ನ್ಯೂಸ್ ನಾಟೌಟ್ : ಕೆಲವರ ವೇಷ ಭೂಷಣ ನೋಡಿದ ಕೂಡಲೇ ಇವರು ರಿಚ್ ಇರಬಹುದು,ಇವರ ಬಳಿ ಧಾರಾಳ ಹಣವಿರಬಹುದು ಅಂದುಕೊಳ್ಳುತ್ತೇವೆ.ಆದರೆ ಸರಳವಾಗಿ ಇರುವವರನ್ನು ಕಂಡಾಗ ಅಯ್ಯೋ ಪಾಪ.. ಇವರಿಗೆ ಬಡತನವಿರಬೇಕು.ಹಣವೇ ಇಲ್ವೇನೋ ಅನಿಸಿಬಿಡುತ್ತೆ.ಆದರೆ ಕೆಲವೊಂದು ಸಲ ನಮ್ಮ ಕಲ್ಪನೆಗಳು ನಿಜವಾಗದೇ ಇರಬಹುದು.ಯಾಕೆಂದ್ರೆ ಕೆಲವರು ಎಷ್ಟೇ ಶ್ರೀಮಂತರಾದರೂ ಸರಳವಾಗಿ ಕಾಣಿಸಿಕೊಳ್ಳುತ್ತಾರೆ ಆ ಲಿಸ್ಟ್ ನಲ್ಲಿ ಇಲ್ಲೊಬ್ಬರು ವ್ಯಕ್ತಿ ಸೇರಿಕೊಳ್ಳುತ್ತಾರೆ.
ಮಿಲಿಯನೇರ್ ಅಂದ ಕೂಡಲೇ ಜನರ ಕಲ್ಪನೆಯಲ್ಲಿ ಬರೋದು ಗ್ಲಾಮರ್, ಸೂಟು, ಬೂಟು ಮತ್ತು ದೊಡ್ಡ ಕಾರುಗಳು…ಆದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ್ರೆ ನಿಮ್ಗೆ ಶಾಕ್ ಆಗದೇ ಇರಲ್ಲ.ಹೌದು, ತುಂಬಾ ಸಾಧಾರಣವಾಗಿ ಕಾಣುವ ವ್ಯಕ್ತಿಯೊಬ್ಬರು ತನ್ನ ಬಳಿ ಕೋಟಿಗಟ್ಟಲೆ ಷೇರುಗಳಿವೆ ಎಂದು ಹೇಳಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ. ಟ್ವಿಟರ್ ಖಾತೆಯಲ್ಲಿ ರಾಜೀವ್ ಮೆಹ್ತಾ ಎಂಬ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.ಇದು ಲಕ್ಷಾಂತರ ಜನರ ಅಚ್ಚರಿತನಕ್ಕೆ ಕಾರಣವಾಗಿದೆ.ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯು ಸಿಂಪಲ್ ಆಗಿದ್ದು, ಪ್ರಸ್ತುತ 100 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಷೇರುಗಳನ್ನು ಹೊಂದಿದ್ದಾರಂತೆ..!
ಅವರು 80 ಕೋಟಿ ರೂಪಾಯಿ ಮೌಲ್ಯದ ಎಲ್ & ಟಿ ಷೇರುಗಳು, 21 ಕೋಟಿ ರೂಪಾಯಿ ಮೌಲ್ಯದ ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಮತ್ತು 1 ಕೋಟಿ ರೂಪಾಯಿ ಮೌಲ್ಯದ ಕರ್ಣಾಟಕ ಬ್ಯಾಂಕ್ ಷೇರುಗಳನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ. ಹೀಗೆ ನೋಡಿದರೆ ಅವರ ಬಳಿ 102 ಕೋಟಿ ರೂ. ಷೇರುಗಳಿವೆ ಎಂದು ಹೇಳಲಾಗಿದೆ.
ಪೋಸ್ಟ್ ಕುರಿತು ಪ್ರತಿಕ್ರಿಯಿಸಿದ ಕ್ಯಾಪಿಟಲ್ ಮೈಂಡ್ನ ಸಂಸ್ಥಾಪಕ ಮತ್ತು ಸಿಇಒ ದೀಪಕ್ ಶೆಣೈ ಅವರು ತಮ್ಮ ಲೆಕ್ಕಾಚಾರವನ್ನು ಹೀಗೆ ವಿವರಿಸುತ್ತಾರೆ. ಈ ಯಜಮಾನರ ಬಳಿ 27 ಸಾವಿರ L&T ಷೇರುಗಳಿವೆ ಎಂದು ಹೇಳಲಾಗಿದ್ದು, ಇದರ ಮೌಲ್ಯ ಸುಮಾರು 8 ಕೋಟಿ ರೂ. ಅದೇ ರೀತಿ ಅವರ ಬಳಿ ಇರುವ ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳ ಮೌಲ್ಯ ಸುಮಾರು 3.2 ಕೋಟಿ ರೂ., ಕರ್ಣಾಟಕ ಬ್ಯಾಂಕ್ ಷೇರುಗಳ ಮೌಲ್ಯ ಸುಮಾರು 10 ಲಕ್ಷ ರೂ. ಈ ಲೆಕ್ಕಾಚಾರದ ಪ್ರಕಾರ, ಷೇರುಗಳ ಒಟ್ಟು ಮೌಲ್ಯ 11 ಕೋಟಿ ರೂ. ಎಂದು ತಿಳಿಸಿದ್ದಾರೆ.
ವಿಡಿಯೋದಲ್ಲಿ ವ್ಯಕ್ತಿ ಹೇಳಲಾಗುತ್ತಿರುವುದು ನಿಜವಾಗಿದ್ದರೆ, ವಯಸ್ಸಾದ ವ್ಯಕ್ತಿಯ ನಿವ್ವಳ ಮೌಲ್ಯವು ಕೋಟಿ ರೂ. ಆಗಿರುತ್ತದೆ. ಇದೇ ಕಾರಣಕ್ಕಾಗಿ, ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಅವರನ್ನು ಶೇರ್ವಾಲೆ ಬಾಬಾ ಎಂದು ಸಂಬೋಧಿಸುತ್ತಿದ್ದಾರೆ. ಓರ್ವ ಬಳಕೆದಾರನು ಲಾಭಾಂಶದಿಂದ ಗಳಿಸುವ ಗಣಿತ ಸಹ ವಿವರಿಸಿದ್ದಾನೆ. ಬಳಕೆದಾರರು ಷೇರುಗಳ ಸಂಖ್ಯೆಗೆ ಅನುಗುಣವಾಗಿ ಲೆಕ್ಕ ಹಾಕಿದರು, ಲಾಭಾಂಶದಿಂದ ಸುಲಭವಾಗಿ ಲಕ್ಷ ಲಕ್ಷಗಳನ್ನು ಗಳಿಸುತ್ತಾರೆ ಎಂದು ಹೇಳಿದರು.