ನ್ಯೂಸ್ ನಾಟೌಟ್ : ಆಕೆ ಭಾರತದ ರಾಷ್ಟ್ರೀಯ ಶೂಟರ್ ತಾರಾ ಶಹದೇವ್. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ಕೀರ್ತಿ ಭಾರತಕ್ಕೆ ತಂದಾಕೆ.ತಾರಾ ಭಾರತದ ಭರವಸೆಯ ಕ್ರೀಡಾಪಟುವಾಗಿ ಬೆಳೆದಿದ್ದಳು.ಆದರೆ ಈ ಮಧ್ಯೆ ಆಕೆಗೆ ರಂಜಿತ್ ಕೊಹ್ಲಿ ಅನ್ನೋ ವ್ಯಕ್ತಿಯ ಪರಿಚಯವಾಗುತ್ತೆ.ಈ ಪರಿಚಯ ಪ್ರೀತಿಯಾಗಿ ಮಾರ್ಪಟ್ಟಿತ್ತು..!
ಪ್ರೀತಿ ಅಂದ ಮೇಲೆ ಇನ್ನೇನು? ಹೇಗಿದ್ದರೂ ಹುಡುಗ ಇಷ್ಟವಾಗಿದ್ದಾನೆ.ತಾನು ಕನಸು ಕಂಡ ಹುಡುಗ ಸಿಕ್ಕಿದ್ದಾನೆ ಎಂದು ಮದುವೆಯಾಗಿದ್ದಾಳೆ. ಆದರೆ ಮದುವೆಯಾದ ನಂತರವೇ ಗೊತ್ತಾಗಿದ್ದು ತಾನು ಮೋಸ ಹೋಗಿದ್ದೇನೆಂದು ಯಾಕೆಂದರೆ ತಾನು ಪ್ರೀತಿಸಿದ್ದು ರಂಜಿತ್ ಕೊಹ್ಲಿಯನ್ನಲ್ಲ,ರಖೀಬುಲ್ ಹಸನ್ ಖಾನ್ನ್ನು ಎಂದು.ಹೌದು, ರಂಜಿತ್ ಕೊಹ್ಲಿಯ ಅಸಲಿ ಹೆಸರು ರಖೀಬುಲ್ ಹಸನ್ ಖಾನ್ ಆಗಿತ್ತು.
ಇಷ್ಟಾದರೂ ತೊಂದರೆಯಿರುತ್ತಿರಲಿಲ್ಲ.ಆದರೆ ರಖೀಬುಲ್ ಹಸನ್ ಖಾನ್ ತನ್ನ ಅಸಲಿ ಆಟ ಶುರುಮಾಡಿದ್ದ.ತಾರಾಳನ್ನು ಇಸ್ಲಾಂಗೆ ಮತಾಂತರವಾಗುವಂತೆ ಚಿತ್ರ ಹಿಂಸೆ ನೀಡಲು ಆರಂಭ ಶುರು ಮಾಡಿದ. ಇತ್ತ ರಖೀಬುಲ್ ತಾಯಿಯೂ ಇದಕ್ಕೆ ಸಾಥ್ ನೀಡಿದ್ದು ಇಬ್ಬರು ಒತ್ತಾಯ ಮಾಡಲು ಆರಂಭಿಸಿದ್ದಾರೆ.ಇದರಿಂದ ಬೇಸತ್ತ ತಾರ, ಪೊಲೀಸ್ ದೂರು ದಾಖಲಿಸಿದ್ದರು.
2017ರಲ್ಲಿ ಈ ಘಟನೆ ನಡೆದಿತ್ತು.ಬಳಿಕ ಈ ಪ್ರಕರಣ ದಾಖಲಾಗಿತ್ತು. ಇದೀಗ ದೆಹಲಿ ಸಿಬಿಐ ಕೋರ್ಟ್ ತೀರ್ಪು ನೀಡಿದ್ದು, ರಖೀಬುಲ್ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ರಖೀಬುಲ್ ತಾಯಿಗೂ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.ರಾಂಚಿ ಮೂಲದ ತಾರಾ ಶಹದೇವ್ ಅವರು 2015ರ ವೇಳೆಗೆ ಭಾರತೀಯ ಶೂಟರ್ ಕ್ಷೇತ್ರದಲ್ಲಿ ಭಾರಿ ಹೆಸರು ಗಳಿಸಿದ್ದರು.ಈ ಹೆಸರು ಮಾಧ್ಯಮಗಳಲ್ಲಿ ಹರಿಯಲಾರಂಭಿಸಿತು.ಈಕೆಯ ಪ್ರತಿಭೆಗೆ ಹಲವು ಆಫರ್ಗಳು ಬಂದಿದ್ದವು.ಆದರೆ ಈ ವೇಳೆ ರಖೀಬುಲ್ ಹಸನ್ ಖಾನ್, ಹಿಂದೂ ಉದ್ಯಮಿಯಂತೆ ಫೋಸ್ ನೀಡಿದ್ದ.ಶೂಟರನ್ನೇ ಪ್ರೀತಿಸಿದ ರಖೀಬುಲ್ ಮದುವೆಗೂ ಒಪ್ಪಿಸಿದ್ದ. ಪೋಷಕರ ವಿರೋಧ ಸೇರಿದಂತೆ ಹಲವರ ವಿರೋಧ ಕಟ್ಟಿಕೊಂಡ ಶೂಟರ್ ತಾರಾ ರಂಜಿತ್ ಕೊಹ್ಲಿ ಅಲಿಯಾಸ್ ರಖೀಬುಲ್ನ ಮದುವೆಯಾಗಿದ್ದರು.
ಇದಾದ ಬಳಿಕ ಇಸ್ಲಾಂಗೆ ಮತಾಂತರವಾಗಲು ಚಿತ್ರ ಹಿಂಸೆ ನೀಡಿದ್ದು, ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡಿದ್ದು, ಕೊನೆಗೂ ನೆಮ್ಮದಿ ಕಳೆದುಕೊಂಡು ತಾರಾ ಪೊಲೀಸ್ ದೂರು ನೀಡಲು ಮುಂದಾದರು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ಈ ವೇಳೆ ಇದೊಂದು ಲವ್ ಜಿಹಾದ್ ಪ್ರಕರಣ ಅನ್ನೋದು ಸ್ಪಷ್ಟವಾಗಿ ತಿಳಿದು ಬಂದಿದೆ. ದೂರು ದಾಖಲಾದ ಬೆನ್ನಲ್ಲೇ ರಖೀಬುಲ್ ಹಾಗೂ ಆತನ ತಾಯಿ ನಾಪತ್ತೆಯಾಗಿದ್ದರು. ಇತ್ತ ರಾಂಚಿ ಪೊಲೀಸರು ಹಾಗೂ ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ರಖೀಬುಲ್ ಹಾಗೂ ಆತನ ತಾಯಿಯನ್ನು ಬಂಧಿಸಿದ್ದರು.
ಲವ್ ಜಿಹಾದ್ ಷಡ್ಯಂತ್ರ ಪತ್ತೆ ಹಚ್ಚಿದ ಪೊಲೀಸರು ರಖೀಬುಲ್ ವಿರುದ್ಧ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಮೋಸದಿಂದ ಮದುವೆಯಾಗಿ ಇಸ್ಲಾಂಗೆ ಮತಾಂತರ ಮಾಡಲು ಯತ್ನಿಸಿದ ರಖೀಬುಲ್ ಹಸನ್ ಹಾಗೂ ಆತನ ತಾಯಿಯನ್ನು ಸಿಬಿಐ ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ. ರಖೀಬುಲ್ಗೆ ಜೀವಾವಧಿ ಶಿಕ್ಷೆ ವಿಧಿಸಿದರೆ, ಇತ್ತ ಆತನ ತಾಯಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.