ನ್ಯೂಸ್ ನಾಟೌಟ್ : ಕನ್ನಡದ ಬಿಗ್ ಬಾಸ್ ಸೀಸನ್ 10’ ಶುರುವಾಗಿದೆ.ಬಿಗ್ ಬಾಸ್ ಶೋ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ದಿನಗಳು ಕೊನೆಗೂ ಬಂದೇ ಬಿಟ್ಟಿವೆ.ಯಾರು ಸ್ಪರ್ಧಿಗಳು?ಯಾವಾಗ ಕಾರ್ಯಕ್ರಮ ಎಂದೆಲ್ಲಾ ತಲೆಯಲ್ಲಿ ಓಡಾಡುತ್ತಿದ್ದ ನೂರಾರು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಆದರೆ ಒಂದು ದಿನ ತಡವಾಗಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ ಅನ್ನೋದು ವಿಶೇಷ..!
ಅವರ ಎಂಟ್ರಿಯೇ ಅನೇಕರಿಗೆ ಅಚ್ಚರಿ ತಂದಿದೆ. ಯಾಕೆಂದ್ರೆ ಅವರು ಜನಪ್ರತಿನಿಧಿ. ಅಂದ್ರೆ ಜನರ ಮಧ್ಯೆ ಇರಬೇಕಾದವರು.ಮತದಾರರ ಆಯ್ಕೆಯಿಂದ ಎಂ.ಎಲ್.ಎ.ಆದವರು.ಹೀಗಾಗಿ ದೊಡ್ಮನೆಗೆ ತೆರಳಿರೋ ಬಗ್ಗೆ ಕೆಲವರು ಅಪಸ್ವರ ತೆಗೆದಿದ್ದಾರೆ.ಅವರು ಬಿಗ್ ಬಾಸ್ ಮನೆಗೆ ಕೆಲವು ದಿನಗಳ ಅತಿಥಿಯಾಗಿ ಹೋಗಿದ್ದಾರೆಯೋ ಅಥವಾ ಉಳಿದ ಸ್ಪರ್ಧಿಗಳಂತೆಯೇ ಅವರು ಇರುತ್ತಾರಾ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ.
ಈ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಪ್ರದೀಪ್ ಈಶ್ವರ್ ಪ್ರಬಲ ಪ್ರತಿಸ್ಪರ್ಧಿ ಬಿಜೆಪಿಯ ಡಾಕ್ಟರ್ ಸುಧಾಕರ್ ಅವರನ್ನು ಸೋಲಿಸಿದ್ದಾರೆ. ಈ ಬಗ್ಗೆ ಡಾ.ಸುಧಾಕರ್ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಪ್ರದೀಪ್ ಈಶ್ವರ್ ಅವರನ್ನು ಲೇವಡಿ ಮಾಡಿದ್ದಾರೆ.
ಒಬ್ಬ ರಾಜಕಾರಣಿ, ಜನಪ್ರತಿನಿಧಿಯಾಗಿ ಶಾಸಕರಾಗಿ ಈ ರೀತಿಯ ಶೋಗೆ ಹೋಗಿದ್ದು ಇದೆ ಮೊದಲು, ಬಿಗ್ ಬಾಸ್ಗೆ ಹೋಗುವ ಮೂಲಕ ನಗೆಪಾಟಲಿಗೆ ಈಡಾಗಿದ್ದಾರೆ. ಒಬ್ಬ ಎಂಎಲ್ಎ ಬಿಗ್ ಬಾಸ್ಗೆ ಹೋಗಿ ಕುಣಿದಾಡೋದು ಅಂದ್ರೆ ಏನರ್ಥ.ಇದೊಂದು ನಾಚಿಕೆಗೇಡಿನ ಸಂಗತಿ. ಬಿಗ್ ಬಾಸ್ನಲ್ಲಿ ಭಾಗಿಯಾಗುವ ಮೂಲಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾನ ಮರ್ಯಾದೆ ಕಳೆದಿದ್ದಾರೆ ಎಂದು ಸುಧಾಕರ್ ವ್ಯಂಗ್ಯವಾಡಿದರು.
ಚಿಕ್ಕಬಳ್ಳಾಪುರ ಕ್ಷೇತ್ರದ ಹೆಸರನ್ನು ಹಾಳು ಮಾಡಿದ್ದಾರೆ. ಇಂತಹ ವ್ಯಕ್ತಿಯನ್ನು ಆಯ್ಕೆ ಮಾಡಿದ ಜನರಿಗೆ ಈಗಾಗಲೇ ಮನವರಿಕೆಯಾಗಿದೆ.ಮುಂದಿನ ದಿನಗಳಲ್ಲಿ ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ ಗುಡುಗಿದರು.