ನ್ಯೂಸ್ ನಾಟೌಟ್ : ಕ್ಷುಲ್ಲಕ ಕಾರಣಕ್ಕಾಗಿ ಅತ್ತೆ ಮೇಲೆ ಅಳಿಯ ಥಳಿಸಿದ್ದಾನೆ ಎಂದು ಆರೋಪವಿರುವ ಘಟನೆ ಕೊಡಗಿನ ವಿರಾಜಪೇಟೆ ಸಮೀಪ ವರದಿಯಾಗಿದೆ.
ತಿರುಮಲೇಶ್ ಎಂಬಾತನೇ ಅತ್ತೆ ಮೇಲೆ ಹ*ಲ್ಲೆ ನಡೆಸಿದ ಆರೋಪದ ಮೇರೆ ಬಂಧನಕ್ಕೊಳಗಾದ ವ್ಯಕ್ತಿ.ರಾಣಿ ಹ*ಲ್ಲೆಗೊಳಗಾದ ಮಹಿಳೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ನಿವಾಸಿ ತಿರುಮಲೇಶ್ ಎಂಬುವವರು ಅಮ್ಮತ್ತಿಯ ರಾಣಿ ಎಂಬುವವರ ಮಗಳನ್ನು ಕೆಲವು ವರ್ಷಗಳ ಹಿಂದೆ ವಿವಾಹವಾಗಿದ್ದರು.ಸೋಮವಾರ ಅತ್ತೆಯ ಮನೆಗೆ ಬಂದಿದ್ದಾಗ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.ಈ ವೇಳೆ ಅತ್ತೆ ಮೇಲೆ ಕ*ತ್ತಿಯಿಂದ ಹ*ಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಗಾಯಗೊಂಡ ರಾಣಿ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.