ನ್ಯೂಸ್ ನಾಟೌಟ್ : ರೈಲಿನಲ್ಲಿ ಪ್ರಯಾಣಿಸಿದರೆ ನಿರ್ದಿಷ್ಟ ಸ್ಥಳಕ್ಕೆ ಬಲು ಬೇಗನೇ ತಲುಪುತ್ತೇವೆಯೇನೋ ನಿಜ.ಆದರೆ ಪ್ರಯಾಣಿಸುವಾಗ್ಲೂ ಸೈಲೆಂಟಾಗಿ ಕುಳಿತು ರೈಲುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕಲ್ವ? ಆದರೆ ನಮ್ಮ ಮೆಟ್ರೋದಲ್ಲಿ ನಾಲ್ವರು ವಿದ್ಯಾರ್ಥಿಗಳು ಹುಚ್ಚಾಟ ಮೆರೆದಿರೋದನ್ನ ಕಂಡ್ರೆ ನಿಮ್ಗೆ ಅಚ್ಚರಿಯಾಗದಿರಲ್ಲ.ಈ ಘಟನೆ ನಡೆದಿದ್ದು ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ.
ಇತ್ತೀಚೆಗಷ್ಟೇ ನಮ್ಮ ಮೆಟ್ರೋದಲ್ಲಿ ನಿಯಮ ಮೀರಿ ಪ್ರಯಾಣಿಕನೊಬ್ಬ ಗೋಬಿ ಮಂಚೂರಿ ತಿಂದು ಸುದ್ದಿಯಾಗಿದ್ದ. ಇದಾದ ಬಳಿಕ ಇದೀಗ ಮತ್ತೆ ನಮ್ಮ ಮೆಟ್ರೋದಲ್ಲಿ ಕೆಲ ವಿದ್ಯಾರ್ಥಿಗಳು ಮೆಟ್ರೋ ಹ್ಯಾಂಡಲ್ಗಳನ್ನು ಹಿಡಿದು ರೋಲಿಂಗ್ ಮಾಡಲು ಕಸರತ್ತು ನಡೆಸಿದ್ದಾರೆ. ಇತ್ತ ವಿದ್ಯಾರ್ಥಿಗಳ ಈ ರೀತಿಯ ಹುಚ್ಚಾಟಕ್ಕೆ ಸಹ ಪ್ರಯಾಣಿಕರು ಕಿಡಿಕಾರಿದ್ದಾರೆ.
ವಿದ್ಯಾರ್ಥಿಗಳು ಮೆಟ್ರೋ ಸರಳು ಹಿಡಿದು ರೋಲಿಂಗ್ ಮಾಡುತ್ತಿದ್ದಾಗ ಸಹ ಪ್ರಯಾಣಿಕರು ತಮ್ಮ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಬಳಿಕ ನಮ್ಮ ಮೆಟ್ರೋ ಸೆಕ್ಯೂರಿಟಿ ಡಿಪಾರ್ಟ್ಮೆಂಟ್ಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ವಿದ್ಯಾರ್ಥಿಗಳನ್ನು ನಿಲ್ಲಿಸಿ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲೇ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಮೆಟ್ರೋದಲ್ಲಿ ಈ ವರ್ತನೆ ತೋರದಂತೆ ಎಚ್ಚರಿಕೆ ನೀಡಿದ್ದಾರೆ. ಬಳಿಕ ವಿದ್ಯಾರ್ಥಿಗಳಿಗೆ ₹500 ದಂಡ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.