ನ್ಯೂಸ್ ನಾಟೌಟ್ : ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ (Congress Guarantee Scheme) ಅನ್ನಭಾಗ್ಯ ಯೋಜನೆ ಕೂಡ ಒಂದು. (Anna Bhagya Scheme) ಈ ಪ್ರಯುಕ್ತ 10 ಕೆ.ಜಿ. ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿತ್ತು.ಅಧಿಕಾರಕ್ಕೆ ಬಂದ ಬಳಿಕ ಕೆಲವು ಸಮಸ್ಯೆಗಳಿಂದಾಗಿ 5 ಕೆ.ಜಿ. ಅಕ್ಕಿಯ ಬದಲಾಗಿ ಹಣವನ್ನು ವರ್ಗಾವಣೆ ಮಾಡುತ್ತಲಿತ್ತು.ಇನ್ಮುಂದಕ್ಕೆ ಆ ಧನ ಭಾಗ್ಯಕ್ಕೆ ಬ್ರೇಕ್ ಹಾಕಲಿದೆ..!
ಮುಂದಿನ ಅಕ್ಟೋಬರ್ ತಿಂಗಳಿನಿಂದ ಧನಭಾಗ್ಯ ಇರೋದಿಲ್ಲ.ಅದರ ಬದಲಾಗಿ ಕೇಂದ್ರ ಸರ್ಕಾರದ ಐದು ಕೆ.ಜಿ. ಅಕ್ಕಿಯ ಜತೆ ರಾಜ್ಯ ಸರ್ಕಾರವೂ 5 ಕೆ.ಜಿ. ಅಕ್ಕಿಯನ್ನು ಸೇರಿಸಿ ವಿತರಣೆ (5 kg Distribution of rice) ಮಾಡಲು ಮುಂದಾಗಿದೆ. ಈ ಬಗ್ಗೆ ಸ್ವತಃ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರೋ ಮುಂಚೆ ಹೇಳಿರುವಂತೆ ಮೂಮದಿನ ತಿಂಗಳಿಂದ ೧೦ ಕೆಜಿ ಅಕ್ಕಿ ಸಿಗುವಂತೆ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗುತ್ತಿದೆ.ಈ ಹಿಂದೆಯೇ ಕೇಂದ್ರ ಸರ್ಕಾರದ ಬಳಿ ಹೆಚ್ಚುವರಿ ಅಕ್ಕಿಗಾಗಿ ಬೇಡಿಕೆ ಇಟ್ಟಿದ್ದ ರಾಜ್ಯ ಸರ್ಕಾರ ಆಹಾರ ಭದ್ರತೆ ಹಿನ್ನೆಲೆಯಲ್ಲಿ ಕೇಂದ್ರವು ಕರ್ನಾಟಕದ ಅಕ್ಕಿ ಬೇಡಿಕೆಯನ್ನು ತಿರಸ್ಕಾರ ಮಾಡಿತ್ತು. ಕೊನೆಗೆ ಬೇರೆ ರಾಜ್ಯಗಳ ಜತೆಗೆ ಸರ್ಕಾರ ಮಾತುಕತೆ ನಡೆಸಿತ್ತು.
ರಾಜ್ಯ ಸರ್ಕಾರದಿಂದ ಕೊಡುವ ಐದು ಕೆಜಿ ಬದಲಾಗಿ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ 170 ರೂಪಾಯಿಯನ್ನು ರಾಜ್ಯ ಸರ್ಕಾರದಿಂದ ನೇರವಾಗಿ ಹಾಕುತ್ತಿತ್ತು.ಇದೀಗ ಇನ್ಮುಂದೆ ಹಣದ ಬದಲಾಗಿ ಅಕ್ಕಿ ಸಿಗಲಿದೆ. ಸೆಪ್ಟೆಂಬರ್ ತಿಂಗಳ ಹಣವನ್ನು ಡಿಬಿಟಿ ಮೂಲಕ ಫಲಾನುಭವಿಗಳಿಗೆ ತಲುಪಿಸುವ ಪ್ರಕ್ರಿಯೆಗೆ ಆಹಾರ ಇಲಾಖೆ ಈಗಾಗಲೇ ಚಾಲನೆ ನೀಡಿದೆ ಎನ್ನಲಾಗಿದೆ.
ತೆಲಂಗಾಣ ಸರ್ಕಾರದ ಜತೆ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಮಾತುಕತೆ ನಡೆಸಿದ್ದಾರೆ. ಎಫ್ಸಿಐ ದರದಲ್ಲಿ ಅಕ್ಕಿ ಖರೀದಿಗೆ ರಾಜ್ಯ ಸರ್ಕಾರದ ಚಿಂತನೆ ನಡೆಸಿದೆ. ಅಕ್ಕಿ ಪೂರೈಕೆಗೆ ದರ ಪೈನಲ್ ಆಗಿದ್ದು, ಸಚಿವ ಮುನಿಯಪ್ಪ ನೀಡಿರುವ ಹೇಳಿಕೆ ಅನ್ವಯ ಈ ಮಾತುಕತೆ ಕೂಡಾ ಫೈನಲ್ ಆಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮುಂದಿನ ತಿಂಗಳು ಪಡಿತರ ಮೂಲಕ ಫಲಾನುಭವಿಗಳು 10 ಕೆ.ಜಿ. ಅಕ್ಕಿಯನ್ನು ಪಡೆಯಲಿದ್ದಾರೆ.