ನ್ಯೂಸ್ ನಾಟೌಟ್ : ಸಾಲು ಸಾಲು ಸಾರ್ವಜನಿಕ ರಜೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ಪ್ರವಾಸಿಗರ ದಂಡು ಹರಿದುಬಂದಿದೆ. ಇದರಿಂದಾಗಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ಬಂದ ದೃಶ್ಯ ಕಂಡು ಬಂದಿತ್ತು.
ಪ್ರವಾಸಿಗರ ಆಗಮನ ಹೆಚ್ಚಳ ಹಿನ್ನೆಲೆಯಲ್ಲಿ ಹೋಂಸ್ಟೇ, ರೆಸಾರ್ಟ್ ಗಳು ಹಾಗೂ ಹೊಟೇಲ್ಗಳು ಹೌಸ್ ಫುಲ್ ಆಗಿದ್ದು,ಹಲವು ಪ್ರವಾಸಿ ತಾಣಗಳಿಗೆ ಪ್ರವಾಸಿಗರು ತೆರಳಿ ಸಂಭ್ರಮಿಸಿದರು.ಕುಶಾಲನಗರ ತಾಲೂಕಿನ ಕಾವೇರಿ ನಿಸರ್ಗಧಾಮದಲ್ಲಿಯೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.
ಇನ್ನು ಹೇಗಿದ್ದರೂ ಕೊಡಗು ತಂಪಾದ ಪ್ರದೇಶ.ತುಂಬಾ ಜನ ಇಲ್ಲಿನ ವಾತಾವರಣವನ್ನು ಇಷ್ಟ ಪಡುತ್ತಾರೆ.ಅದರ ಮಧ್ಯೆ ಜಿಲ್ಲೆಯಲ್ಲಿ ಕಳೆದ ಮುರ್ನಾಲ್ಕು ದಿನದಿಂದ ಮಳೆ ಕೂಡ ಆಗುತ್ತಿದ್ದು,ತುಂಬಾ ಮಂದಿಗೆ ಇದು ಇನ್ನೂ ಮುದ ನೀಡಿತು.ತಂಪಾದ ವಾತಾವರಣದಲ್ಲಿ ಪ್ರವಾಸಿಗರು ಮಜಾ ಮಾಡಿದರು.
ಮಡಿಕೇರಿ ನಗರದ ಅಬ್ಬಿಫಾಲ್ಸ್, ರಾಜಾಸೀಟು ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಮಾಮೂಲಿ ದಿನಗಳಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಕಂಡು ಬಂದರು. ಕೊಡಗಿನ ಕಣ್ಮನ ಸೆಳೆಯುವ ನೈಸರ್ಗಿಕ ಸೌಂದರ್ಯವನ್ನು ನೋಡಿ ಆಹ್ಲಾದಿಸಿರು.