ನ್ಯೂಸ್ ನಾಟೌಟ್: ಇಸ್ರೇಲ್-ಹಮಾಸ್ (Israel-Hamas Clash) ಸಂಘರ್ಷದ ವಿರುದ್ಧ ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ಯಾಲೆಸ್ತೀನ್ ಮತ್ತು ಇಸ್ರೇಲಿ ಪರ ಪ್ರತಿಭಟನಾಕಾರರ ಗುಂಪುಗಳು ಲಂಡನ್ನ ಹೈಸ್ಟ್ರೀಟ್ ಕೆನ್ಸಿಂಗ್ಟನ್ ಟ್ಯೂಬ್ ಸ್ಟೇಷನ್ನಲ್ಲಿ ಪರಸ್ಪರ ಘರ್ಷಣೆಗೆ ಇಳಿದ ಘಟನೆ ನಡೆದಿದೆ.
ಇಸ್ರೇಲ್ನಲ್ಲಿ (Israel) ಯುದ್ಧ ನಡೆಯುತ್ತಿದ್ದರೆ, ಇತ್ತ ಲಂಡನ್ನಲ್ಲಿ (London) ಎರಡೂ ಕಡೆಯ ಜನರು ಘರ್ಷಣೆಗಿಳಿದಿದ್ದರು. ಇಸ್ರೇಲಿ-ಪ್ಯಾಲೇಸ್ಟಿನಿಯನ್ ಪ್ರತಿಭಟನಾಕಾರರ ನಡುವಿನ ಉದ್ವಿಗ್ನತೆಯನ್ನು ತಡೆಯಲು ಪೊಲೀ ಸ್ ಅಧಿಕಾರಿಗಳು ಹರಸಾಹಸ ಪಟ್ಟರು.ಇಸ್ರೇಲಿ ರಾಯಭಾರ ಕಚೇರಿಯ ಹೊರಗೆ ನಡೆಯುತ್ತಿರುವ ಪ್ಯಾಲೆಸ್ಟೈನ್ ಪರವಾದ ರ್ಯಾಲಿ ವೇಳೆ ಮುಖಾಮುಖಿಯಾದ ಪ್ರತಿಭಟನಾಕಾರರನ್ನು ಪೊಲೀಸ್ ಅಧಿಕಾರಿಗಳು ತಡೆಯಲು ಪ್ರಯತ್ನಿಸುತ್ತಿರುವ ದೃಶ್ಯಗಳ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸೋಮವಾರ ಸಂಜೆ ಸುಮಾರು 6 ಗಂಟೆ ಸುಮಾರಿಗೆ ಈ ಘಟನೆ ನಡೆಯಿತು. ಇಸ್ರೇಲಿ ರಾಯಭಾರ ಕಚೇರಿಯ ಮುಂದೆ ಪ್ಯಾಲೆಸ್ಟೈನ್ ಪರ ಪ್ರತಿಭಟನೆಗೆ ಸಾವಿರಾರು ಜನರು ಜಮಾಯಿಸಿದರು. ಕೆಲವು ಪ್ರತಿಭಟನಾಕಾರರು ಧ್ವಜಗಳನ್ನು ಹಿಡಿದು ಘೋಷಣೆ ಕೂಗಿದರು. ‘ಇಸ್ರೇಲ್ ಭಯೋತ್ಪಾದಕ ರಾಷ್ಟ್ರ’ ಹಾಗೂ ‘ಅಲ್ಲಾಹು ಅಕ್ಬರ್’ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಕೆಲವರು ರಾಯಭಾರಿ ಕಚೇರಿಯತ್ತ ಪಟಾಕಿ ಸಿಡಿಸಿದರು.ಅಕ್ಟೋಬರ್ 7 ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿದ್ದರು.