ನ್ಯೂಸ್ ನಾಟೌಟ್ : ಇತ್ತೀಚೆಗಷ್ಟೇ ಕ್ರಿಕೆಟರ್ ವಿರಾಟ್ ಕೊಹ್ಲಿ ನಟಿ ಅನುಷ್ಕಾ ಶರ್ಮ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.ಇದೀಗ ನಟಿ ಕತ್ರಿನಾ ಕೈಫ್ ಬಗ್ಗೆಯೂ ಹೀಗೊಂದು ವದಂತಿ ಎದ್ದಿದೆ.
ಹೌದು ಕತ್ರಿನಾ ಕೈಫ್(Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಎರಡು ವರ್ಷ ಕಳೆಯುತ್ತಿದೆ. ಈಗ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ ಎಂದು ಅನೇಕರು ಊಹಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಕತ್ರಿನಾ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ.ಜತೆಗೆ ಪ್ರೆಗ್ನೆಂಟ್ (Katrina Kaif Pregnant) ಆಗಿರುವ ಕಾರಣದಿಂದಲೇ ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಮೊನ್ನೆಯಷ್ಟೇ ಹೈದರಾಬಾದ್ಗೆ ಬಂದಿದ್ದ ಅವರು ಸಲ್ವಾರ್ ಧರಿಸಿದ್ದರು. ಈ ವೇಳೆ ಕತ್ರಿನಾ ಹೊಟ್ಟೆ ಕಾಣದ ರೀತಿಯಲ್ಲಿ ದುಪ್ಪಟ್ಟ ಮುಚ್ಚಿಕೊಂಡಿದ್ದರು. ಆ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.ನಟಿಯರ ಬೇಬಿ ಬಂಪ್ ಕಾಣಿಸಿದರೆ ಪ್ರೆಗ್ನೆನ್ಸಿ ಸುದ್ದಿ ಎಲ್ಲ ಕಡೆ ಬೇಗನೇ ಹಬ್ಬುತ್ತದೆ. ಕತ್ರಿನಾ ಕೈಫ್ ಅವರು ಅದೇ ಕಾರಣಕ್ಕಾಗಿ ದುಪ್ಪಟ್ಟ ಮುಚ್ಚಿಕೊಂಡು ಹೊಟ್ಟೆ ಕಾಣದ ರೀತಿಯಲ್ಲಿ ನಡೆದು ಹೋಗಿದ್ದಾರೆಯೇ ಎನ್ನುವ ಪ್ರಶ್ನೆಗಳು ಜನರಲ್ಲಿ ಎದ್ದಿವೆ.
ಈ ವಿಡಿಯೋ ನೋಡಿದ ನೆಟ್ಟಿಗರು ಒಂದು ವೇಳೆ ಅವರು ಗರ್ಭಿಣಿ ಆಗಿರುವುದು ನಿಜವೇ ಆಗಿದ್ದರೆ ಅವರಿಗೆ ಅಭಿನಂದನೆಗಳು ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ.ಈಗೀಗ ಕತ್ರಿನಾ ಕೈಫ್ ಅವರ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವಲ್ಲಿ ಅವರು ಹಿಂದೇಟು ಹಾಕುತ್ತಿದ್ದಾರೆ. ಮಗು ಪಡೆದು, ಸಂಸಾರದ ಕಡೆಗೆ ಹೆಚ್ಚು ಗಮನ ನೀಡುವ ಸಲುವಾಗಿಯೇ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ ಗುಮಾನಿ ವ್ಯಕ್ತವಾಗಿದೆ.