ನ್ಯೂಸ್ ನಾಟೌಟ್: ಕಡಲ ತೀರದಲ್ಲಿ ಅಪರೂಪದ ಬೃಹತ್ ಪ್ರಾಣಿಯ ಉಸಿರು ಚೆಲ್ಲಿದ ದೇಹವೊಂದು ಪತ್ತೆಯಾಗಿದೆ.ಈ ಬೃಹತ್ ಜೀವಿಯನ್ನು ಕಂಡು ಜನ ದಂಗಾಗಿದ್ದು ಸದ್ಯ ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಸಕತ್ ವೈರಲ್ ಆಗಿದೆ.
ಕೇರಳದ ಕಲ್ಲಿಕೋಟೆ (Kozhikode) ಕಡಲ ತೀರದಲ್ಲಿ ಈ ಪ್ರಾಣಿಯ ದೇಹ ಪತ್ತೆಯಾಗಿದ್ದು, ಬೃಹತ್ ತಿಮಿಂಗಿಲ ಎಂದು ಹೇಳಲಾಗಿದೆ. ಈ ಅಪರೂಪದ ನೀಲಿ ತಿಮಿಂಗಿಲಕ್ಕೆ ಸುಮಾರು 80-100 ವರ್ಷ ವಯಸ್ಸಾಗಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆʼ ಎಂದು ಕ್ಯಾಪ್ಶನ್ ಬರೆಯಲಾಗಿದೆ. ಈ ಅಪರೂಪದ ಪ್ರಾಣಿಯನ್ನು ನೋಡಲು ಜನರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದು, ವಿಡಿಯೊದಲ್ಲಿ ಸೆರೆಯಾಗಿದೆ.
ಅಕ್ಟೋಬರ್ 1ರಂದು ಪೋಸ್ಟ್ ಮಾಡಲಾಗಿರುವ ವಿಡಿಯೋ ವೀಕ್ಷಿಸಿ ಅನೇಕ ಮಂದಿ ಈ ನೀಲ ತಿಮಿಂಗಿಲ ಕಡಲ ತೀರದಲ್ಲಿ ಕಂಡುಬಂದ್ದಿದ್ದು ಹೇಗೆ ಅನ್ನೋದರ ಬಗ್ಗೆ ಕುತೂಹಲದಿಂದ ಪ್ರಶ್ನೆ ಮಾಡುತ್ತಿದ್ದಾರೆ.ಈ ತಿಮಿಂಗಿಲ ಸುಮಾರು 50 ಅಡಿಗಳಷ್ಟು ಉದ್ದದ ದೇಹ ಹೊಂದಿದ್ದು, ಹೆಚ್ಚು ಕಡಿಮೆ ತೂಕ ಸುಮಾರು 5 ಟನ್ ಇರಬಹುದು ಎಂದು ಅಂದಾಜಿಸಲಾಗಿದೆ.ಆಳ ಇಲ್ಲದೇ ಈ ರೀತಿಯ ದುರಂತಕ್ಕೆ ಸಿಲುಕಿರಬಹುದೆಂದು ಆಂದಾಜಿಸಲಾಗಿದೆ.
ಈ ವಿಡಿಯೊ ನೋಡಿದ ನೆಟ್ಟಿಗರು ”ದಯವಿಟ್ಟು ಆ ತಿಮಿಂಗಿಲದ ಬಳಿ ಹೋಗಬೇಡಿ. ಅದು ಹೆಪ್ಪುಗಟ್ಟಿದರೆ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ. ಇನ್ನೂ ಕಲೆವರು ಇದು ಬಹಳ ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.
ಹೀಗೊಂದು ಕುತೂಹಲ ಕೆಲವರಲ್ಲಿದೆ.ಇಂತಹ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.ದೊಡ್ಡ ತಿಮಿಂಗಿಲಗಳು ಶಾಶ್ವತವಾಗಿ ಕಣ್ಣು ಮುಚ್ಚಿದಾಗ ಅದರ ದೇಹದ ಒಳಗೆ ಅನಿಲಗಳು ನಿರ್ಮಾಣವಾದಾಗ ಸ್ಫೋಟಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಈ ಸ್ಫೋಟ ಸಣ್ಣ ಪ್ರಮಾಣದಲ್ಲಿದ್ದರೆ ಇನ್ನು ಕೆಲವೊಮ್ಮೆ ಬೃಹತ್ ಪ್ರಮಾಣದಲ್ಲಿರುತ್ತದೆ.ಇದಕ್ಕೆ ಉದಾಹರಣೆಗಳೂ ಇವೆ ಎನ್ನುತ್ತಿದ್ದಾರೆ ತಜ್ಞರು.