ನ್ಯೂಸ್ ನಾಟೌಟ್ :ದೆಹಲಿಯಲ್ಲಿ ಭೂಕಂಪನವಾಗಿರುವ ಬಗ್ಗೆ ವರದಿಯಾಗಿದ್ದು, 4.6ರ ತೀವ್ರತೆಯ ಭೂಕಂಪನವಾಗಿದೆ ಎಂದು ತಿಳಿದು ಬಂದಿದೆ.ಭೂಕಂಪನ ಅನುಭವವಾಗುತ್ತಿದ್ದಂತೆ ಮನೆ, ಕಚೇರಿ, ಕಟ್ಟಡದಲ್ಲಿದ್ದ ಜನರು ಹೊರಗೆ ಓಡಿದ್ದಾರೆ. ಇಂದು ಮಧ್ಯಹ್ನ ವೇಳೆ 2.25ಕ್ಕೆ ದೆಹಲಿಯಲ್ಲಿ ಭೂಕಂಪನವಾಗಿದೆ ಎಂದು ತಿಳಿದು ಬಂದಿದೆ.
ದೆಹಲಿಯಲ್ಲಿ ಎರಡು ಭಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ದೆಹಲಿಯಲ್ಲಿ ಸಂಭವಿಸಿದ ಲಘು ಭೂಕಂಪನದಲ್ಲಿ ಅನಾಹುತಗಳ ಕುರಿತು ವರದಿಯಾಗಿಲ್ಲ.ಭೂಕಂಪದ ಕೇಂದ್ರ ಬಿಂದು ನೇಪಾಳ.ಲುಂಬಿನಿ ಪ್ರಾಂತ್ಯ, ಗುಲಾರಿಯಾ ಸೇರಿದಂತೆ ನೇಪಾಳದ ಹೆಲವೆಡೆ 6.2ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಇದರ ತೀವ್ರತೆ ರಾಷ್ಟ್ರರಾಧಾನಿ ವ್ಯಾಪ್ತಿಯಲ್ಲಿ ಗೋಚರಿಸಿದೆ. ಭೂಕಂಪನ ಬೆನ್ನಲ್ಲೇ ದೆಹಲಿ ಪೊಲೀಸರು ಸಹಾಯವಾಣಿ ತರೆದಿದ್ದಾರೆ ಎಂದು ತಿಳಿದು ಬಂದಿದೆ.
ಯಾರು ಆತಂಕಪಡುವ ಅಗತ್ಯವಿಲ್ಲ. ಕಟ್ಟಡ, ಕಚೇರಿ, ಮನೆಯೊಳಗಿದ್ದರೆ ಹೊರಬಂದು ಸುರಕ್ಷಿತ ತಾಣದಲ್ಲಿ ಸೇರಿ. ಹೊರಬರುವಾಗ ಲಿಫ್ಟ್ ಬಳಕೆ ಮಾಡಬೇಡಿ ಎಂದು ದೆಹಲಿ ಪೊಲೀಸರು ಮನವಿ ಮಾಡಿದ್ದಾರೆ. ನೇಪಾಳದಲ್ಲಿ 6.2ರ ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದ್ದು, ಇದಾದ ಬಳಿಕ ಭಾರತದ ಹಲವು ಭಾಗದಲ್ಲಿ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ. ದೆಹಲಿ ಭೂಕಂಪನಕ್ಕೂ ಒಂದು ಗಂಟೆ ಮೊದಲು ಅಸ್ಸಾಂ ಹಾಗೂ ಹರ್ಯಾಣದ ಸೋನಿಪತ್ನಲ್ಲಿ ಭೂಕಂಪನ ಸಂಭವಿಸಿತ್ತು ಎಂದು ಹೇಳಲಾಗಿದೆ.
ಕಳೆದ ತಿಂಗಳಷ್ಟೇ ಅಟ್ಲಾಂಟಿಕ್ ಸಮುದ್ರ ತೀರದಲ್ಲಿರುವ ಮೊರಾಕ್ಕೊ ದೇಶದಲ್ಲಿಭೂಕಂಪ ಸಂಭವಿಸಿ 2 ಸಾವಿರಕ್ಕೂ ಹೆಚ್ಚು ಮಂದಿ ಅಸುನೀಗಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ ಕರ್ನಾಟಕದ ಬೀದರ್ನಲ್ಲೂ ಭೂಕಂಪ ಸಂಭವಿಸಿತ್ತು.