ನ್ಯೂಸ್ ನಾಟೌಟ್: ವಿದೇಶದಲ್ಲಿರುವ ಕನ್ನಡಿಗರೊಂದಿಗೆ ಸಜ್ಜನ ಪ್ರತಿಷ್ಠಾನ ಗೂನಡ್ಕ ಬೀಜದಕಟ್ಟೆ ಮತ್ತು ಬಿಎಫ್ಎ ಆಶ್ರಯದಲ್ಲಿ ನಡೆಯುತ್ತಿರುವ ಕನ್ನಡಿಗರ ಸಮ್ಮಿಲನ ಮತ್ತು ಸ್ನೇಹಕೂಟ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಸೆ.13ರಂದು ದುಬೈನ ಶಾರ್ಜಾದಲ್ಲಿ ನಡೆದ ಕಾರ್ಯಕ್ರಮಕ್ಕೆ ಬಾಬಲ್ ಟವರ್ ಸಾಕ್ಷಿಯಾಯಿತು.
ಕಾರ್ಯಕ್ರಮವನ್ನು ಯುಎಇ ಅಲ್ ಪರ್ದಾನ್ ಗ್ರೂಪ್ ನ ಸಿಇಒ ತಾರನಾಥ ರೈ ಉದ್ಘಾಟಿಸಿದರು.ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಸಜ್ಜನ ಪ್ರತಿಷ್ಠಾನ ಗೂನಡ್ಕ ವತಿಯಿಂದ ವಿದೇಶದ ಹಲವು ಕಡೆ ಕನ್ನಡದ ಕಂಪನ್ನು ಬಿತ್ತುವ ಕಾರ್ಯವನ್ನು ಡಾ.ಉಮ್ಮರ್ ಬೀಜದಕಟ್ಟೆ ನೇತೃತ್ವದಲ್ಲಿ ನಡೆಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಅಶೋಕ ಪಾಲನ್ ಬೈಲೂರು, ಹಿರಿಯ ಉದ್ಯಮಿ ರಹೀಂ ಪೇರಡ್ಕ, ಶಾರ್ಜಾದ ಹಿರಿಯ ಉದ್ಯಮಿ ಹಮೀದ್ ಜಟ್ಟಿಪಳ್ಳ, ಮಹಮ್ಮದ್ ಇಂಜಿನಿಯರ್ ಮೇನಾಲ,ಅಲ್ ಮದಿನಾ ಸಂಸ್ಥೆಯ ಲತೀಫ್ ತಿಂಗಳಾಡಿ, ಅನ್ವರ್ ಶಿರೂರ್, ಟ್ರೇಮೊಂಟಿನ ಸಂಸ್ಥೆಯ ವ್ಯವಸ್ಥಾಪಕ ಬದ್ರುದ್ದೀನ್ ಗೂನಡ್ಕ ,ಪಲ್ಲವಿ ರಾನಡೆ, ಆಸೀಫ್ ಸೊಂಕಾಲ್, ಪೈಜಲ್ ಬೀಜದಕಟ್ಟೆ, ಅಸೀಫ್ ದೊಡ್ಡಡ್ಕ, ಬಶೀರ್ ಅರಂಬೂರು, ನಾಸೀರ್ ಪಟೇಲ್, ಝಕರಿಯ ಕೂರ್ನಡ್ಕ, ತಂಝಿಲ್ ಮಂಗಳೂರು, ಸುಹೈಲ್ ಶಿರೂರ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಇನ್ನಿತರ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸಜ್ಜನ ಲಕ್ ಪತಿ ಕಾರ್ಯಕ್ರಮದ ಟೀಝರ್ ಬಿಡುಗಡೆ ಗೊಳಿಸಲಾಯಿತು. ದುಬೈನಲ್ಲಿ ಉದ್ಯೋಗ ನಿಮಿತ್ತ ನೆಲೆಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರಿಗೆ ಗುರುತಿಸಿ ಗೌರವಿಸಲಾಯಿತು.