ನ್ಯೂಸ್ ನಾಟೌಟ್: ಪತಿಯ ಮದ್ಯದ ಚಟದಿಂದ ಬೇಸತ್ತ ಪತ್ನಿ ತನ್ನ ಜೀವ ಕಳೆದುಕೊಳ್ಳಲು ರೈಲ್ವೆ ಹಳಿಯ ಬಳಿ ನಿಂತ್ತಿದ್ದು, ಬಳಿಕ, ಆಕೆಯನ್ನು ಸಮಾಧಾನಪಡಿಸಲು ಹೋದ ಪತಿ ಹೆಂಡತಿಯನ್ನು ಅಲ್ಲೇ ತಬ್ಬಿಕೊಂಡಿದ್ದಾನೆ, ಪತ್ನಿಯ ನಿರ್ಧಾರ ಬದಲಿಸಲು ಅಲ್ಲೇ ಪ್ರಯತ್ನಿಸುತ್ತಾನೆ. ಈ ವೇಳೆ ಇಬ್ಬರೂ ಜೀವ ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ.
ಆದರೆ, ಅದೇ ವೇಳೆ ರೈಲು ಬಂದಿದ್ದು, ಇಬ್ಬರೂ ದುರಂತ ಅಂತ್ಯ ಕಂಡಿದ್ದಾರೆ. ವಾರಾಣಸಿಯ ಸಾರನಾಥ ಪೊಲೀಸ್ ಠಾಣೆ ವ್ಯಾಪ್ತಿಯ ಪಂಚಕೋಶಿ ರೈಲ್ವೆ ಕ್ರಾಸಿಂಗ್ನಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ಶುಕ್ರವಾರ ಮಾಹಿತಿ ನೀಡಿದ್ದಾರೆ.
ಗೋವಿಂದ್ ಸೋಂಕರ್ (30) ಮದ್ಯದ ಚಟ ಹೊಂದಿದ್ದರು ಮತ್ತು ಬುಧವಾರ ರಾತ್ರಿಯೂ ಕುಡಿಯುತ್ತಿದ್ದರು. ಇದಕ್ಕೆ ಪತ್ನಿ ಖುಷ್ಬು ಸೋಂಕರ್ (28) ಜಗಳವಾಡಿದ್ದರು. ಕುಡಿದ ಅಮಲಿನಲ್ಲಿದ್ದ ಗೋವಿಂದ್ ಆಕೆಯೊಂದಿಗೆ ಜಗಳವಾಡಲು ಪ್ರಾರಂಭಿಸಿದರು. ಇದರ ಬೆನ್ನಲ್ಲೇ ಆಕೆ ರೈಲ್ವೆ ಹಳಿಯ ಬಳಿ ಹೋಗಿದ್ದಾಳೆ.
ಗೋವಿಂದ್ ತನ್ನ ಹೆಂಡತಿಯನ್ನು ಸಮಾಧಾನಪಡಿಸಲು ಹಿಂಬಾಲಿಸಿ ರೈಲ್ವೇ ಹಳಿಯಲ್ಲೇ ಆಕೆಯನ್ನು ತಬ್ಬಿಕೊಳ್ಳುತ್ತಾನೆ ಆದರೆ, ವೇಗವಾಗಿ ಬಂದ ರೈಲಿಗೆ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ.
ದಂಪತಿಗೆ ಮೂವರು ಮಕ್ಕಳಿದ್ದಾರೆ ಎಂದು ಮಾಹಿತಿ ಲಭಿಸಿದ್ದು, ಮಗನಿಗೆ 6 ವರ್ಷ, ಇಬ್ಬರು ಹೆಣ್ಣುಮಕ್ಕಳಿಗೆ ಕ್ರಮವಾಗಿ ಮೂರು ಮತ್ತು ನಾಲ್ಕು ವರ್ಷ ಆಗಿದೆ. ಗೋವಿಂದ್ ಹಣ್ಣು ಮಾರುತ್ತಿದ್ದರು ಎನ್ನಲಾಗಿದೆ.