ನ್ಯೂಸ್ ನಾಟೌಟ್: ಬೈಂದೂರು ಮೂಲದ ಬೆಂಗಳೂರು ಉದ್ಯಮಿಗೆ ಕೋಟಿ ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗೆ ನೋಟಿಸ್ ನೀಡಿದ್ದಾರೆ.
ಚೈತ್ರ ಕುಂದಾಪುರ ಬಂಧನದ ನಂತರ ಚೈತ್ರ ಇಡಿ ಗೆ ಬರೆದ ಪತ್ರದಲ್ಲಿ ವಜ್ರಾದೇಹಿ ಶ್ರೀ ಚಕ್ರವರ್ತಿ ಸೂಲಿಬೆಲೆ, ಹಾಗೂ ಸಿಟಿ ರವಿ ಹೆಸರು ಉಲ್ಲೇಖವಾಗಿತ್ತು. ಇದೀಗ ಸಿಸಿಬಿ ಮಂಗಳೂರು ಗುರುಪುರ ವಜ್ರಾದೇಹಿ ಮಠದ ರಾಜಶೇಖರಾನಂದ `ಸ್ವಾಮಿಜಿಗೆ ನೋಟಿಸ್ ಜಾರಿ ಮಾಡಿದೆ.
ಚೈತ್ರಾ ಕುಂದಾಪುರ (Chaitra Kundapura) ಐಟಿ ಇಲಾಖೆಗೆ ಬರೆದ ಪತ್ರದಲ್ಲಿ ವಿಶ್ವ ಹಿಂದು ಪರಿಷತ್ ಸಂಘಟನೆಯಲ್ಲಿ ಗುರುತಿಸಿರುವ ಮಂಗಳೂರಿನ ವಜ್ರದೇಹಿ ಮಠದ (Vajradehi Mutt) ರಾಜಶೇಖರಾನಂದ ಸ್ವಾಮೀಜಿ ಹೆಸರು ಕೇಳಿಬಂದಿತ್ತು. ‘ನನಗೂ ಆಕೆಯ ಪ್ರಕರಣಕ್ಕೂ ಸಂಬಂಧ ಇಲ್ಲ. ಜುಲೈ ತಿಂಗಳಲ್ಲಿ ಹಿಂದೂ ಸಂಘಟನೆಯ ಸತ್ಯಜಿತ್ ಸುರತ್ಕಲ್ ಫೋನ್ ಮಾಡಿದ್ದರು.
ಗೋವಿಂದ ಪೂಜಾರಿ ಟಿಕೆಟ್ ವಿಚಾರದಲ್ಲಿ ನನಗೆ ಪ್ರಶ್ನೆ ಮಾಡಿದ್ದರು. ಆದರೆ ನನಗೇನೂ ತಿಳಿದಿರಲಿಲ್ಲ, ನನ್ನಲ್ಲಿ ಯಾಕೆ ಪ್ರಶ್ನೆ ಮಾಡುವುದೆಂದು ಕೇಳಿದ್ದೆ. ಬಳಿಕ ಅವರೇ ಫೋನ್ ಮಾಡಿ, ಚೈತ್ರಾ ಮತ್ತು ಅಭಿನವ ಹಾಲಶ್ರೀ ಹೆಸರಿದೆ’ ಎಂದಿದ್ದರು.
ಚೈತ್ರಾ ಜೊತೆ ಸಂಪರ್ಕ ಇದ್ದುದರಿಂದ ಆಕೆಗೆ ಫೋನ್ ಮಾಡಿ ಸ್ಪಷ್ಟನೆ ಕೇಳಿದ್ದೆ. ಮೂರು ಕೋಟಿ ದುಡ್ಡಿನ ಬಗ್ಗೆ ಕೇಳಿದಾಗ, ಒಂದೂವರೆ ಇದ್ದಿದ್ದು ಮೂರು ಕೋಟಿ ಆಯ್ತಾ? ಇನ್ನು ಅದು 4-5 ಕೋಟಿ ಆಗಬಹುದು ಎಂದು ಆಕೆ ಹೇಳಿದ್ದಳು, ಸತ್ಯ ಹೇಳು ಎಂದಿದ್ದೆ. ಆಕೆ ತನಗೇನೂ ಗೊತ್ತಿಲ್ಲ ಎಂದಿದ್ದರು. ಈಗ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿದೆ.