ನ್ಯೂಸ್ ನಾಟೌಟ್: ದೇಶದ ಹಲವು ನಗರಗಳಲ್ಲಿ ಲುಲೂ ಮಾಲ್ ಶಾಖೆಗಳು ವಿಸ್ತರಣೆಗೊಂಡಿದೆ. ಇದೀಗ ಕೇರಳದ ಕೊಚ್ಚಿಯಲ್ಲಿರುವ ಲುಲೂ ಮಾಲ್ ವಿವಾದಕ್ಕೆ ಕಾರಣವಾಗಿದೆ. ಶಾಪಿಂಗ್ ಮಾಲ್ ಲುಲೂ ಭಾರಿ ಜನಪ್ರಿಯತೆ ಪಡೆದುಕೊಂಡಿದೆ ಈ ಮಾಲ್ ನಲ್ಲಿ ಈ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.
ವಿಶ್ವಕಪ್ ಟೂರ್ನಿ ಪ್ರಯುಕ್ತ ಲುಲೂ ಮಾಲ್ನಲ್ಲಿ ಕ್ರಿಕೆಟ್ ದೇಶಗಳ ಧ್ವಜಗಳನ್ನು ಹಾಕಿದ್ದಾರೆ ಎನ್ನಲಾದ ಫೋಟೋ ವೈರಲ್ ಆಗಿದ್ದು, ಆದರೆ ಭಾರತದ ತ್ರಿವರ್ಣ ಧ್ವಜಕ್ಕಿಂದ ದೊಡ್ಡದಾಗಿ ಪಾಕಿಸ್ತಾನ ಧ್ವಜ ಹಾಕಲಾಗಿದೆ. ಅಷ್ಟೇ ಅಲ್ಲದೆ ಭಾರತ ಹಾಗೂ ಇತರ ದೇಶಗಳ ಧ್ವಜಕ್ಕಿಂತ ಮೇಲೆ ಪಾಕ್ ಧ್ವಜ ಹಾಕಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿದೆ. ಹಲವರು ಈ ಕುರಿತು ಆಕ್ರೋಶ ಹೊರಹಾಕಿದ್ದಾರೆ. ಲುಲೂ ಮಾಲ್ ಧ್ವಜ ನಿಯಮ ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ. ಭಾರತದ ಧ್ವಜವನ್ನು ಚಿಕ್ಕದಾಗಿ, ಕೆಳಮಟ್ಟದಲ್ಲಿ ಹಾಕಿ, ಪಾಕಿಸ್ತಾನ ಧ್ವಜವನ್ನು ವಿಜ್ರಂಭಿಸುವ ಅವಶ್ಯಕತೆ ಏನಿತ್ತು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಪ್ರಶ್ನಿಸಿದ್ದಾರೆ.
ಕೇರಳ ಸ್ಟೋರಿ ಮುಂದಿನ ಭಾಗ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾದ್ದು, ಭಾರತದ ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಲಾಗಿದೆ ಅನ್ನೋ ಆರೋಪ ಒಂದೆಡೆಯಾದರೆ, ಶತ್ರು ದೇಶದ ಧ್ವಜವನ್ನು ದೊಡ್ಡದಾಗಿ ಹಾಕಿ ಯಾರನ್ನೂ ಒಲೈಕೆ ಮಾಡುತ್ತಿದ್ದಾರೆ ಅನ್ನೋ ಪ್ರಶ್ನೆಗಳು ಎದುರಾಗಿದೆ. ಹಲವರು ಸಾಮಾಜಿಕ ಮಾಧ್ಯಮದಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ.