ನ್ಯೂಸ್ ನಾಟೌಟ್: ಕಾವೇರಿ ನೀರು (Cauvery water) ಹರಿಸುವ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ಇಂದು ಕಾವೇರಿ ನೀರು ಬಿಡುಗಡೆ ವಿಚಾರವಾಗಿ ನಡೆದ ಸಭೆಯಲ್ಲಿ CWRC ಆದೇಶವನ್ನು CWMA ಎತ್ತಿ ಹಿಡಿದಿದ್ದು, ಹಳೆಯ ಆದೇಶದಂತೆ 18 ದಿನ 3000 ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿದೆ.
ಅಕ್ಟೋಬರ್ 15ರ ವರೆಗೂ ತಮಿಳುನಾಡಿಗೆ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಸಭೆಯಲ್ಲಿ ಆದೇಶ ನೀಡಲಾಗಿದೆ. ಇದರೊಂದಿಗೆ ರಾಜ್ಯ ಸರ್ಕಾರಕ್ಕೆ (State Govt) ನೀರು ಹರಿಸಬೇಕಾದ ಸಂದ್ಗಿತ ಸ್ಥಿತಿ ಎದುರಾಗಿದ್ದು, ಇಂದು ನಿವೃತ್ತ ನಾಯಮೂರ್ತಿಗಳು ಹಾಗೂ ತಜ್ಞರ ಸಭೆ ನಡೆಸಲಿರುವ ಸಿಎಂ ಸಿದ್ದರಾಮಯ್ಯ, CWRC ಆದೇಶವನ್ನು ಪಾಲಿಸಿ ನೀರು ಹರಿಸುತ್ತಾರಾ ಅಥವಾ ಕಠಿಣ ನಿರ್ಧಾರವನ್ನು ಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ.
ಕಳೆದ ಬಾರಿಯ ಆದೇಶದ ನಡುವೆಯೂ ಈ ಬಾರಿ ಆದರೂ ಸಿಬ್ಲ್ಯೂಎಂಎ ಸಭೆಯ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈ ಹಿಂದಿನ ಆದೇಶವನ್ನು ಎತ್ತಿ ಹಿಡಿದ ಸಿಬ್ಲ್ಯೂಎಂಎ ಕರ್ನಾಟಕಕ್ಕೆ ಶಾಕ್ ನೀಡಿದ್ದಾರೆ. ಇವತ್ತಿನ ಸಭೆಯಲ್ಲಿ ಕರ್ನಾಟಕ ನೀರಾವರಿ ಅಧಿಕಾರಿ ರಾಕೇಶ್ ಸಿಂಗ್ ನೇರವಾಗಿ ಭಾಗಿಯಾಗಿ ಕರ್ನಾಟಕ ಜಲಾಶಯದ ನೀರಿನ ಬಗ್ಗೆ ಮಾಹಿತಿ ನೀಡಿದ್ದರು.
ಆದರೆ ತಮಿಳುನಾಡಿನ ಅಧಿಕಾರಿಗಳು ತಮ್ಮ ಮೊಂಡು ವಾದವನ್ನ ಮುಂದುವರೆಸಿದ್ದರು. ಈಗ ಬಾಕಿ ಉಳಿಸಿಕೊಂಡಿರುವ 12 ಟಿಎಂಸಿ ನೀರನ್ನು ಮೊದಲು ಬಿಡುಗಡೆ ಮಾಡುವಂತೆ ಪಟ್ಟು ಹಿಡಿದಿದ್ದರು. ಇದರಿಂದ ಕರ್ನಾಟಕ ಅಧಿಕಾರಿಗಳು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದರು. ಇಷ್ಟಾದರೂ ಪ್ರಾಧಿಕಾರದ ಅಧಿಕಾರಿಗಳು ಈ ಹಿಂದಿನ ಆದೇಶವನ್ನೇ ಎತ್ತಿ ಹಿಡಿದಿದ್ದಾರೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಸಿಡಬ್ಲ್ಯೂಎಂಎ ಆದೇಶ ಏನ್ ಬಂದಿದೆ ಅಂತ ಗೊತ್ತಿಲ್ಲ, ಸದ್ಯ ಮಾಹಿತಿ ಪಡೆದುಕೊಳ್ಳುತ್ತೇನೆ. ಇವತ್ತು ಪ್ರಾಧಿಕಾರದಲ್ಲಿ ಸಭೆ ಇತ್ತು, ಆದೇಶದ ಬಗ್ಗೆ ಕಾನೂನು ತಜ್ಞರ ಜತೆ ಚರ್ಚೆ ಮಾಡುತ್ತೇವೆ. ಈ ಆದೇಶವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ ಮಾಡಬಹುದಾ ಅಂತ ಕಾನೂನು ತಂಡದ ಜತೆ ಮಾತಾಡುತ್ತೇವೆ ಎಂದಿದ್ದಾರೆ.
ಇವತ್ತು ನಿವೃತ್ತ ನ್ಯಾಯಾಧೀಶರ ಸಭೆ ಕರೆದಿದ್ದೇನೆ. ಇವರ ಜತೆಗೂ ಮಾತಾಡಿ ಮುಂದೇನು ಮಾಡಬೇಕು ಅಂತ ನೋಡ್ತೇವೆ. ನಾವು ನಮ್ಮ ಎಲ್ಲಾ ವಾಸ್ತವ ಅಂಶಗಳನ್ನು ಸಿಡಬ್ಲ್ಯೂಆರ್ಸಿ, ಸಿಡಬ್ಲ್ಯೂಎಂಎ ಮುಂದೆ ಇಟ್ಟಿದ್ದೇವೆ. ಆದರೂ ನಮಗೆ ನ್ಯಾಯ ಸಿಕ್ತಾ ಇಲ್ಲ, ಇವತ್ತು ಮಾತಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳತ್ತೇವೆ ಎಂದು ಹೇಳಿದ್ದಾರೆ.