ನ್ಯೂಸ್ ನಾಟೌಟ್: ಫುಟ್ಬಾಲ್ ಕೂಟದಲ್ಲಿ ಜಗಳವಾಗಿ ಆಸ್ಪತ್ರೆ ಸೇರಿದ್ದನ್ನು ನೋಡಿದ್ದೇವೆ. ಆದರೆ ಜಂಟ್ಲ್ ಮ್ಯಾನ್ ಆಟ ಎಂದೇ ಕರೆಯಿಸಲ್ಪಡುವ ಕ್ರಿಕೆಟ್ ನಲ್ಲೂ ಇಂತಹ ಹೊಡೆದಾಟವೊಂದು ನಡೆದಿದೆ ಎಂದರೇ ನೀವು ನಂಬ್ತೀರಾ..? ಹೌದು, ಇಂತಹದ್ದೊಂದು ದೊಡ್ಡ ಹೊಡೆದಾಟ ನಡೆದಿದ್ದು ಬಾಂಗ್ಲಾದೇಶ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ. ಆಟಗಾರರು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಂಪೈರ್ ನೀಡಿದ ತಪ್ಪು ತೀರ್ಪು. ಅಂಪೈರ್ ಬೌಂಡರಿ ನೀಡದ ಹಿನ್ನೆಲೆಯಲ್ಲಿ ಉಭಯ ತಂಡಗಳ ನಡುವೆ ವಾಗ್ವಾದ ನಡೆದು ಆ ಬಳಿಕ ಕಾದಾಟಕ್ಕೆ ಕಾರಣವಾಯಿತು. ಆಯೋಜಕರು ಈ ಗಲಾಟೆಯನ್ನು ನಿಲ್ಲಿಸಲು ಪ್ರಯತ್ನಿಸಿದರೂ ಅವರಿಂದ ಸಾಧ್ಯವಾಗಲಿಲ್ಲ ಬಳಿಕ ಪಂದ್ಯವನ್ನು ರದ್ದು ಪಡಿಸಲಾಯಿತು. ಗಲಾಟೆಯ ಬಳಿಕ ನಟಿಯೊಬ್ಬರು ಅಳುತ್ತಾ ಮಾತನಾಡಿದ ವಿಡಿಯೊ ವೈರಲ್ ಆಗಿದೆ. ಸೆಲೆಬ್ರೆಟಿಗಳ ಜಗಳ ಕಂಡು ಇದು ಸಿನೆಮಾ ಅಲ್ಲ ಕ್ರಿಕೆಟ್ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಬಾಂಗ್ಲಾದೇಶ ಕ್ರಿಕೆಟ್ ಲೀಗ್ನಲ್ಲಿ ಈ ರಿತಿಯ ಗಲಾಟೆಗಳು ಹೆಚ್ಚಾಗಿ ಸಂಭವಿಸುತ್ತಿರುತ್ತದೆ. ಅಂತಾರಾಷ್ಟ್ರೀಯ ಆಟಗಾರರ ಕ್ರಿಕೆಟ್ ಲಿಗ್ನಲ್ಲಿಯೂ ಈ ರೀತಿಯ ಹಲವು ಘಟನೆ ನಡೆದ ನಿದರ್ಶನಗಳಿಗೆ ಹೆಚ್ಚಾಗಿ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಅವರೇ ಗಲಾಟೆ ಮಾಡಿದ ಆಟಗಾರನಾಗಿದ್ದಾರೆ. ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅವರು ಫೀಲ್ಡ್ ನಲ್ಲಿ ತಮ್ಮ ಕೋಪದ ಕಾರಣದಿಂದಲೇ ಅಂಪೈರ್ ಜತೆ ಜಗಳವಾಡಿ ವಿಕೆಟ್ ಗಳನ್ನು ಕಿತ್ತು ಎಸೆದಿದ್ದರು.
ಬಾಂಗ್ಲಾದೇಶ ಕ್ರಿಕೆಟ್ ಲೀಗ್ನಲ್ಲಿ ಈ ರಿತಿಯ ಗಲಾಟೆಗಳು ಹೆಚ್ಚಾಗಿ ಸಂಭವಿಸುತ್ತಿರುತ್ತದೆ. ಅಂತಾರಾಷ್ಟ್ರೀಯ ಆಟಗಾರರ ಕ್ರಿಕೆಟ್ ಲಿಗ್ನಲ್ಲಿಯೂ ಈ ರೀತಿಯ ಹಲವು ಘಟನೆ ನಡೆದ ನಿದರ್ಶನಗಳಿಗೆ ಹೆಚ್ಚಾಗಿ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಅವರೇ ಗಲಾಟೆ ಮಾಡಿದ ಆಟಗಾರನಾಗಿದ್ದಾರೆ. ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅವರು ಫೀಲ್ಡ್ ನಲ್ಲಿ ತಮ್ಮ ಕೋಪದ ಕಾರಣದಿಂದಲೇ ಅಂಪೈರ್ ಜತೆ ಜಗಳವಾಡಿ ವಿಕೆಟ್ ಗಳನ್ನು ಕಿತ್ತು ಎಸೆದಿದ್ದರು. ಇದೇ ವರ್ಷ ಜನವರಿಯಲ್ಲಿ ನಡೆದಿದ್ದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ನಲ್ಲಿ ಶಕೀಬ್ ಅಲ್ ಹಸನ್ ಅಂಪಾಯರ್ ಜತೆ ರೇಗಾಡಿದ್ದರು. ಫಾರ್ಚೂನ್ ಬಾರಿಶಾಲ್ ಮತ್ತು ಸಿಲ್ಹೆಟ್ ಸ್ಟ್ರೈಕರ್ಸ್ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿತ್ತು.