ನ್ಯೂಸ್ ನಾಟೌಟ್ : ಬಾಲಿವುಡ್ನಲ್ಲಿ ಸದ್ಯಕ್ಕೆ ಅನಿಮಲ್ ಚಿತ್ರದ ಹಾಡೇ ಭಾರಿ ಸದ್ದು ಮಾಡ್ತಿದೆ.ಅದಕ್ಕೆ ಕಾರಣ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಹಾಗೂ ಬಾಲಿವುಡ್ನ ಖ್ಯಾತ ನಟ ರಣಬೀರ್ ಕಪೂರ್ ಜತೆಗಿನ ಲಿಪ್ ಲಾಕ್ ಸೀನ್..!
ಹೌದು,ತೆಲುಗಿನ ನಟ ವಿಜಯ್ ದೇವರ ಕೊಂಡ ಅವರ ಜತೆಗೆ ಲಿಪ್ ಲಾಕ್ ಮಾಡಿ ತಣ್ಣಗಿದ್ದ ನಟಿ ಈಗ ಮತ್ತೆ ಬಿಸಿ ಬಿಸಿ ಕಿಸ್ಸಿಂಗ್ ಸೀನ್ಗಳಲ್ಲಿ ಎದುರು ಬಂದಿದ್ದಾರೆ.ರಶ್ಮಿಕಾ ಮಂದಣ್ಣ- ರಣಬೀರ್ ಕಪೂರ್ಗೆ (Ranbir Kapoor) ಅದ್ಯಾವ ಗಳಿಗೆಯಲ್ಲಿ ಲಿಪ್ಲಾಕ್ (Liplock) ಮಾಡಿದರೋ ಏನೋ, ಅಲ್ಲಿಂದ ಇಲ್ಲಿವರೆಗೆ ಅದರ ತಾಪಮಾನ ಕಡಿಮೆ ಆಗಲೇ ಇಲ್ಲ.ದಿನದಿಂದ ದಿನಕ್ಕೆ ಅದರ ಕಾವು ಜಾಸ್ತಿಯಾಗುತ್ತಲೇ ಇದೆ.
ಈ ‘ಅನಿಮಲ್’ (Animal) ಚಿತ್ರದಲ್ಲ ಹಾಡನ್ನು ಅಪ್ಲೋಡ್ ಮಾಡಿದ್ದೇ ತಡ ಕೇವಲ ಎರಡು ದಿನದಲ್ಲಿ ಬರೋಬ್ಬರಿ ಮಿಲಿಯನ್ಗಟ್ಟಲೇ ವೀಕ್ಷಣೆಯಯನ್ನು ಪಡೆದುಕೊಂಡಿದೆ.ಕೊಂಚ ಸೈಲೆಂಟ್ಗೆ ಜಾರಿದ್ದ ಹುಡುಗಿ ಈಗ ಮತ್ತೆ ಕಿಸ್ಸಿಂಗ್ ಸೀನ್ನಲ್ಲಿ ಭಾಗವಹಿಸಿದ್ದು, ನ್ಯಾಶನಲ್ ಲೆವೆಲ್ನಲ್ಲಿ ಸುದ್ದಿಯಾಗಿದೆ.ಹೇಗೂ ರಣಬೀರ್ ಕಪೂರ್ ಅವರು ಕೂಡ ಖ್ಯಾತ ನಟ.ಬಾಲಿವುಡ್ನ ಖ್ಯಾತ ನಟಿ ಆಲಿಯಾ ಭಟ್ರ ಪತಿ.ಹಾಗಾದರೆ ಪತಿ ರಣಬೀರ್ ಅವರ ಕಿಸ್ಸಿಂಗ್ ಸೀನ್ ಬಗ್ಗೆ ಪತ್ನಿ ಏನಂದಿರಬಹುದು? ಇಲ್ಲಿದೆ ನೋಡಿ ಉತ್ತರ..
ರಶ್ಮಿಕಾಳಿಗೆ ಕಾಲ ಕೂಡಿ ಬಂದಿದೆ ಅನ್ಸುತ್ತೆ.. ಅನಿಮಲ್ನಲ್ಲಿ ರಣಬೀರ್ ತುಟಿಗೆ ಮುತ್ತಿಟ್ಟಿದ್ದು ಈಗ ಪ್ಯಾನ್ ಇಂಡಿಯಾ ಸಮಾಚಾರ ಆಗಿದೆ. ಒಂದೇ ಹಾಡು, ಮೂರು ಮೂರು ಲಿಪ್ಲಾಕ್..! ಇದನ್ನ ನೋಡಿ ಪಡ್ಡೆಗಳು ಸುಮ್ನಿರ್ತಾರಾ?ರಣಬೀರ್ (Ranbir Kapoor) ತುಟಿ ನೋಡಿ ಕುದಿಯುತ್ತಿದ್ದಾರೆ.ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಸಾಮಾನ್ಯವಾಗಿ ಮದ್ವೆ ಆದ ಮೇಲೆ ತನ್ನ ಗಂಡ ಇನ್ನೊಂದು ಹುಡುಗಿಗೆ ಕಿಸ್ ಕೋಡೋದು ಬಿಡಿ,ಮಾತನಾಡುವುದನ್ನು ಇಷ್ಟ ಪಡಲ್ಲ..ಆದರೆ ಇದೀಗ ರಣಬೀರ್ ಪತ್ನಿ ಆಲಿಯಾ ಭಟ್ ಆವರ ಪ್ರತಿಕ್ರಿಯೆ ಹೇಗಿರಬಹುದು ಎಂದು ನೆಟ್ಟಿಗರು ಭಾರಿ ಕುತೂಹಲದಲ್ಲಿದ್ದರು. ನಿಮ್ಮ ಪತಿ ರಶ್ಮಿಕಾಗೆ (Rashmika Mandanna) ಕಿಸ್ ಮಾಡಿದ್ದು ಏನನ್ನಿಸುತ್ತಿದೆ? ಎಂದು ನೆಟ್ಟಿಗರು ಕೇಳಿದ ಪ್ರಶ್ನೆಗೆ ಅವರು ಬಹಳ ಸಮಾಧಾನದಿಂದ ಉತ್ತರಿಸಿದ್ದಾರೆ.ಬೋಲ್ಡ್ ಅಂಡ್ ಬ್ಯೂಟಿಫುಲ್ ನಟಿಯಾಗಿರುವ ಆಲಿಯಾ ಆ ಪ್ರಶ್ನೆ ಕೇಳಿ ನಕ್ಕಿದ್ದಾರಂತೆ.
ನಟಿ ಆಲಿಯಾ ಭಟ್ ಫಿಲ್ಮ್ನಲ್ಲಿ ಗಂಡ ಅಂತ ನೋಡದೇ ಪ್ರೇಕ್ಷಕರಾಗಿ ಅಭಿಪ್ರಾಯ ಕೊಟ್ಟಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿ, ಇನ್ನಷ್ಟು ಕ್ಲೋಸ್ ಮೂವ್ ಮಾಡಬಹುದಿತ್ತು ಎಂದು ಪತಿಗೆ ಸಲಹೆ ನೀಡಿದ್ದಾರೆ. ಅಯ್ಯೋ ಅದು ತೆರೆ ಮೇಲಷ್ಟೇ. ಹೀಗಾಗಿ ಇಷ್ಟು ತಣ್ಣಗಿದ್ದೀಯಾ. ಅದೇ ಡೈರೆಕ್ಟ್ ಅಟ್ಯಾಕ್ ಆಗಿದ್ದರೆ ಹೀಗನ್ನುತ್ತಿದ್ದೀರಾ ಎಂದು ನೆಟ್ಟಿಗರು ಆಲಿಯಾ ಕಾಲೆಳೆದಿದ್ದಾರೆ.‘ಅನಿಮಲ್’ ಸಿನಿಮಾ ಡಿಸೆಂಬರ್ 1ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಮೊದಲ ಬಾರಿಗೆ ರಣ್ಬೀರ್ಗೆ ರಶ್ಮಿಕಾ ನಾಯಕಿಯಾಗಿ ನಟಿಸಿದ್ದಾರೆ.ಈ ಚಿತ್ರ ಯಾವ ಲೆವೆಲ್ಗೆ ಹಿಟ್ ಆಗಲಿದೆ ಕಾದು ನೋಡಬೇಕಿದೆ.