ನ್ಯೂಸ್ ನಾಟೌಟ್ : ಮಾಜಿ ಪ್ರಧಾನಿ ಹೆಚ್.ಡಿ. ದೇವೇ ಗೌಡ ಹಾಗೂ ಪತ್ನಿ ಚನ್ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲೊಂದಾದ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಅ.8ರಂದು ರಾತ್ರಿ ಭೇಟಿ ನೀಡಿದರು.
ನಿನ್ನೆ ಮಧ್ಯಾಹ್ನದ ವೇಳೆ ದೇವೇಗೌಡ ದಂಪತಿ ಹೆಲಿಕಾಪ್ಟರ್ ಮೂಲಕ ಕುಕ್ಕೆಗೆ ಆಗಮಿಸಬೇಕಾಗಿತ್ತು.ಆದರೆ ಮೋಡ ಕವಿದ ವಾತಾವರಣದ ಹಿನ್ನೆಲೆ ಹೆಲಿಕ್ಯಾಪ್ಟರ್ ಟೆಕ್ ಆಫ್ ಆಗದ ಕಾರಣ ವಿಮಾನ ಮೂಲಕ ಮಂಗಳೂರಿಗೆ ಬಂದು ತಡರಾತ್ರಿ ಸುಬ್ರಹ್ಮಣ್ಯಕ್ಕೆ ದೇವೇಗೌಡ ದಂಪತಿ ಆಗಮಿಸಿದರು.
ರಾತ್ರಿ ಅಲ್ಲೇ ವಾಸ್ತವ್ಯವಾಗಿದ್ದು,ಇಂದು ಮುಂಜಾನೆ ವೇಳೆ ದೇವರ ದರ್ಶನ ಪಡೆದರು.ಈ ವೇಳೆ ಸಹಾಯಕರ ಸಹಾಯದಿಂದ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರು.ಬಳಿಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿಕೊಂಡರು.
ಈ ಸಂದರ್ಭ ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಹಾಗೂ ಸಿಬ್ಬಂದಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡ ಅವರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದರು.ಜೆಡಿಎಸ್ ಮುಖಂಡ,ಉದ್ಯಮಿ ಎಂ.ಬಿ. ಸದಾಶಿವ ಜತೆಗಿದ್ದರು.