಎಸ್ ಪಕ್ಷಕ್ಕೆ ನೀಡಿರುವ ಕೊಠಡಿ ವಾಪಾಸ್ ಪಡೆಯುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗಿದೆ.
ಪ್ರೊ. ಸಿದ್ದರಾಜು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವ ಮೂಲಕ ದೂರು ನೀಡಿದ್ದು, ಪತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ವಿಧಾನಸೌಧದಲ್ಲಿ ನೀಡಿರುವ ಕಚೇರಿಯನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬಿಗ್ಶಾಕ್ ಎದುರಾಗಿದ್ದು, ಚುನಾವಣೆಯಲ್ಲಿ ದಳದ ಘಟಾನುಘಟಿ ನಾಯಕರು ಹೀನಾಯವಾಗಿ ಸೋತಿದ್ದರು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ವಿಧಾನಸೌಧದಲ್ಲಿ ಕಚೇರಿ ಪಡೆಯಲು ಅರ್ಹತೆ ಪಡೆದಿರುವುದಿಲ್ಲ ಎಂಬುದಾಗಿ ದೂರಿನಲ್ಲಿ ಪ್ರೊ. ಸಿದ್ದರಾಜು ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ 140 ಹಾಗೂ 141 ಪಕ್ಷದ ಕಚೇರಿಯನ್ನು ವಾಪಾಸ್ ಪಡೆಯಬೇಕೆಂದು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಪ್ರೋ ಸಿಎಸ್ ಸಿದ್ದರಾಜು, ವಿಧಾನಸೌಧದಲ್ಲಿರುವ ಜೆಡಿಎಸ್ ಕಚೇರಿಯನ್ನು ಖಾಲಿ ಮಾಡಿಸುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ೨೦೨೩ರ ಸಾರ್ವತ್ರೀಕ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಹೋಗಿರುವ ಜೆಡಿಎಸ್ ಪಕ್ಷ ವಿಧಾನಸೌಧದಲ್ಲಿ ಕಚೇರಿ ಮತ್ತು ಸಿಬ್ಬಂದಿಯನ್ನು ಡಿಪಿಎಆರ್ಯಿಂದ ಪಡೆದಿರುತ್ತಾರೆ.
ಇದು ಆರ್ಥಿಕವಾಗಿ ಸರ್ಕಾರದ ಖಜಾನೆಗೆ ಹೊರೆಯಾಗಿರುತ್ತದೆ. ಸದರಿಯವರು ವಿಧಾನಸೌಧದಲ್ಲಿ ಕಚೇರಿಯನ್ನು ಹೊಂದಲು ಅರ್ಹತೆಯನ್ನು ಕಳೆದುಕೊಂಡಿರುವುದರಿಂದ ವಿಧಾನಸೌಧದಲ್ಲಿರುವ ಕೊಠಡಿ ಸಂಖ್ಯೆ 140-141ನ್ನು ಜೆಡಿಎಸ್ ಶಾಸಕಾಂಗ ನಾಯಕನಿಗೆ ನೀಡಿರುವ ಕಚೇರಿಯನ್ನು ವಾಪಸ್ಸು ಪಡೆಯಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿ ತಿಳಿಸಿದೆ.