ನ್ಯೂಸ್ ನಾಟೌಟ್: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಬಾಲಕನೊಬ್ಬ ತನ್ನ ಸ್ನೇಹಿತರ ಜೊತೆ ಕೆಫೆಯಲ್ಲಿ ಕುಳಿತಿರುತ್ತಾನೆ. ಅಲ್ಲಿಗೆ ಬಂದ ಆತನ ತಂದೆ ಬಾಲಕಿನಿಗೆ ಹಿಗ್ಗಾಮುಗ್ಗಾ ಥಳಿಸಲು ಶುರು ಮಾಡುತ್ತಾರೆ.
ಸ್ಪೆಷಲ್ ಕ್ಲಾಸ್ ಎಂದು ಸುಳ್ಳು ಹೇಳಿ ಸಿನಿಮಾ, ಅಲ್ಲಿ ಇಲ್ಲಿ ಸುತ್ತಾಡಲು ಹೋಗ್ತಾರೆ.ಇದೀಗ ಫ್ರೆಂಡ್ಸ್ ಜೊತೆಗಿನ ಇಲ್ಲೊಬ್ಬ ಬಾಲಕನ ಬಿಂದಾಸ್ ಕ್ಷಣವು ಹಾಳಾಗಿ ಹೋಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಬಾಲಕನೊಬ್ಬ ತನ್ನ ಸ್ನೇಹಿತರ ಜೊತೆ ಕೆಫೆಯಲ್ಲಿ ಕುಳಿತಿರುತ್ತಾನೆ. ಅಲ್ಲಿಗೆ ಬಂದ ಆತನ ತಂದೆ ಬಾಲಕಿನಿಗೆ ಹಿಗ್ಗಾಮುಗ್ಗಾ ಥ* ಳಿಸಲು ಶುರು ಮಾಡುತ್ತಾರೆ.
ಈ ಬಾಲಕ ಕೋಚಿಂಗ್ ಕ್ಲಾಸ್ಗೆ ಹೋಗುವುದಾಗಿ ಹೇಳಿ ಕೆಫೆಗೆ ಬಂದಿರುತ್ತಾನೆ. ಅಲ್ಲಿಗೆ ಬಂದ ಆತನ ತಂದೆ “ಕ್ಯಾ ಬೋಲಾ ಥಾ?” (ಏನ್ ಹೇಳಿದ್ದೆ ನೀನು) ಎನ್ನುತ್ತಾ ಮಗನಿಗೆ ಹೊಡೆಯುತ್ತಾರೆ. Ghar Ke Kalesh ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, ಈ ಬಾಲಕ ಸ್ನೇಹಿತರ ಜೊತೆ ಹುಕ್ಕಾ ಸೇದುತ್ತಿದ್ದ ಎಂದು ಬರೆದಿದ್ದಾರೆ.
ಬಾಲಕನ ತಂದೆ ಮಗನಿಹಗೆ ಮಾತ್ರವಲ್ಲದೇ ಮಗನ ಕೆಲ ಸ್ನೇಹಿತರಿಗೂ ಹೊಡೆದಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ತಂದೆಯ ಜೊತೆ ಬುರ್ಖಾ ಧರಿಸಿದ ಒಬ್ಬ ಮಹಿಳೆಯೂ ಇದ್ದಾರೆ. ಅಲ್ಲಿ ಕುಳಿತ ಜನರು ಆಶ್ಚರ್ಯಚಕಿತರಾಗಿ, ಮೂಕ ಪ್ರೇಕ್ಷಕರಾಗಿ ನೋಡುತ್ತಾ ಕುಳಿತಿದ್ದಾರೆ.
ಈ ವಿಡಿಯೋ ಕಂಡ ನೆಟ್ಟಿಗರು ಪರಿಪರಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.