ನ್ಯೂಸ್ ನಾಟೌಟ್: ಸುಬ್ರಹ್ಮಣ್ಯ ದೇಗುಲದ ಬಳಿ ರಥ ಬೀದಿಯಲ್ಲಿ ನಿಲ್ಲಿಸಿದ್ದ ಯಾತ್ರಾರ್ಥಿಗಳ ಕಾರಿನ ಗಾಜು ಪುಡಿ ಮಾಡಿ ಬೆಲೆ ಬಾಳುವ ವಸ್ತುಗಳ ಕಳ್ಳತನ ಮಾಡಿದ್ದ ಆರೋಪಿ ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಆರೋಪಿಯಿಂದ ಚಿನ್ನಾಭರಣ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಹೊನ್ನವಳ್ಳಿ ಮೂಲದ ಪ್ರಭಾಕರ್ (35) ಎಂದು ತಿಳಿದು ಬಂದಿದೆ.ಈತ ಸುಬ್ರಹ್ಮಣ್ಯ ದೇಗುಲದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿನ ಗ್ರಾಸ್ ಪುಡಿ ಮಾಡಿ 14 ಗ್ರಾಮ್ ಚಿನ್ನವನ್ನು ಕದ್ದಿದ್ದ.ಘಟನೆ ನಡೆದು ಕೆಲವೇ ಸಮಯದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಕೂಡಲೇ ಸುಬ್ರಹ್ಮಣ್ಯ ರೈಲು ನಿಲ್ದಾಣ ಬಳಿ ಆತನನ್ನು ಹಿಡಿದು ಆತನಿಂದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಈತ ಕದಿಯುವುದರಲ್ಲಿ ಎಕ್ಸಪರ್ಟ್ ಆಗಿದ್ದು, ಕಳೆದ 15 ದಿನದ ಹಿಂದೆಯಷ್ಟೇ ಧರ್ಮಸ್ಥಳದಲ್ಲಿಯೂ 40ಗ್ರಾಮ್ ಚಿನ್ನವನ್ನು ಇದೇ ಮಾದರಿಯಲ್ಲಿ ಕದ್ದಿದ್ದೇನೆ ಎಂದು ಸುಬ್ರಮಣ್ಯ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಮಾತ್ರವಲ್ಲ, ಈತ ಸುಬ್ರಹ್ಮಣ್ಯದಲ್ಲಿಯೇ ಒಟ್ಟು ಎರಡು ಬಾರಿ ಈ ಅಪರಾಧವನ್ನು ಮಾಡಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಠಾಣಾಧಿಕಾರಿ ಕಾರ್ತಿಕ್ ಅವರ ನೇತೃತ್ವದಲ್ಲಿ ಮುರಳಿಧರ್ (ತನಿಖೆ ) ಹಾಗೂ ಎರಡು ತಂಡ ರಚಿಸಲಾಗಿದ್ದು ಈತನನ್ನು ಕೂಡಲೇ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಠಾಣಾ ಸಿಬ್ಬಂದಿಗಳಾದ ಕರುಣಾಕರ, ಮಹೇಶ್, ಕುಮಾರ್, ಆನಂದ್, ವಿಠ್ಠಲ್ ಬಸವರಾಜ್, ರೋಹಿತ್, ಕೃಷ್ಣ ಅವರು ಸಹಕರಿಸಿದ್ದಾರೆ.