ನ್ಯೂಸ್ ನಾಟೌಟ್:ತನ್ನ ಜಾಗಕ್ಕೆ ದನಗಳು ಪ್ರವೇಶ ಮಾಡುತ್ತಿವೆ ಎನ್ನುವ ಒಂದೇ ಕಾರಣಕ್ಕೆ ಗೋವುಗಳಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉಡುಪಿಯಿಂದ ವರದಿಯಾಗಿದೆ.ಕಟುಕನೋರ್ವ ಈ ಕೃತ್ಯವೆಸಗಿದ್ದು, ದನ ಕರುಗಳನ್ನು ಗುಂಡಿಟ್ಟು (Man Shoots and kills cows) ಸಾಯಿಸಿದ್ದಾನೆ.
ಈ ಘಟನೆ ನಡೆದಿದ್ದು ಉಡುಪಿ ಜಿಲ್ಲೆ (Udupi News) ಬೈಂದೂರಿನ ಬೆಳ್ಳಾಲ ಗ್ರಾಮದ ಅಂಗಡಿಜಡ್ಡು ಎಂಬಲ್ಲಿ.ಅಲ್ಲಿ ವಾಸವಾಗಿರುವ ನರಸಿಂಹ ಎಂಬಾತ ನಾಲ್ಕು ಹಸುಗಳನ್ನು ಕೊಂದಿದ್ದು ಅಲ್ಲದೇ ೧೫ ಹಸುಗಳು ಗಂಭೀರ ಗಾಯಗೊಂಡಿವೆ.
ಮಾತು ಬಾರದ ಮೂಕ ಪ್ರಾಣಿಯನ್ನು ಕೊಂದ ಈ ಪಾಪಿ ಅದನ್ನು ಗುಂಡಿಟ್ಟು ಕೊಲ್ಲುವಂತಹ ಅವಶ್ಯಕತೆ ಆದರೂ ಏನಿತ್ತು ಎಂದು ಅಲ್ಲಿನ ಜನ ಪ್ರಶ್ನಿಸುತ್ತಿದ್ದಾರೆ.ಈ ಭಾಗ ಪಶ್ಚಿಮ ಘಟ್ಟದ ತಪ್ಪಲಾಗಿರುವುದರಿಂದ ಕಾಡು ಪ್ರಾಣಿಗಳ ಉಪಟಳ ತಡೆಯಲು ಸರ್ಕಾರ ನಾಡಕೋವಿಗೆ ಪರವಾನಗಿಯನ್ನು ಕೊಡುತ್ತಿದೆ.ಹೀಗಾಗಿ ನರಸಿಂಹ ಎಂಬಾತನಲ್ಲೂ ನಾಡಕೋವಿ ಇದೆ.ಆದರೆ ಇದನ್ನು ಬಡಪಾಯಿ ಪ್ರಾಣಿಗಳ ಹತ್ಯೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನರಸಿಂಹನಿಗೆ ನಮ್ಮ ಜತೆ ಹೇಳಬಹುದಿತ್ತು.ಅಥವಾ ತನ್ನ ಜಮೀನಿಗೆ ಬಂದ ಹಸುಗಳನ್ನು ಬೈದೋ, ಹೊಡೆದೋ, ಕಲ್ಲೆಸೆದೋ ಓಡಿಸಬಹುದಾಗಿತ್ತು.ಆದರೆ ಅದರ ಬದಲು ನಾವು ಕಷ್ಟ ಪಟ್ಟು ಸಾಕಿದ ದನಗಳನ್ನು ಒಂದೇ ನಿಮಿಷದಲ್ಲಿ ಮುಗಿಸುವ ಅವಶ್ಯಕತೆ ಆದರೂ ಏನಿತ್ತು ಎಂದು ದನಗಳ ಮಾಲೀಕರು ಆರೋಪಿಸಿದ್ದಾರೆ.
ಈವರೆಗೆ ನಾಲ್ಕು ಹಸುಗಳು ಪ್ರಾಣ ಕಳೆದುಕೊಂಡಿದ್ದು,ಇದರಲ್ಲಿ ಗುಲಾಬಿ ಎಂಬ ಮಹಿಳೆಯ ಎರಡು ಹಸುಗಳು ಸೇರಿವೆ.ಈ ನಡುವೆ, ಸುಮಾರು ಆರು ಹಸುಗಳು ಆತನ ಗುಂಡಿನಿಂದ ಗಾಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿವೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಬಗ್ಗೆ ಮಾಲೀಕರಿಗೆ ಬೆದರಿಕೆ ಹಾಕಿರುವ ನರಸಿಂಹ “ನನ್ನ ಜಮೀನಿಗೆ ಯಾವುದೇ ದನ ಕರುಗಳು ಬರಬಾರದು, ಬಂದರೆ ಗುಂಡಿಟ್ಟು ಸಾಯಿಸುತ್ತೇನೆ ಎಂದು ಹೇಳಿದ್ದಾನಂತೆ. ಮಾತ್ರವಲ್ಲ ದನಗಳನ್ನು ಜಾಗ್ರತೆ ಮಾಡದಿದ್ದಲ್ಲಿ ದನಗಳಿಗಾದ ಗತಿ ನಿಮಗೂ ಬರುತ್ತದೆ ಎಂದು ಹೇಳಿದ್ದಾನೆ ಎಂದು ಇದೀಗ ಗುಲಾಬಿ ಎಂಬ ಮಹಿಳೆ ಹಾಗೂ ಇತರರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ದೂರು ದಾಖಲಿಸುತ್ತಿದ್ದಂತೆಯೇ ಆರೋಪಿ ನರಸಿಂಹ ನಾಪತ್ತೆಯಾಗಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ಈಗ ಬಲೆ ಬೀಸಿದ್ದಾರೆ.