ನ್ಯೂಸ್ ನಾಟೌಟ್ : ಸದ್ಯ ಬಿಗ್ ಬಾಸ್ ಶೋ ದಿನದಿಂದ ದಿನಕ್ಕೆ ರೋಚಕತೆಯನ್ನು ಹುಟ್ಟುಹಾಕುತ್ತಿದೆ.ಇಷ್ಟು ದಿನ ಸೈಲೆಂಟಾಗಿದ್ದ ಡ್ರೋನ್ ಪ್ರತಾಪ್ ಈಗ ಮೆಲ್ಲಗೆ ಟ್ರ್ಯಾಕ್ಗೆ ಬರುತ್ತಿದ್ದಾರೆ.ಹಲವು ಕಾರಣಗಳಿಂದಾಗಿ ಅವರನ್ನು ಬಿಗ್ ಬಾಸ್ ಮನೆಯಲ್ಲಿ ಟಾರ್ಗೆಟ್ ಮಾಡಲಾಗಿತ್ತು.ಮೊದಲನೆಯದಾಗಿ ಅವರು ಅಸಮರ್ಥರ ಗುಂಪಿನಲ್ಲಿ ಇದ್ದರು. ಎರಡನೆಯದಾಗಿ ಅವರನ್ನು ಅನೇಕರು ಹೀಯಾಳಿಸಿದ್ದರು. ಆ ನೋವಿನಿಂದಾಗಿ ಪ್ರತಾಪ್ (Drone Prathap) ಅವರು ಕಣ್ಣೀರು ಹಾಕಿದ್ದರು.
ಆದರೆ ಶನಿವಾರದ (ಅಕ್ಟೋಬರ್ 14) ಎಪಿಸೋಡ್ನಲ್ಲಿ ಪ್ರತಾಪ್ ಅವರಿಗೆ ಕಿಚ್ಚ ಸುದೀಪ್ (Kichcha Sudeep) ಅವರು ಫುಲ್ ಬೆಂಬಲಕ್ಕೆ ನಿಂತಿದ್ದರು.ಇನ್ನುಳಿದವರಿಗೆ ಕಿಚ್ಚ ಕ್ಲಾಸ್ ತೆಗೆದುಕೊಂಡರು. ನಟ ಸುದೀಪ್ ತುಂಬಿದ ಧೈರ್ಯದಿಂದ ಪ್ರತಾಪ್ಗೆ ಆನೆ ಬಲ ಸಿಕ್ಕಂತಾಗಿದೆ.
ಅದರಲ್ಲೂ ಅಕ್ಟೋಬರ್ 15ರಂದು ಡ್ರೋನ್ ಪ್ರತಾಪ್ ಮಾಡಿದ ಆ ಒಂದು ಡ್ಯಾನ್ಸ್ ಎಲ್ಲರನ್ನು ಬೆರಗುಗೊಳಿಸುವಂತೆ ಮಾಡಿದೆ. ಪ್ರತಾಪ್ ಅವರು ಎಲ್ಲರೊಂದಿಗೆ ಬೆರೆಯಬೇಕು ಎಂಬುದು ಬಹುತೇಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದು, ಅವರು ಯಾವಾಗಲೂ ಚಿಂತೆಯಲ್ಲಿ ಮುಳುಗಿರುತ್ತಾರೆ ಎಂಬ ಆರೋಪ ಕೇಳಿ ಬಂದಿತ್ತು.
ಲಿಂಕ್ ಒತ್ತಿ ವಿಡಿಯೋ ವೀಕ್ಷಿಸಿ
ಸಮಯ ಯಾವಾಗಲೂ ಇದ್ದ ಹಾಗೆ ಇರೋದಿಲ್ಲ ಅಲ್ವ? ಕಾಲ ಚಕ್ರ ಉರುಳುತ್ತಲೇ ಇರುತ್ತೆ..ಹೀಗಾಗಿ ಪ್ರತಾಪ್ ಅವರು ತನಿಶಾ ಕುಪ್ಪಂಡ ಮತ್ತು ಸಂಗೀತಾ ಶೃಂಗೇರಿ ಜೊತೆ ಸೇರಿ ರ್ಯಾಂಪ್ ವಾಕ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಭರ್ಜರಿಯಾಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ ಡ್ಯಾನ್ಸ್ ನೋಡಿ ಬಿಗ್ ಬಾಸ್ ಸ್ಪರ್ಧಿಗಳು ಸೇರಿದಂತೆ ಸ್ವತಃ ಕಿಚ್ಚ ಸುದೀಪ್ ಅವರೇ ಬೆರಗಾಗಿದ್ದಾರೆ.ಡ್ರೋನ್ ಪ್ರತಾಪ್ನಲ್ಲಿ ಈ ರೀತಿಯ ಟ್ಯಾಲೆಂಟ್ ಇದೆಯೆಂದು ಯಾರೂ ಅಂದುಕೊಂಡೇ ಇರಲಿಲ್ಲ,ಬಹುಶಃ ಪ್ರತಾಪ್ನಲ್ಲಿ ಅಡಗಿರುವ ಈ ಪ್ರತಿಭೆಗೆ ಕಿಚ್ಚ ಸುದೀಪ್ ಅವರೇ ಕಾರಣ ಎಂದು ಅಭಿಮಾನಿಗಳು ಅವರ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸುತ್ತಿದ್ದಾರೆ.
‘ಪ್ರತಾಪ್ ಓಪನ್ಅಪ್ ಆಗಬೇಕು ಎಂದು ತುಕಾಲಿ ಅವರೇ ನೀವು ಹೇಳ್ತಾಯಿದ್ರಿ. ಓಪನ್ಅಪ್ ಮಾಡಿಸುವುದು ಎಂದರೆ ಹೀಗೆ ಸರ್, ನಮ್ಮದು ವರ್ತೂರು ಟೊಮ್ಯಾಟೋ ಅಲ್ಲ. ನಾಟಿ ಟೊಮ್ಯಾಟೋ.. ವೆರಿ ನಾಟಿ’ ಎಂದು ಕಿಚ್ಚ ಸುದೀಪ್ ಅವರು ಹೇಳಿದ ಡೈಲಾಗ್ ಕೇಳಿ ಎಲ್ಲರೂ ನಕ್ಕಿದ್ದಾರೆ. ಒಟ್ಟಿನಲ್ಲಿ ‘ಸೂಪರ್ ಸಂಡೇ ವಿತ್ ಸುದೀಪ’ ಸಂಚಿಕೆ ಸಖತ್ ಫನ್ ಆಗಿತ್ತು.