ನ್ಯೂಸ್ ನಾಟೌಟ್ : ಮದುವೆ ಅನ್ನೋದು ಮನುಷ್ಯನ ಜೀವನದ ಪ್ರಮುಖ ಘಟ್ಟ.ಪ್ರತಿಯೊಂದು ಹೆಣ್ಣು ಮಗಳಿಗೂ ತನ್ನ ತವರು ಮನೆಯನ್ನು ಬಿಟ್ಟು ಗಂಡಿನ ಮನೆಗೆ ಹೋಗುವ ಅನಿವಾರ್ಯತೆ,ಗಂಡಿಗೂ ಮದುವೆ ಬಳಿಕ ಜವಾಬ್ದಾರಿ ಬೆಟ್ಟದಷ್ಟು ಹೆಚ್ಚಾಗುತ್ತದೆ.ಆದರೆ ಮದುವೆ ಕಾರ್ಯಕ್ರಮ ಅಂದಾಗ ಒಂದಷ್ಟು ಖರ್ಚು ವೆಚ್ಚಗಳಾಗುತ್ತವೆ.ಮುಖ್ಯವಾಗಿ ಬಟ್ಟೆಗಳ ಸೆಲೆಕ್ಷನ್ ಕೂಡ ಅಷ್ಟೇ ಕಠಿಣವಾಗುತ್ತೆ..
ನಮ್ಮ ಭಾರತ ದೇಶದಲ್ಲಿ ಹೆಚ್ಚಾಗಿ ವಧು ಕೆಂಪು ಬಣ್ಣದ ವಸ್ತ್ರವನ್ನೇ ಉಡುವುದು ಸಾಮಾನ್ಯ. ಆದರೆ ಅದು ಯಾಕೆ ಅನ್ನುವ ಬಗ್ಗೆ ಯಾರೂ ಚಿಂತಿಸಿಲ್ಲ.ಮದುವೆ ಹತ್ತಿರ ಬರುತ್ತಿದ್ದಂತೆ ಮಧು ಮಗಳಿಗೆ ಕೆಂಪು ಕಲರ್ನ ಸೀರೆ ಖರೀದಿಸುತ್ತಾರೆ ವಿನಃ ಕೆಂಪು ಕಲರ್ ಸೀರೆಯನ್ನೇ ವಧು ಯಾಕೆ ಉಡಬೇಕು ಎಂಬುದರ ಬಗ್ಗೆ ಯಾರೂ ಕೂಡ ಯೋಚನೆಯನ್ನೇ ಮಾಡಿಲ್ಲ.ಅದಕ್ಕೆ ಉತ್ತರ ಇಲ್ಲಿದೆ ನೋಡಿ..
ಹೌದು, ಕೆಂಪು ಬಣ್ಣ ಮತ್ತು ಭಾರತೀಯ ವಧುಗಳ ನಡುವೆ ವಿಶೇಷ ಸಂಬಂಧವಿದೆ ಎಂದೇ ಹೇಳಬಹುದು. ಕೆಂಪು ಬಣ್ಣವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಸಂತೋಷ ಮತ್ತು ಹೊಸ ಜೀವನದ ಬಣ್ಣವಾಗಿದೆ. ಹಿಂದೂ ಮದುವೆಯ ಉಡುಪು ಯಾವಾಗಲೂ ಕೆಂಪು ಬಣ್ಣದ್ದಾಗಿರುವುದೇಕೆ ಎಂದು ನಮ್ಮಲ್ಲಿ ಅನೇಕರು ಆಗಾಗ್ಗೆ ಯೋಚಿಸುತ್ತಿರುತ್ತಾರೆ. ಅದಕ್ಕೆ ಹಲವು ಕಾರಣಗಳಿವೆ.
ಕೆಂಪು ಬಣ್ಣ ಹಿಂದೂ ದೇವತೆ ದುರ್ಗಾವನ್ನು ಪ್ರತಿನಿಧಿಸುತ್ತದೆ.ಅವಳು ಶಕ್ತಿ ಮತ್ತು ಧೈರ್ಯವನ್ನು ಸಂಕೇತಿಸುವ ಕಾರಣ ಈ ಬಣ್ಣ ಮಹತ್ವವನ್ನು ಪಡೆದಿದೆ. ಶಕ್ತಿಶಾಲಿ ದೇವತೆಯು ಮಹಿಷಾಸುರನನ್ನು ಕೊಂದು ಜಗತ್ತಿಗೆ ಶಾಂತಿಯನ್ನು ತಂದಿರುವಂತೆ, ಹೊಸದಾಗಿ ಮದುವೆಯಾದ ಹುಡುಗಿ ತನ್ನ ಹೊಸ ಮನೆಗೆ ಶಾಂತಿಯನ್ನು ತರುತ್ತಾಳೆ ಎನ್ನುವ ನಂಬಿಕೆಯಿಂದ ಕೆಂಪು ಬಟ್ಟೆಯನ್ನು ಧರಿಸಲಾಗುತ್ತದೆ.
ಜ್ಯೋತಿಷ್ಯದ ಪ್ರಕಾರ, ಕೆಂಪು ಬಣ್ಣವು ಅದೃಷ್ಟ, ಸಂತೋಷ ಮತ್ತು ತಿಳುವಳಿಕೆಯನ್ನು ಪ್ರತಿನಿಧಿಸುತ್ತದೆ. ಇದು ಮದುವೆಯ ನಂತರ ದಂಪತಿಗಳ ನಡುವಿನ ಬಲವಾದ ಬಂಧವನ್ನು ಸಂಕೇತಿಸುತ್ತದೆ ಎಂದು ಹೇಳಲಾಗಿದೆ.
ಅನೇಕರ ಪ್ರಕಾರ, ಕೆಂಪು ಶ್ರೀಮಂತ ಮತ್ತು ಅರ್ಥಪೂರ್ಣ ಸಂಕೇತವಾಗಿದೆ. ಕೆಂಪು ಹೊಸ ಆರಂಭ, ಉತ್ಸಾಹ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ.ನಮ್ಮ ಭೂಮಿಯ ಮಣ್ಣು ಕೂಡ ಕೆಂಪು ಬಣ್ಣವನ್ನೇ ಹೊಂದಿದೆ.ಇದರಿಂದ ಇಡೀ ಜಗತ್ತಿನ ಜೀವರಾಶಿಗಳು ಕೂಡ ಬದುಕುವುದಕ್ಕೆ ಅನುಕೂಲವಾಗಿದೆ.ಹೀಗಾಗಿ ಭೂಮಿತಾಯಿಗೆ ಹೋಲಿಸುವ ಹೆಣ್ಣು ಸಹ ಆಕೆಯಂತೆ ತಾಳ್ಮೆಯಿಂದ ಬದುಕಲಿ ಎಂದು ಕೆಂಪುಬಣ್ಣದ ಉಡುಗೆಯನ್ನು ಧರಿಸಲಾಗುತ್ತದೆ.
ಸಾಮಾನ್ಯವಾಗಿ, ಭಾರತೀಯ ಹಿಂದೂ ವಧುಗಳು ಕೆಂಪು ಬಣ್ಣವನ್ನು ಧರಿಸುತ್ತಾರೆ.ಏಕೆಂದರೆ ಕೆಂಪು ಬಣ್ಣವು ಆಕರ್ಷಕ ಬಣ್ಣವಾಗಿದೆ ಮತ್ತು ಎಲ್ಲರ ಗಮನವನ್ನು ಬೇಗನೆ ಸೆಳೆಯುತ್ತದೆ. ಇದಲ್ಲದೇ ಕೆಂಪು ಬಣ್ಣವು ಪ್ರೀತಿ ಮತ್ತು ಉತ್ಸಾಹದ ಭಾವನೆಗಳನ್ನು ಉಂಟುಮಾಡುತ್ತದೆ.ಇದೆಲ್ಲದರ ಕಾರಣದಿಂದಾಗಿ ಕೆಂಪು ಬಣ್ಣದ ಸೀರೆಯನ್ನು ವಧು ಹೆಚ್ಚಾಗಿ ಉಡುವುದು ಸಾಮಾನ್ಯವಾಗಿದೆ.